ಹಾಗೆಯೇ ಲೆಜಂಡರಿ ಆಟಗಾರ ಯುವರಾಜ್ ಸಿಂಗ್ ಬಗ್ಗೆ ಮಾತನಾಡಿದ ವೈಭವ್ ಸೂರ್ಯವಂಶಿ, ಯುವಿ ಪಾಜಿ ನನ್ನ ಆದರ್ಶ ಎಂದರೆ ಸುಳ್ಳಲ್ಲ, ಅವರೊಟ್ಟಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ, ಇವರೊಂದಿಗೆ ಕಳೆದ ಸಮಯ ಅಮೂಲ್ಯವಾಗಿದ್ದು, ಸಾಕಷ್ಟು ಮಾಹಿತಿಯನ್ನು ನನಗೆ ತಿಳಿಯಲು-ಕಲಿಯಲು ಸಹಕಾರಿಯಾಗಿದೆ ಎಂದು ವೈಭವ್, ಯುವರಾಜ್ ಸಿಂಗ್ ಬಗ್ಗೆ ಮೆಚ್ಚುಗೆ ವ್ತಕ್ತಪಡಿಸಿದ್ದಾರೆ.