ಪ್ರಧಾನಿ ಮೋದಿಗೆ ಜಗತ್ತೇ ಗೌರವಿಸುತ್ತೆ: ವಿದೇಶದಲ್ಲಿರೋ ಯೂಟ್ಯೂಬರ್ ನಮಗೆ ಬುದ್ಧಿ ಹೇಳಬೇಕಿಲ್ಲ; ಧ್ರುವ್​ ರಾಠಿಗೆ ರೂಪಾಲಿ ಗಂಗೂಲಿ ಕೌಂಟರ್​! Rupali Ganguly on Dhruv Rathee

ವಿದೇಶದಲ್ಲಿರುವ ಯೂಟ್ಯೂಬರ್​​ ನಮಗೆ ಪಾಠ ಮಾಡುವ ಅಗತ್ಯವಿಲ್ಲ: ರೂಪಾಲಿ ಗಂಗೂಲಿ
ವಿದೇಶದಲ್ಲಿರುವ ಯೂಟ್ಯೂಬರ್​​ ನಮಗೆ ಪಾಠ ಮಾಡುವ ಅಗತ್ಯವಿಲ್ಲ: ರೂಪಾಲಿ ಗಂಗೂಲಿ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ಮೋದಿಗೆ ವಿದೇಶದಲ್ಲಿ ನಿರಂತರ ಅವಮಾನವಾಗಲಿ ಎಂದಿದ್ದ ಧ್ರುವ್​ ರಾಠಿ
  • ವಿದೇಶದಲ್ಲಿರುವ ಯೂಟ್ಯೂಬರ್​​ ನಮಗೆ ಪಾಠ ಮಾಡುವ ಅಗತ್ಯವಿಲ್ಲ: ರೂಪಾಲಿ ಗಂಗೂಲಿ
  • ನಮ್ಮ ದೇಶದ ಪ್ರಧಾನಿಗೆ ವಿದೇಶದಲ್ಲಿ ಬಹಳ ಗೌರವವಿದೆ
  • ನಮ್ಮ ದೇಶಕ್ಕೆ ಯಾರು ಉತ್ತಮ ಎಂದು ಇಲ್ಲಿಯ ಜನ ನಿರ್ಧರಿಸುತ್ತಾರೆ
ಮುಂಬೈ: ಭಾರತದ ಪ್ರಧಾನಿ ನರೇಂದ್ರ ಮೋದಿ ನಾರ್ವೆ ಪ್ರವಾಸದ ವೇಳೆ ಪತ್ರಕರ್ತೆಯೊಬ್ಬಳ ಪ್ರಶ್ನೆಗೆ ಉತ್ತರಿಸದ ಕಾರಣಕ್ಕೆ, ಮೋದಿ ಹೊದಲ್ಲೆಲ್ಲಾ ಹೀಗೆ ಅವಮಾನ ಎದುರಿಸಬೇಕೆಂದು ಧ್ರುವ್​ ರಾಠಿ ನೀಡಿರುವ ಹೇಳಿಕೆಗೆ ನಟಿ ರೂಪಾಲಿ ಗಂಗೂಲಿ (Rupali Ganguly on Dhruv Rathee) ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಧ್ರುವ್​ ರಾಠಿ ಬರೆದಿದ್ದೇನು?

ಭಾರತದ ಪ್ರಧಾನಿ ನರೇಂದ್ರ ಮೋದಿ ನಾರ್ವೆ ಪರ್ತಕರ್ತೆಯ ಪ್ರಶ್ನೆಗೆ ಉತ್ತರಿಸಿದ ಕುರಿತು ಅಪಹಾಸ್ಯ ಮಾಡಿದ್ದ ಧ್ರುವ್​ ರಾಠಿ, ಮೇ. 19 ರಂದು, ಮೋದಿ ಹೋದಲ್ಲೆಲ್ಲಾ ಅವಮಾನಕ್ಕೆ ಗುರಿಯಾಗಬೇಕು, ಕಳೆದ 12 ವರ್ಷಗಳಿಂದ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದೆ ಪ್ರಧಾನಿ ಹುದ್ದೆಯಲ್ಲಿದ್ದಾರೆ.
ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸುವಲ್ಲಿ ಹಾಗೂ ಪಾರದರ್ಶಕ ಆಡಳಿತ ನಡೆಸುವಲ್ಲಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ಬರೆದು ಕೊಂಡಿದ್ದರು. ಹಾಗೆಯೇ ನಾರ್ವೆ ಪರ್ತಕರ್ತೆ ಜೊತೆ ನಡೆದ ಘಟನೆಯನ್ನು ಉದ್ದೇಶಿಸಿ ಧ್ರುವ್​, ನಾನು ವಿದೇಶಿ ಮಾಧ್ಯಮಗಳಿಗೆ ಈ ಮೋದಿ ಎಲ್ಲಿ ಹೋದರು ಇತನಿಗೆ ಅವಮಾನ ಮಾಡಿ ಎಂದು ಕೇಳಿಕೊಳ್ಳುತ್ತೇನೆಂದು ಹೇಳಿದ್ದರು.

ರೂಪಾಲಿ ರಿಯಾಕ್ಷನ್​ ಏನು?

ಧ್ರುವ್​ ರಾಠಿ ಹೇಳಿಕೆಗೆ ಕೌಂಟರ್​ ಕೊಟ್ಟಿರುವ ರೂಪಾಲಿ, ಲಕ್ಷಾಂತರ ಭಾರತೀಯರು ಅವರನ್ನು ಗೌರವಿಸುತ್ತಾರೆ, ವಿದೇಶದಲ್ಲಿ ಕುಳಿತಿರುವ ಯೂಟ್ಯೂಬರ್ ಅವರ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ನಮ್ಮ ದೇಶದ ಪ್ರಧಾನಿಗಳಿಗೆ ವಿದೇಶಗಳು ಅಲ್ಲಿಯ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತವೆ. ಅವರಿಗೆ ವಿದೇಶದಲ್ಲಿ ಅವಮಾನವಾಗಲಿ ಎಂದು ಹೇಳುವುದು ತಮಾಷೆಯಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ ಅವರು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾಗಿ ಮೂರನೇ ಭಾರಿ ಆಯ್ಕೆಯಾಗಿದ್ದಾರೆ. ಕಳೆದ 25 ವರ್ಷಗಳಿಂದ ಅಧಿಕಾರ ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ. ನಮ್ಮ ದೇಶದ ಕೋಟ್ಯಾಂತರ ಜನ ಅವರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುತ್ತಾರೆ ಎಂದು ಹೇಳಿದ್ದಾರೆ.
ನಮ್ಮ ದೇಶಕ್ಕೆ ಯಾರು ಬೇಕು? ಯಾರು ಬೇಡ? ಎಂದು 140 ಕೋಟಿ ಭಾರತೀಯರು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ವಿದೇಶದಲ್ಲಿ ಕುಳಿತಿರುವ ಯಾರೋ ಯೂಟ್ಯೂಬರ್​ನ ಅಗತ್ಯವಿಲ್ಲ ಎಂದು ರೂಪಾಲಿ, ಧ್ರುವ್​ ರಾಠಿ ವಿರುದ್ಧ ತಮ್ಮ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನಾರ್ವೆಯಲ್ಲಿ ಆಗಿದ್ದೇನು?

ಕೆಲ ದಿನಗಳ ಹಿಂದೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ನಾರ್ವೆ ದೇಶದ ಪ್ರವಾಸದಲ್ಲಿದ್ದಾಗ ಓಸ್ಲೋನಲ್ಲಿ ಅಲ್ಲಿಯ ಪ್ರಧಾನಿ ಜೋನಸ್ ಗಹರ್ ಸ್ಟೋರೆ (Jonas Gahr Støre) ಜೊತೆಗೆ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.
ನಂತರ ಪ್ರಧಾನಿ ಮೋದಿ ಹಿಂತಿರುಗಿದ್ದ ವೇಳೆ ಹೆಲ್ಲೆ ಲಿಂಗ್ (Helle Lyng) ಎಂಬ ನಾರ್ವೆ ದೇಶದ ಪರ್ತಕರ್ತೆ, ಪ್ರಧಾನಿ ಮೋದಿ ಅವರೇ, ನೀವು ಜಗತ್ತಿನ ಅತ್ಯಂತ ಮುಕ್ತ ಪತ್ರಿಕಾ ಮಾಧ್ಯಮದಿಂದ ಕೆಲವು ಪ್ರಶ್ನೆಗಳನ್ನು ಏಕೆ ಕೇಳಬಾರದು? ಎಂದು ಪ್ರಶ್ನಿಸಿದಳು. ಆದರೆ ಮೋದಿ ಈ ಪ್ರಶ್ನೆಗೆ ಉತ್ತರಿಸದೆ ಮರಳಿದರು.
ನಂತರ ಈ ಕುರಿತು ಸೋಷಿಯಲ್​ ಮೀಡಿಯಾನಲ್ಲಿ ಪೋಸ್ಟ್ ಮಾಡಿದ ಹೆಲ್ಲೆ ಲಿಂಗ್ (Helle Lyng) ಭಾರತದ ಪ್ರಧಾನಿ ನನ್ನ ಪ್ರಶ್ನೆಗೆ ಉತ್ತರಿಸದೆ ಹೋದರು, ನಾನು ಅವರಿಂದ ಇದನ್ನು ನೀರಿಕ್ಷೆ ಮಾಡಿರಲಿಲ್ಲ ಎಂದು ಬರೆದುಕೊಂಡಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net