ವಿಚಾರಣೆಯ ಸಮಯದಲ್ಲಿ, ತೃಣಮೂಲ ಕಾಂಗ್ರೆಸ್ ನಾಯಕಿ ಪರ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ತಮ್ಮ ಕಕ್ಷಿದಾರರಿಗೆ ವರ್ಚುವಲ್ ಆಗಿ ಹಾಜರಾಗಲು ಅವಕಾಶ ನೀಡಬೇಕು. ಈ ಹಿಂದೆ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ, ಕೆಲವರು ಮೊಟ್ಟೆ ದಾಳಿ ನಡೆಸಿದ್ದರು. ಅದನ್ನು ಪೊಲೀಸರು ತಡೆಯುವಲ್ಲಿ ವಿಫಲರಾಗಿದ್ದರು ಎಂದು ವಾದಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಪೀಠ, ನೀವು ರಾಜಕೀಯಕ್ಕೆ ಧುಮುಕಿದ ಮೇಲೆ ಈ ಮೊಟ್ಟೆದಾಳಿಗೆ ಹೆದರುತ್ತಿದ್ದಿರಾ? ನಮ್ಮ ಸ್ವಾತಂತ್ರ ಹೋರಾಟಗಾರರು ಬ್ರಿಟಿಷರು ಚಲಾಯಿಸಿದ ಗುಂಡಿಗೆ ತಮ್ಮ ಎದೆಯೊಡ್ಡಿದ್ದರು, ನ್ಯಾಯಾಲಯದ ಮುಂದೆ ಈ ರೀತಿಯ ಅರ್ಜಿಗಳು ಬರಬಾರದು ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದ್ದರು (ಏಜೆನ್ಸೀಸ್).