ಕೆನಡಾ ಶೂಟೌಟ್ ಬೆನ್ನಲ್ಲೇ ಆಘಾತಕಾರಿ ಸತ್ಯ ಬಯಲು: ಶಾಲೆ ದಾಳಿಗೂ ಮುನ್ನ ತಾಯಿ ಮತ್ತು ತಮ್ಮನನ್ನೇ ಕೊಂದಿದ್ದ ಜೆಸ್ಸಿ ರೂಟ್‌ಸೆಲಾರ್ | Canada Shooting

ಕೆನಡಾದ ಶಾಲೆ ಮೇಲೆ ಗುಂಡಿನ ದಾಳಿ ನಡೆಸಿದ್ದ ಜೆಸ್ಸಿ ವ್ಯಾನ್ ರೂಟ್‌ಸೆಲಾರ್
ಕೆನಡಾದ ಶಾಲೆ ಮೇಲೆ ಗುಂಡಿನ ದಾಳಿ ನಡೆಸಿದ್ದ ಜೆಸ್ಸಿ ವ್ಯಾನ್ ರೂಟ್‌ಸೆಲಾರ್
Published on

ಪ್ರಮುಖ ಮುಖ್ಯಾಂಶಗಳು

  • ಕೆನಡಾದ ಶಾಲೆಯಲ್ಲಿ ನಡೆದ ಶೂಟ್​ಔಟ್​
  • ಈ ದಾಳಿಯಲ್ಲಿ 9 ಜನ ಸಾವು 25 ಕ್ಕೂ ಹೆಚ್ಚಿನ ಜನಕ್ಕೆ ಗಾಯ
  • ಈ ದಾಳಿಯನ್ನು ಮಾಡಿದ್ದು ಜೆಸ್ಸಿ ವ್ಯಾನ್ ರೂಟ್‌ಸೆಲಾರ್ ಎಂಬ ಮಂಗಳಮುಖಿ ಎಂದು ಪತ್ತೆ
  • ಶಾಲೆ ದಾಳಿಗೂ ಮೊದಲು ಮನೆಯಲ್ಲಿದ್ದ ತಾಯಿ ಮತ್ತು ತಮ್ಮನನ್ನು ಕೊಂದಿದ್ದ ಜೆಸ್ಸಿ
ಕೆನಡಾ: ಕೆನಡಾದ ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ನಡೆದ ಮಾರಕ ಗುಂಡಿನ ದಾಳಿ (Canada Shooting) ಯಲ್ಲಿ ಒಂಬತ್ತು ಜನರ ಸಾವಿಗೆ ಕಾರಣನಾದ ಕೊಲೆಗಾರ, ಮಾನಸಿಕ ಆರೋಗ್ಯ ಸಮಸ್ಯೆಗಳಿರುವ 18 ವರ್ಷದ ಟ್ರಾನ್ಸ್‌ಜೆಂಡರ್ ಮಹಿಳೆ ಎಂದು ಗುರುತಿಸಲಾಗಿದೆ.
ಜೆಸ್ಸಿ ವ್ಯಾನ್ ರೂಟ್‌ಸೆಲಾರ್ ತನ್ನ ಶಾಲೆಯ ಮೇಲೆ ದಾಳಿ ಮಾಡುವ ಮೊದಲು ತನ್ನ ತಾಯಿ ಮತ್ತು ಮಲಸಹೋದರನನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಈ ಹತ್ಯಾಕಾಂಡ ಏಕೆ ನಡೆಯಿತು ಎಂದು ಪೊಲೀಸರು ಇಲ್ಲಿವರೆಗೆ ತಿಳಿಸಿಲ್ಲ.

ಕೊಲೆಗಡಕ/ಕಿ ಬಗ್ಗೆ

ರೂಟ್‌ಸೆಲಾರ್ ಒಬ್ಬ ಟ್ರಾನ್ಸ್‌ಜೆಂಡರ್ ಮಹಿಳೆಯಾಗಿದ್ದು, ಆದರೆ ಜನ್ಮತಃ ಅವರು ಜೈವಿಕ ಪುರುಷನಾಗಿ ಜನಿಸಿದ್ದರು. ನಾಲ್ಕು ವರ್ಷಗಳ ಹಿಂದೆ ಹತ್ಯಾಕಾಂಡಕ್ಕೆ ಗುರಿಯಾದ ಶಾಲೆಯಿಂದ ಹೊರಬಂದಿದ್ದರು ಎಂದು ಪೊಲೀಸ್ ಕಮಾಂಡರ್ ಡ್ವೇನ್ ಮೆಕ್‌ಡೊನಾಲ್ಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರೂಟ್‌ಸೆಲಾರ್ ಬಳಿ ಬಂದೂಕಿನ ಪರವಾನಗಿ ಹೊಂದಿದ್ದರು, ಆದರೆ ಅವರು ಅದನ್ನು ಕಳೆದುಕೊಂಡ ಹಿನ್ನಲೆ ಅವರ ಮನೆಯಿಂದ ಬಂದೂಕನ್ನು ವಶಪಡಿಸಿಕೊಳ್ಳಲಾಗಿತ್ತು, ನಂತರ ಅವರಿಗೆ ಮರಳಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ರೂಟ್‌ಸೆಲಾರ್ ಒಬ್ಬಳು ಮಾನಸಿಕ ಅಸ್ವಸ್ಥೆಯಾಗಿದ್ದು, ಪ್ರಾಂತೀಯ ಮಾನಸಿಕ ಆರೋಗ್ಯ ಕಾಯ್ದೆಯಡಿಯಲ್ಲಿ ಮೌಲ್ಯಮಾಪನಕ್ಕಾಗಿ ಆಕೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಬಂಧಿಸಲಾಗಿತ್ತು. ನಾಲ್ಕು ವರ್ಷಗಳ ಹಿಂದೆ ಈಗ ದಾಳಿ ಮಾಡಿದ ಶಾಲೆಯ ವಿದ್ಯಾರ್ಥಿಯಾಗಿದ್ದಳು ಎಂದು ಮೆಕ್‌ಡೊನಾಲ್ಡ್ ಹೇಳಿದ್ದಾರೆ.

ಶಾಲೆಗೂ ಮುನ್ನ ಮನೆಯಲ್ಲಿ ಹರಿದ ನೆತ್ತರು

ಕೆನಡಾದಲ್ಲಿ ನಡೆದ ಅತ್ಯಂತ ಭೀಕರ ಸಾಮೂಹಿಕ ಗುಂಡಿನ ದಾಳಿಯಲ್ಲಿ ಗುಂಡು ಹಾರಿಸಿದ ರೂಟ್‌ಸೆಲಾರ್ ಸೇರಿ ಒಂಬತ್ತು ಜನ ಸಾವನ್ನಪ್ಪಿದ್ದು, 24 ಜನರು ಗಾಯಗೊಂಡಿದ್ದಾರೆ. ರೂಟ್‌ಸೆಲಾರ್ ಮೊದಲು ತನ್ನ 39 ವರ್ಷದ ತಾಯಿ ಮತ್ತು 11 ವರ್ಷದ ಮಲಸಹೋದರನನ್ನು ಕುಟುಂಬದ ಮನೆಯಲ್ಲಿ ಕೊಂದ ನಂತರ ನಾಲ್ಕು ವರ್ಷಗಳ ಹಿಂದೆ ಅವರು ಓದಿದ್ದ ಶಾಲೆಯ ಮೇಲೆ ದಾಳಿ ಮಾಡಿದರು ಎಂದು ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
ದಾಳಿಗೆ ಒಳಗಾದ ಶಾಲೆಯಲ್ಲಿ, 39 ವರ್ಷದ ಮಹಿಳಾ ಶಿಕ್ಷಕಿ ಮತ್ತು ಐದು ವಿದ್ಯಾರ್ಥಿಗಳು, (12 ವರ್ಷದ ಮೂವರು ಹುಡುಗಿಯರು ಮತ್ತು 13 ಮತ್ತು 12 ವರ್ಷ ವಯಸ್ಸಿನ ಇಬ್ಬರು ಹುಡುಗರು) ಒಬ್ಬ ಮೃತನ ಹೆಣ ಮೆಟ್ಟಿಲುಗಳ ಬಾವಿಯಲ್ಲಿ ಪತ್ತೆಯಾಗಿದ್ದು, ಉಳಿದವರ ಹೆಣಗಳು ಗ್ರಂಥಾಲಯದಲ್ಲಿ ಪತ್ತೆಯಾಗಿದ್ದಾರೆ ಎಂದು ಮೆಕ್‌ಡೊನಾಲ್ಡ್ ಹೇಳಿದ್ದಾರೆ. ಶಂಕಿತ ವ್ಯಕ್ತಿಗೂ ಮತ್ತು ಕೊಲೆಯಾದವರಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.
ಉದ್ದನೆಯ ಬ್ಯಾರೆಲ್ ಬಂದೂಕು ಮತ್ತು ಪಿಸ್ತೂಲ್​ನ್ನು ದಾಳಿಗೆ ಬಳಸಲಾಗಿದ್ದು, ರೂಟ್‌ಸೆಲಾರ್ ನಂತರ ತನಗೇ ತಾನೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಇವರ ಮನೆಯ ನೆರೆಹೊರೆಯವರು ಮಾಹಿತಿ ನೀಡಿದ ನಂತರ ರೂಟ್‌ಸೆಲಾರ್ ತನ್ನ ಮನೆಯಲ್ಲಿ, ತಾಯಿ ಮತ್ತು ಮಲಸಹೋದರನನ್ನು ಕೊಂದಿರುವುದು ಬೆಳಕಿಗೆ ಬಂದಿದೆ. ಆದರೆ ರೂಟ್‌ಸೆಲಾರ್ ಈ ರೀತಿಯ ದಾಳಿಗೆ ಏಕೆ ಮುಂದಾದಳು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net