ಇನ್ನು ಕೇವಲ ರಸ್ತೆ ಕುಸಿತ ಮಾತ್ರವಲ್ಲದೆ, ಇಡೀ ಉತ್ತರಾಖಂಡದಾದ್ಯಂತ ಮಳೆರಾಯ ತನ್ನ ಪ್ರತಾಪ ತೋರಿಸುತ್ತಿದ್ದಾನೆ. ಭಾರತೀಯ ಹವಾಮಾನ ಇಲಾಖೆ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಕಿತ್ತಳೆ ಎಚ್ಚರಿಕೆ (Orange Alert) ನೀಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಭೂಕುಸಿತದ ಭೀತಿಯಿಂದಾಗಿ ಉತ್ತರಾಖಂಡ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಸಿದ್ಧ ಚಾರ್ ಧಾಮ್ ಯಾತ್ರೆಯನ್ನು ಮುಂದಿನ ಎರಡು ದಿನಗಳವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ, (ಏಜನ್ಸೀಸ್).