ಅಯೋಧ್ಯಾ ರಾಮ ಮಂದಿರ ದೇಣಿಗೆ ಅಕ್ರಮ ಪ್ರಕರಣ : ಸುಪ್ರೀಂ ಕೋರ್ಟ್ನಿಂದ ಮಹತ್ವದ ಆದೇಶ; ತನಿಖಾ ವರದಿ ಸಲ್ಲಿಸಲು ಎಸ್ಐಟಿಗೆ ಸೂಚನೆ! Supreme Court in Ayodhya Ram Mandir
ಅಯೋಧ್ಯಾ ರಾಮ ಮಂದಿರ ದೇಣಿಗೆ ಅಕ್ರಮ ಆರೋಪ ಪ್ರಕರಣ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಯೋಧ್ಯಾ ರಾಮ ಮಂದಿರ ದೇಣಿಗೆ ಅಕ್ರಮ ಆರೋಪ
ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಇದುವರೆಗೆ ನಡೆದಿರುವ ಎಸ್‌ಐಟಿ ತನಿಖಾ ವರದಿಯನ್ನು ಸಲ್ಲಿಸುವಂತೆ ನ್ಯಾಯಪೀಠ ಸೂಚನೆ
ನವದೆಹಲಿ: ಕಳೆದ ಕೆಲ ದಿನಗಳಿಂದ ಅಯೋಧ್ಯಾ ರಾಮ ಮಂದಿರದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಈ ಕುರಿತು ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ಯನ್ನು ರಚನೆ ಮಾಡಿತ್ತು.
ಈ ಪ್ರಕರಣದ ಕುರಿತು ದಾಖಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court in Ayodhya Ram Mandir) ಸೋಮವಾರ (ಜು.13) ಇಲ್ಲಿವರೆಗೆ ನಡೆದಿರುವ ತನಿಖೆಯ ಮಾಹಿತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸುವಂತೆ ಸೂಚಿಸಿದೆ. ಈ ಆದೇಶವನ್ನು ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್, ಜಸ್ಟೀಸ್ ಜಾಯ್ಮಲ್ಯ ಬಾಗ್ಚಿ ಮತ್ತು ವಿ ಮೊಹ್ನಾ ಅವರಿದ್ದ ನ್ಯಾಯಪೀಠ ಆದಷ್ಟು ಬೇಗ ಈ ವರದಿ ನ್ಯಾಯಪೀಠದ ಮುಂದೆ ಸಲ್ಲಿಸಬೇಕೆಂದು ಹೇಳಿದೆ.
ಈ ಆದೇಶಕ್ಕೆ ಉತ್ತರಿಸಿದ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರಿ ಜನರಲ್ ತುಷಾರ್ ಮೆಹ್ತಾ, ಎಸ್‌ಐಟಿ ನಡೆಸಿರುವ ತನಿಖೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಲಾಗುವುದೆಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಸಿಬಿಐ ತನಿಖೆಯಾಗಲಿ!
ಅಜಯ್ ಕುಮಾರ್ ರೈ, ದಿನೇಶ್ ಕುಮಾರ್ ಯಾದವ್ ಜೊತೆಗೆ ಅರ್ಜಿ ಸಲ್ಲಿಸಿರುವ ನರೇಂದ್ರ ಕುಮಾರ್ ಗೋಸ್ವಾಮಿ, ಅಯೋಧ್ಯೆ ರಾಮ ಮಂದಿರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಅಕ್ರಮದ ಪ್ರಕರಣವನ್ನು ರಾಜ್ಯದ ಎಸ್‌ಐಟಿ ಬದಲಿಗೆ ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐ ವಿಚಾರಣೆ ನಡೆಸಲಿ ಎಂದು ಕೇಳಿದ್ದಾರೆ.
ಇದರ ಜೊತೆಗೆ ದೇವಸ್ಥಾನದ ದೇಣಿಗೆ ಸೇರಿದಂತೆ ಇತರೆ ಆರ್ಥಿಕ ಸಂಬಂಧಿ ಸಂಗತಿಗಳ ಕುರಿತು, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅವರು ಒಂದು ಆಡಿಟ್ ಅನ್ನು ನಡೆಸಲಿ ಎಂದು ನ್ಯಾಯಪೀಠದ ಎದುರು ಮನವಿ ಮಾಡಿದ್ದಾರೆ.
ಹೀಗಾಗಿ ಸುಪ್ರೀಂ ಕೋರ್ಟ್ ಎಸ್‌ಐಟಿ ಇಲ್ಲಿವರೆಗೆ ನಡೆಸಿರುವ ತನಿಖೆ ಮಾಹಿತಿಯನ್ನು ಮೊದಲು ನ್ಯಾಯಾಲಯಕ್ಕೆ ನೀಡಿಲಿ ಎಂಬ ಆದೇಶವನ್ನು ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 20 ರಂದು ನಡೆಸುವುದಾಗಿ ತಿಳಿಸಿದೆ, (ಏಜನ್ಸೀಸ್).