ಕ್ಯಾನ್ಸರ್​ನಿಂದ ಮಗ.. ಆತ್ಮಹತ್ಯೆಗೆ ಮಗಳು..ಕಣ್ಮುಂದೆಯೇ ಮಕ್ಕಳ ಸಾವನ್ನು ಕಂಡಿದ್ದ ಆಶಾ ಭೋಸ್ಲೆ! Asha Bhosle Childrens

ಕಣ್ಮುಂದೆ ಮಕ್ಕಳ ಸಾವನ್ನು ನೋಡಿದ್ದ ಆಶಾ ಭೋಸ್ಲೆ
ಕಣ್ಮುಂದೆ ಮಕ್ಕಳ ಸಾವನ್ನು ನೋಡಿದ್ದ ಆಶಾ ಭೋಸ್ಲೆ
Published on

ಪ್ರಮುಖ ಮುಖ್ಯಾಂಶಗಳು

  • ಏಷ್ಯಾದ ನೈಟಿಂಗೇಲ್​ ಆಶಾ ಭೋಸ್ಲೆ (92) ನಿಧನ
  • ಇಂದು (ಏ.13) ಶಿವಾಜಿ ಪಾರ್ಕ್​ನಲ್ಲಿ ನಡೆಯಲಿರುವ ಅಂತ್ಯಕ್ರಿಯೆ
  • ಕಣ್ಮುಂದೆ ಮಕ್ಕಳ ಸಾವನ್ನು ನೋಡಿದ್ದ ಆಶಾ ಭೋಸ್ಲೆ
  • ಮಗ ಹೇಮಂತ್ ಮತ್ತು ಮಗಳು ವರ್ಷಾ ಸಾವಿನ ನೋವನ್ನು ಅನುಭವಿಸಿದ್ದ ಗಾಯಕಿ
ಮುಂಬೈ: ಭಾರತದ ಗಾನಕೋಗಿಲೆ, ಏಷ್ಯಾದ ನೈಟಿಂಗೇಲ್​ ಖ್ಯಾತಿಯ ಆಶಾ ಭೋಸ್ಲೆ ಅವರು ಭಾನುವಾರ (ಏ.12) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಇಂದು (ಏ.13) ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ಅವರ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬ ವರ್ಗ (Asha Bhosle Childrens) ತಿಳಿಸಿದೆ.

ಕಣ್ಮುಂದೆ ಪ್ರಾಣ ಬಿಟ್ಟ ಮಕ್ಕಳು!

ಆಶಾ ಭೋಸ್ಲೆ ಅವರು ತಮ್ಮ ವೃತ್ತಿ ಜೀವನದಲ್ಲಿ ಉತ್ತುಂಗದ ಶಿಖರವನ್ನೇರಿದ್ದರೂ ಸಹ ಅವರ ವೈಯಕ್ತಿಕ ಬದುಕು ಯಾವಾಗಲೂ ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡೆ ಇರುತ್ತಿತ್ತು.
ಆಶಾ ಭೋಸ್ಲೆ ಅವರು ತಮ್ಮ 16 ನೇ ವಯಸ್ಸಿಗೆ ಗಣಪತ್​ ರಾವ್​ ಭೋಸ್ಲೆ ಅವರನ್ನು ಮದುವೆಯಾಗುವ ಮೂಲಕ ಹೇಮಂತ್​, ವರ್ಷಾ ಮತ್ತು ಆನಂದ ಎಂಬ ಮಕ್ಕಳಿಗೆ ತಾಯಿಯಾದರು. 1960 ರಲ್ಲಿ ಗಣಪತ್​ ರಾವ್​ ಭೋಸ್ಲೆ ಅವರಿಂದ ವಿಚ್ಛೇದನ ಪಡೆದ ಆಶಾ, 1980 ರಲ್ಲಿ ಸಂಗೀತ ನಿರ್ದೇಶಕ ಆರ್​.ಡಿ. ಬರ್ಮನ್​ ಅವರನ್ನು ಮದುವೆಯಾದರು. ಆದರೆ ಅವರಿಂದ ಯಾವುದೇ ಮಕ್ಕಳನ್ನು ಆಶಾ ಪಡೆಯಲಿಲ್ಲ.
ಹಿರಿಯ ಮಗ ಹೇಮಂತ್​ ಬೋಸ್ಲೆ ಸಂಗೀತ ಕ್ಷೇತ್ರದಲ್ಲಿ ಸಕ್ರೀಯರಾನಗಿದ್ದ ಅವರು, ಬಾಲಿವುಡ್​ನಲ್ಲಿ ಅನೇಕ ಸಿನಿಮಾಗಳಿಗೆ ಗೀತ ರಚನಾಕಾರರಾಗಿ ಕೆಲಸ ಮಾಡುತ್ತಿದ್ದರು. ಆದರೆ ಇವರು 2015 ರಲ್ಲಿ ಕ್ಯಾನ್ಸರ್​ ರೋಗಕ್ಕೆ ತುತ್ತಾಗಿ ಪ್ರಾಣವನ್ನು ಕಳೆದುಕೊಂಡರು.
ಮಗಳು ವರ್ಷಾ ಭೋಸ್ಲೆ ಪತ್ರಿಕೋದ್ಯಮದಲ್ಲಿ ಸಕ್ರೀಯರಾಗಿದ್ದ ಇವರು, ಭಾರತದ ಖ್ಯಾತ ಪತ್ರಿಕೆಗಳಿಗೆ ಅಂಕಣಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ 2012 ರಲ್ಲಿ ಇವರು ತಮ್ಮ ತಲೆಗೆ ತಾವೇ ಬಂದೂಕಿನಿಂದ ಗುಂಡನ್ನು ಹಾರಿಸಿಕೊಂಡು ಅತ್ಮ ಹತ್ಯೆ ಮಾಡಿಕೊಂಡರು. ಕೊನೆಯ ಮಗನಾದ ಆನಂದ ಭೋಸ್ಲೆ ತಾಯಿ ಆಶಾ ಭೋಸ್ಲೆ ಅವರ ಮ್ಯಾನೇಜರ್​ ರೀತಿಯಲ್ಲಿ ಕೆಲಸ ಮಾಡಿಕೊಳ್ಳತ್ತಾ, ಮಾತೃ ಸೇವೆಯಲ್ಲಿ ನಿರತರಾಗಿದ್ದರು.

ಮೊದಲ ಪತಿಯಿಂದ ಡಿವೋರ್ಸ್​ ಪಡೆದಿದ್ದ ಆಶಾ!

ಇವರು ತಮ್ಮ 16 ನೇ ವಯಸ್ಸಿನಲ್ಲಿ ತಮಗಿಂತ 15 ವರ್ಷ ದೊಡ್ಡವರಾದ ಗಣಪತ್​ ರಾವ್​ ಭೋಸ್ಲೆ ಅವರನ್ನು ಆಶಾ ಮದುವೆಯಾಗಿದ್ದರು. ಆದರೆ ಈ ಗಣಪತ್​ ರಾವ್​ ಭೋಸ್ಲೆ ಸದಾ ಆಶಾ ಅವರ ಚಾರಿತ್ರ್ಯದ ಮೇಲೆ ಅನುಮಾನ ಹೊಂದಿದ್ದರಿಂದ ಆಶಾ ತನ್ನ ಗಂಡನ ಮನೆಯಲ್ಲಿ ನೆಮ್ಮದಿಯಿಂದಿರಲು ಸಾಧ್ಯವಾಗಲಿಲ್ಲ.
ಒಂದು ದಿನ ಗಂಡನ ಮನೆಯವರು ಮತ್ತು ಆಶಾ ಭೋಸ್ಲೆ ನಡುವೆ ಭಯಂಕರ ಜಗಳ ನಡೆದ ಪರಿಣಾಮ ಆಶಾ ತನ್ನೆರಡು ಮಕ್ಕಳು ಹಾಗೂ ಮೂರನೇ ಮಗುವನ್ನು (ಹೇಮಂತ್​, ವರ್ಷಾ ಮತ್ತು ಆನಂದ್) ಗರ್ಭದಲ್ಲಿಟ್ಟುಕೊಂಡು ತವರು ಮನೆಗೆ ಬಂದುಬಿಟ್ಟರು. ನಂತರ 1960 ರಲ್ಲಿ ಗಣಪತ್​ ರಾವ್​ ಭೋಸ್ಲೆ ಅವರಿಗೆ ಆಶಾ ವಿಚ್ಛೇದನ ನೀಡಿದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net