ಟ್ರಾಫಿಕ್ ಪೊಲೀಸರ ಹೊಸ ಅವತಾರ: ತಲೆಗೆ ಎಸಿ ಹೆಲ್ಮೆಟ್, ಕೈಯಲ್ಲಿ ಫ್ಯಾನ್; ವಿಡಿಯೋ ವೈರಲ್​! Delhi Traffic Police

ಎಸಿ ಹೆಲ್ಮೆಟ್ ಹಾಗೂ ಕೈಯಲ್ಲಿ ಫ್ಯಾನ್ ಹಿಡಿದು ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸ್​
ಎಸಿ ಹೆಲ್ಮೆಟ್ ಹಾಗೂ ಕೈಯಲ್ಲಿ ಫ್ಯಾನ್ ಹಿಡಿದು ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸ್​
Published on
ನವದೆಹಲಿ: ದೇಶದೆಲ್ಲಡೆ ಬಿಸಿಲಿನ ಕಾವು ಏರಿಕೆ ಕಾಣುತ್ತಲೇ ಇದೆ. ಜಗತ್ತಿನ ನೂರು ಅಧಿಕ ಉಷ್ಣಾಂಶ ಪ್ರದೇಶಗಳಲ್ಲಿ ಸುಮಾರು 95 ಪ್ರದೇಶಗಳು ಭಾರತದಲ್ಲಿಯೇ ಇದೆ ಎಂಬ ವರದಿ ಸಹ ಹೊರಬಿದ್ದಿದೆ. ಇನ್ನು ಇಷ್ಟೊಂದು ಬಿಸಿಲನ್ನು ಸಹಿಸಿಕೊಂಡು ರಸ್ತೆಯಲ್ಲಿ ಕೆಲಸ ಮಾಡಲು ಟ್ರಾಫಿಕ್​ ಪೊಲೀಸ (Delhi Traffic Police) ರಿಗೆ ಕಷ್ಟವಾಗುತ್ತಿರುವ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಹೊಸ ಪ್ರಯೋಗವೊಂದನ್ನು ಕೈಗೊಂಡಿದೆ.

ತಲೆಗೆ ಎಸಿ ಹೆಲ್ಮೆಟ್​; ಕೈಯಲ್ಲಿ ಫ್ಯಾನ್​!

ರಾಷ್ಟ್ರ ರಾಜಧಾನಿಯಲ್ಲಿ ದಿನ ಕಳೆದಂತೆ ಸೂರ್ಯ ದೇವನ ಕೋಪ ತೀವ್ರವಾಗುತ್ತಿರುವ ಹಿನ್ನಲೆ, ದಿನದ ಬಹುಪಾಲು ಸಮಯವನ್ನು ರಸ್ತೆಯಲ್ಲಿಯೇ ಕಳೆಯುವ ಟ್ರಾಫಿಕ್​ ಪೊಲೀಸರಿಗೆ ಎಸಿ ಚಾಲಿತ ಹೆಲ್ಮೆಟ್ ಹಾಗೂ ಕೈಗೆ ಒಂದು ಪೋರ್ಟಬಲ್ ಫ್ಯಾನ್‌ಗಳನ್ನು ನೀಡಲಾಗಿದೆ. ಇದರಿಂದ ಬಿಸಿಲನ್ನು ಸಂಪೂರ್ಣವಾಗಿ ಎದುರಿಸಲು ಸಾಧ್ಯವಾಗದಿದ್ದರೂ, ಸ್ವಲ್ಪವಾದರೂ ತಡೆಗಟ್ಟಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​!

ಸದ್ಯ ದೆಹಲಿಯಲ್ಲಿ ಸುಮಾರು 43 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಈ ಬಿಸಿಲಿನಲ್ಲಿ ಕೆಲಸ ಮಾಡುವುದು ಸಾಮಾನ್ಯ ಸಂಗತಿಯಲ್ಲ. ಇತ್ತೀಚೆಗೆ ಎಸಿ ​ಹೆಲ್ಮೆಟ್​ ಧರಿಸಿ ಟ್ರಾಫಿಕ್​ ಕಂಟ್ರೋಲ್​ ಮಾಡುತ್ತಿರುವ ಪೊಲೀಸ್​ ಒಬ್ಬರ ವಿಡಿಯೋ ವೈರಲ್​ ಆದ ನಂತರ ಸರ್ಕಾರ ಈ ರೀತಿಯ ಕ್ರಮವೊಂದನ್ನು ಕೈಗೊಂಡಿದೆ ಎಂದು ತಿಳಿದು ಬಂದಿದೆ.
ನೆಟ್ಟಿಗರ ರಿಯಾಕ್ಷನ್​ ಹೇಗಿದೆ?
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಕೈಗೆ ಕೆಲಸ ಕೊಟ್ಟಿದ್ದಾರೆ. ಅಂತೂ ದೆಹಲಿಯ ಬಿಸಿಲನ್ನು ಎದುರಿಸಲು ಹೆಲ್ಮೆಟ್​ಗೆ ಎಸಿ ಕೂರಿಸುವ ಪ್ರಯೋಗ ಮಾಡಬೇಕಾಯಿತು ಎಂದು ಒಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.
ಪಾಪ ಈ ಬಿಸಿನಲ್ಲಿ ಟ್ರಾಫಿಕ್​ ಪೊಲೀಸರು ಹೇಗೆ ಕೆಲಸ ಮಾಡುತ್ತಾರೋ ಏನೋ? ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್​ ಮಾಡಿದ್ದಾರೆ. ಆದರೆ ನಮ್ಮ ದೆಹಲಿ ಬಿಸಿಲಿಗೆ ಈ ಎಸಿ ಕೆಲಸ ಮಾಡುವುದು ಯಾಕೋ ಡೌಟು ಎಂದು ಮತ್ತೊಬ್ಬರು ಅನುಮಾನ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net