ಖಾಸಗಿ ಕಂಪನಿಯಲ್ಲಿ ಕಾರ್ಪೊರೇಟ್ ಜಿಹಾದ್: ಲೈಂಗಿಕ ಕಿರುಕುಳ, ಮತಾಂತರಕ್ಕೆ ಸಂಚು; ಪ್ರಕರಣ ದಾಖಲು! Corporate Jihad in Nashik
ನಾಸಿಕ್‌ನಲ್ಲಿ ಕಾರ್ಪೋರೆಟ್ ಜಿಹಾದ್ ಪ್ರಕರಣ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಾಸಿಕ್‌ನಲ್ಲಿ ಕಾರ್ಪೋರೆಟ್ ಜಿಹಾದ್ ಪ್ರಕರಣ
ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಕಿರುಕುಳ; ಬಲವಂತದ ಮತಾಂತರ
ಎಫ್.ಐ.ಆರ್ ದಾಖಲಿಸಿದ ಪೊಲೀಸರು 6 ಜನರ ಬಂಧನ
ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರಮುಖ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನಲ್ಲಿ ಹಲವಾರು ಮಹಿಳಾ ಉದ್ಯೋಗಿಗಳಿಗೆ ತಮ್ಮ ತಂಡದ ನಾಯಕರು (Team Leaders) ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಮತಾಂತರ (Corporate Jihad in Nashik) ಕ್ಕೆ ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಈ ಪ್ರಕರಣದ ಸುದ್ದಿ ಹೊರ ಬೀಳುತ್ತಿದ್ದಂತೆ ಭಾರಿ ವಿವಾದ ಭುಗಿಲೆದ್ದಿದ್ದು, ಇಲ್ಲಿವರೆಗೆ ಸುಮಾರು ಆರು ಜನರನ್ನು ಬಂಧಿಸಲಾದ ಕುರಿತು ಮಾಹಿತಿ ದೊರೆತಿದೆ. ಆಡಳಿತರೂಢ ಬಿಜೆಪಿ ಇದನ್ನು ಕಾರ್ಪೊರೇಟ್ ಜಿಹಾದ್ ಎಂದು ಬಣ್ಣಿಸಿದೆ.
ನಾಸಿಕ್ ಪೊಲೀಸ್ ಠಾಣೆತಯಲ್ಲಿ ದಾಖಲಾಗಿರುವ ಎಫ್.ಐ.ಆರ್ನಲ್ಲಿ ಆರೋಪಿತರು ಮಹಿಳಾ ನೌಕರರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಬಲವಂತದ ಮತಾಂತರಕ್ಕೆ ಮುಂದಾಗುತ್ತಿದ್ದರು ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಈ ಪ್ರಕ್ರಿಯೆ 2022 ರಿಂದ ಆರಂಭವಾಗಿದ್ದು, 18 ರಿಂದ 25 ವಯಸ್ಸಿನ ಹುಡುಗಿಯರನ್ನು ಈ ಜಾಲಕ್ಕೆ ಬೀಳಿಸಿಕೊಳ್ಳಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳನ್ನು ಆಸಿಫ್ ಅನ್ಸಾರಿ, ಶಫಿ ಶೇಖ್, ಶಾರುಖ್ ಖುರೇಷಿ, ರಜಾ ಮೆಮನ್, ತೌಸಿಫ್ ಅತ್ತರ್ ಮತ್ತು ಅಶ್ವಿನ್ ಚೈನಾನಿ ಎಂದು ಗುರುತಿಸಲಾಗಿದೆ.
ಕೆಲಸ ಕೊಡ್ತಿವಿ ನಮಾಜ್ ಒದಿ ಎನ್ನುತ್ತಿದ್ದರು: ಬಿಜೆಪಿ ಆರೋಪ
ಈ ಘಟನೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್, ಈ ಕಂಪನಿಯಲ್ಲಿರುವ ಮೂರು-ನಾಲ್ಕು ಮುಸ್ಲಿಂ ಯುವಕರು ಕೆಲಸಕ್ಕೆ ಬರುವ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಅವರಿಗೆ ಹೆಚ್ಚಿನ ಸಂಬಳ ಮತ್ತು ಖಾಯಂ ಕೆಲಸವನ್ನು ಕೊಡಿಸುವುದಾಗಿ ನಂಬಿಸಿ ಅವರಿಗೆ ನಮಾಜ್ ಓದುವಂತೆ, ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪೊಲೀಸ್ ಆಯುಕ್ತರು, ಸದ್ಯ ಎಫ್.ಐ.ಆರ್ನ್ನು ದಾಖಲಿಸಿದ್ದೆವೆ, ಮತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಇದನ್ನು ಬೇದಿಸಲು ಸುಮಾರು 12 ಜನ ಪೊಲೀಸರ ತಂಡವನ್ನು ಸಹ ನಿರ್ಮಿಸಿದ್ದೆವೆ. ನಾವು ಈ ಪ್ರಕರಣದಲ್ಲಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ಕೊಡಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ, (ಏಜನ್ಸೀಸ್).