ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಜಿರಳೆ: ಭಾವನಾತ್ಮಕವಾಗಿ ಪರಿಗಣಿಸುವ ಅಗತ್ಯವಿಲ್ಲ; ಸಿಜೆಐ ಸೂರ್ಯಕಾಂತ್​ ಅಭಿಮತ! CJI SuryaKant on Cockroach Janata Party

ಇದನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ: ಸಿಜೆಐ ಸೂರ್ಯಕಾಂತ್
ಇದನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ: ಸಿಜೆಐ ಸೂರ್ಯಕಾಂತ್
Published on

ಪ್ರಮುಖ ಮುಖ್ಯಾಂಶಗಳು

  • ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಜಿರಳೆ ವಿವಾದ
  • ಇದನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ: ಸಿಜೆಐ ಸೂರ್ಯಕಾಂತ್
  • ಕಾಕ್ರೋಚ್​ ಜನತಾ ಪಾರ್ಟಿ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಕಾಕ್ರೋಚ್​ ಜನತಾ ಪಾರ್ಟಿ ಎಂಬ ಆನ್​ಲೈನ್​ ಅಭಿಯಾನ ​ ಪ್ರಾರಂಭವಾದ ಹಿನ್ನಲೆ ಈ ಪಕ್ಷದ ಮೇಲೆ ಸಿಬಿಐ ತನಿಖೆ ಆಗ್ರಹಿಸಿ ಸುಪ್ರೀಂ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಸೋಮವಾರ (ಮೇ.25) ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನಾಯಮೂರ್ತಿ ಜ. ಸೂರ್ಯಕಾಂತ್ ​(CJI SuryaKant on Cockroach Janata Party) ಅವರ ನ್ಯಾಯಪೀಠ, ಈ ಅಭಿಯಾನವನ್ನು ಅಷ್ಟು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ ಎಂದು ಹೇಳಿದೆ.
ವಿಚಾರಣೆ ಸಂದರ್ಭದಲ್ಲಿ ವಕೀಲ ಎನ್.ಕೆ. ಗೋಸ್ವಾಮಿ, ಈ ಕಾಕ್ರೋಚ್​ ಜನತಾ ಪಕ್ಷವು ನ್ಯಾಯಾಂಗದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದೆ ಎಂದು ಹೇಳಿದಾಗ ಮುಖ್ಯನಾಯಮೂರ್ತಿ ಜ. ಸೂರ್ಯಕಾಂತ್​, ಜಾಯ್ಮಲ್ಯ ಬಾಗ್ಚಿ ಮತ್ತು ವಿ.ಎಂ ಪಾಂಚೋಲಿ ಅವರ ನ್ಯಾಯಪೀಠ ಈ ವಿಷಯವನ್ನು ಭಾವನಾತ್ಮಕವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಏನಿದು ಕಾಕ್ರೋಚ್​ ವಿವಾದ?
ಕೆಲ ದಿನಗಳ ಹಿಂದೆ ರಾಜಾ ಚೌಧರಿ ಎನ್ನುವವರು ನ್ಯಾಯಾಂಗದಲ್ಲಿ ನಕಲಿ ಪದವಿ ಪಡೆದ ವಕೀಲರ ಸಂಖ್ಯೆ ಹೆಚ್ಚಾಗುತ್ತಿದೆ, ಇದರ ಕುರಿತು ಕ್ರಮ ಕೈಗೊಳ್ಳಬೇಕೆಂದು ಪಿಐಎಲ್​ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ ಅವರ ನ್ಯಾಯಪೀಠ, ನಕಲಿ ಪದವಿ ಪಡೆದ ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ, ಇವರು ತಮ್ಮನ್ನು ತಾವೇ ಸೋಷಿಯಲ್​ ಮೀಡಿಯಾ ಇನ್ಫ್ಲ್ಯೂಎನ್ಸರ್​ಗಳೆಂದು, ಆರ್​ಟಿಐ ಕಾರ್ಯಕರ್ತರೆಂದು ಭಾವಿಸಿದ್ದಾರೆ ಎಂದು ಹೇಳಿದ್ದರು.
ನಂತರ ಈ ಮಾತು ಬೇರೆ-ಬೇರೆ ರೂಪ ಪಡೆದು ಸಿಜೆಐ ಅವರು ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಿದ್ದಾರೆ ಎನ್ನುವ ರೀತಿ ಬಿಂಬಿತವಾಗಿ ಕಾಕ್ರೋಚ್​ ಜನತಾ ಪಾರ್ಟಿ ಎಂಬ ಸೋಷಿಯಲ್​ ಮೀಡಿಯಾ ಅಭಿಯಾನ ಪ್ರಾರಂಭವಾಗಿದೆ.
ಸದ್ಯ ಈ ಕಾಕ್ರೋಚ್​ ಜನತಾ ಪಾರ್ಟಿಯ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸುಮಾರು 2 ಕೋಟಿ ಜನ ಫಾಲೋವರ್ಸ್​ಗಳಿದ್ದಾರೆ. ಇದರ ಸಂಖ್ಯೆ ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷಕ್ಕಿರುವ ಸೋಷಿಯಲ್​ ಮೀಡಿಯಾ ಫಾಲೋವರ್ಸಗಳನ್ನು ಮೀರಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net