ನ್ಯಾಯಾಲಯ ಮತ್ತು ರಾಜಕೀಯ ಒತ್ತಡದ ಹಿನ್ನಲೆ ಗುರುವಾರ ಬೆಳಿಗ್ಗೆ ಶಿವಂ ಮಿಶ್ರಾರನ್ನು ಬಂಧಿಸಿದ್ದ ಪೊಲೀಸರು, ತಾವು ಕಲೆಹಾಕಿದ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಸಾಕ್ಷಿಗಳ ಕೊರತೆ ಹಿನ್ನಲೆ ಈದೀಗ ನ್ಯಾಯಾಲಯದವು ಶಿವಂ ಮಿಶ್ರಾ ಅವರಿಗೆ 20,000 ರೂಪಾಯಿ ಬಾಂಡನ್ನು ಪಡೆದು ಜಾಮೀನನ್ನು ನೀಡಿ ಆದೇಶಿಸಿದೆ. ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ನಾಲ್ಕು ದಿನ ತಗುಲಿತು, ಆದರೆ ಜಾಮೀನನ್ನು ಒಂದು ದಿನದಲ್ಲೇ ಪಡೆಯಲಾಯಿತು ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ,(ಏಜನ್ಸೀಸ್).