ಮೂವರು ಮಕ್ಕಳಿದ್ದರೂ ಆಶಾರನ್ನು ಕೈಹಿಡಿದಿದ್ದ ಆರ್.ಡಿ. ಬರ್ಮನ್: ಮದುವೆಗಾಗಿ ಮನೆಯವರನ್ನೇ ಧಿಕ್ಕರಿಸಿದ್ದ ಜೋಡಿ! Asha Bhosle and RD Burman

ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಅವರನ್ನು ಮದುವೆಯಾಗಿದ್ದ ಗಾಯಕಿ
ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಅವರನ್ನು ಮದುವೆಯಾಗಿದ್ದ ಗಾಯಕಿ
Published on

ಪ್ರಮುಖ ಮುಖ್ಯಾಂಶಗಳು

  • ಏಷ್ಯಾದ ನೈಟಿಂಗೆಲ್​ ಖ್ಯಾತಿಯ ಆಶಾ ಭೋಸ್ಲೆ ಇನ್ನಿಲ್ಲ
  • ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಆಶಾ
  • ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಅವರನ್ನು ಮದುವೆಯಾಗಿದ್ದ ಗಾಯಕಿ
  • ಮೂರು ಮಕ್ಕಳಿದ್ದರು ಆಶಾರನ್ನು ಪ್ರೀತಿಸಿದ್ದ ಬರ್ಮನ್​
ಮುಂಬೈ: ಇಂದು (ಏ.12) ರಂದು ಭಾರತದ ಸಂಗೀತ ಲೋಕದ ಧ್ರುವತಾರೆ, ಏಷ್ಯಾದ ನೈಟಿಂಗೆಲ್​ ಖ್ಯಾತಿಯ ಆಶಾ ಭೋಸ್ಲೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ನಾಳೆ (ಏ.13) ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗ ತಿಳಿಸಿದೆ.

ಆಶಾ ಬೋಸ್ಲೆ, ಆರ್​.ಡಿ. ಬರ್ಮನ್​ ಲವ್​ ಸ್ಟೋರಿ!

ಆಶಾ ಭೋಸ್ಲೆ ತಮ್ಮ ಮೊದಲ ಪತಿ ಗಣಪತ್​ ರಾವ್​ ಭೋಸ್ಲೆ ಅವರಿಂದ ವಿಚ್ಛೇದನ ಪಡೆದ ನಂತರ ಬಾಲಿವುಡ್​ನ ಖ್ಯಾತ ಸಂಗೀತ ಸಂಯೋಜಕರಾದ ರಾಹುಲ್​ ದೇವ್​ ಬರ್ಮನ್​ ಅಲಿಯಾಸ್​ ಆರ್​.ಡಿ. ಬರ್ಮನ್ (Asha Bhosle and RD Burman)​ ಅವರನ್ನು ಪ್ರೀತಿಸ ತೊಡಗಿದರು.
ತಮ್ಮ ಮತ್ತು ಆರ್​.ಡಿ. ಬರ್ಮನ್​ ಅವರ ಲವ್​ ಸ್ಟೋರಿ ಬಗ್ಗೆ ಆಶಾ ಭೋಸ್ಲೆ ಹಲವಾರು ಸಂದರ್ಭದಲ್ಲಿ ಮುಕ್ತವಾಗಿ ಮಾತನಾಡಿದ್ದರು. ಇತ್ತೀಚೆಗೆ ಕಪಲ್​ ತಿಂಗ್ಸ್ ಎಂಬ ಕಾರ್ಯಕ್ರಮದಲ್ಲಿ ಆಶಾ ಭೋಸ್ಲೆ ಆರ್​.ಡಿ.ಬಿ ಬಗ್ಗೆ ಹೀಗೆ ಹೇಳಿದ್ದರು. ಆರ್​​.ಡಿ. ಬರ್ಮನ್​ ಆ ಸಮದಲ್ಲಿ ಬಾಲಿವುಡ್​ನ ಟಾಪ್​ ಸಂಗೀತ ನಿರ್ದೇಶಕರಾಗಿದ್ದರು. ಅದರೆ ಅವರಿಗೆ ಅದರ ಅರಿವೇ ಇರಲಿಲ್ಲ. ಅವರು ನಾನು ನೋಡಿದ ಅತ್ಯಂತ ನಿಗರ್ವಿ ವ್ಯಕ್ತಿ ಎಂದು ಆಶಾ ಭೋಸ್ಲೆ ಹೊಗಳಿದ್ದರು.
ಅವರು ಎಷ್ಟು ಸರಳ ವ್ಯಕ್ತಿಯಾಗಿದ್ದರೆಂದರೆ, ನಾನೊಮ್ಮೆ ಅವರಿಗೆ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿದಾಗ, ಇದೇನು ಕಲ್ಲನ್ನು ತಂದಿದ್ದೀಯಾ ನನಗೆ ಇದು ಬೇಡ ಎಂದು ನಯವಾಗಿ ತಿರಸ್ಕರಿಸಿದ್ದರು. ಈ ಉಂಗುರ, ಕಲ್ಲುಗಳ ಬದಲು ಹೋಗಿ ಒಂದು ಹಾಡನ್ನು ರೆಕಾರ್ಡ್ ಮಾಡಿಕೊಂಡು ಬಾ ಎಂದು ಯಾವಾಗಲೂ ಹೇಳುತ್ತಿದ್ದರೆಂದು ಆಶಾ ಅವರು ಹೇಳಿದ್ದರು.
ನಾನು ನನ್ನ ಮೊದಲ ಪತಿಯಿಂದ ದೂರವಾದ ಮೇಲೆ, ನಾನು ತವರು ಮನೆಯಲ್ಲೇ ಇದ್ದೆ. ನಾನು, ಸಂಗೀತ ಮತ್ತು ನನ್ನ ಮಕ್ಕಳು ಇದೇ ನನ್ನ ಪ್ರಪಂಚವಾಗಿತ್ತು. ಅದರೆ ನನ್ನಲಿದ್ದ ಒಂಟಿತನವನ್ನು ಆರ್​.ಡಿ. ಬರ್ಮನ್​ ದೂರ ಮಾಡಿದರು. ನಾವಿಬ್ಬರು ಮದುವೆಯಾಗ ಬಯಸಿದಾಗ ಅವರ ತಾಯಿಗೆ ನಾನು ಅವರ ಮನೆ ಸೊಸೆಯಾಗುವುದು ಇಷ್ಟವಿರಲಿಲ್ಲ. ನನಗೆ ಆಗಲೇ ಮೂರು ಮಕ್ಕಳಿದ್ದರು. ಆದರೂ ಬರ್ಮನ್​ ನನ್ನನ್ನು 1980 ರಲ್ಲಿ ಮದುವೆಯಾದರು ಎಂದು ಅವರು ಹೇಳಿದ್ದರು.
ಬರ್ಮನ್​ ಕೂಡ ಮದುವೆಯಾಗಿದ್ದು, 1971 ರಲ್ಲಿ ರೀಟಾ ಪಟೇಲ್ ಅವರಿಂದ ವಿಚ್ಛೇದನ ಪಡೆದಿದ್ದರು. ನನ್ನ ಮೂರು ಮಕ್ಕಳನ್ನೇ ತಮ್ಮ ಮಕ್ಕಳೆಂದು ಸ್ವೀಕರಿಸಿದ ಅವರು ಮತ್ತೆ ಮಕ್ಕಳು ಮಾಡಿಕೊಳ್ಳುವುದರ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಲೇ ಇಲ್ಲ ಎಂದು ಆಶಾ ಭೋಸ್ಲೆ ಹಂಚಿಕೊಂಡಿದ್ದಾರೆ.

ಸಂಗೀತ ಲೋಕವನ್ನೇ ಬದಲಿಸಿದ ಆಶಾ ಬರ್ಮನ್​ ಜೋಡಿ

ಅಶಾ ಭೋಸ್ಲೆ ಮತ್ತು ಆರ್​.ಡಿ. ಬರ್ಮನ್​ ಜೋಡಿ ಬಾಲಿವುಡ್​ ಸಂಗೀತದ ದಿಕ್ಕನ್ನೇ ಬದಲಿಸಿತು ಎಂದರೆ ಸುಳ್ಳಲ್ಲ. ಬರ್ಮನ್​ ನಿರ್ದೇಶಿಸಿದ ಮತ್ತು ಆಶಾ ಅವರು ಹಾಡಿದ ಎಲ್ಲಾ ಹಾಡುಗಳು ಎವರ್​ಗ್ರಿನ್​ ಹಿಟ್​ಗಳಾಗಿ ಮೂಡಿ ಬಂದವು.
ಪೀಯಾ ತೂ ಅಬ್​ ತೋ ಆಜಾ, ದಮ್​ ಮಾರೋ ದಮ್​, ಎ ಮೆರಾ ದಿಲ್​ ಯಾರ್​ ಕಾ ದಿವಾನಾ, ಸನಮ್​ ರೇ, ಚುರಾ ಲೀಯಾ ತುಮ್​ ನೇ ಇಸ್​ ದಿಲ್​ ಕೋ, ಹೀಗೆ ಮೊದಲಾದ ಹಿಟ್​ ಹಾಡುಗಳನ್ನು ಈ ಜೋಡಿ ಸಂಗೀತ ಲೋಕಕ್ಕೆ ಧಾರೆ ಎರೆದಿದೆ.

ಮೊದಲ ಪತಿಯಿಂದ ವಿಚ್ಚೇದನ ಪಡೆದಿದ್ದ ಆಶಾ!

ಇವರು ತಮ್ಮ 16 ನೇ ವಯಸ್ಸಿನಲ್ಲಿ ತಮಗಿಂತ 15 ವರ್ಷ ದೊಡ್ಡವರಾದ ಗಣಪತ್​ ರಾವ್​ ಭೋಸ್ಲೆ ಅವರನ್ನು ಆಶಾ ಮದುವೆಯಾಗಿದ್ದರು. ಆದರೆ ಈ ಗಣಪತ್​ ರಾವ್​ ಭೋಸ್ಲೆ ಸದಾ ಆಶಾ ಅವರ ಚಾರಿತ್ರ್ಯದ ಮೇಲೆ ಅನುಮಾನ ಹೊಂದಿದ್ದರಿಂದ ಆಶಾ ತನ್ನ ಗಂಡನ ಮನೆಯಲ್ಲಿ ನೆಮ್ಮದಿಯಿಂದಿರಲು ಸಾಧ್ಯವಾಗಲಿಲ್ಲ.
ಒಂದು ದಿನ ಗಂಡನ ಮನೆಯವರು ಮತ್ತು ಆಶಾ ಭೋಸ್ಲೆ ನಡುವೆ ಭಯಂಕರ ಜಗಳ ನಡೆದ ಪರಿಣಾಮ ಆಶಾ ತನ್ನೆರಡು ಮಕ್ಕಳು ಹಾಗೂ ಮೂರನೇ ಮಗುವನ್ನು (ಹೇಮಂತ್​, ವರ್ಷಾ ಮತ್ತು ಆನಂದ್) ಗರ್ಭದಲ್ಲಿಟ್ಟುಕೊಂಡು ತವರು ಮನೆಗೆ ಬಂದುಬಿಟ್ಟರು. ನಂತರ 1960 ರಲ್ಲಿ ಗಣಪತ್​ ರಾವ್​ ಭೋಸ್ಲೆ ಅವರಿಗೆ ಆಶಾ ವಿಚ್ಛೇದನ ನೀಡಿದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net