ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ: ಮೊದಲು ಅಲ್ಲಿ ಜನರಿಗೆ ಅನ್ನ ನೀಡಿ, ಆಮೇಲೆ ಮತ ಕೇಳಿ; PoK ಚುನಾವಣೆಗೆ ವಿದೇಶಾಂಗ ಇಲಾಖೆ ಕೌಂಟರ್​​! Randhir Jaiswal on PoK Elections

PoK ಚುನಾವಣೆಗೆ ಭಾರತದ ವಿದೇಶಾಂಗ ಇಲಾಖೆ ಖಡಕ್ ತಿರುಗೇಟು
PoK ಚುನಾವಣೆಗೆ ಭಾರತದ ವಿದೇಶಾಂಗ ಇಲಾಖೆ ಖಡಕ್ ತಿರುಗೇಟು
Published on

ಪ್ರಮುಖ ಮುಖ್ಯಾಂಶಗಳು

  • ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ
  • ಮೊದಲು ಅಲ್ಲಿನ ಜನರಿಗೆ ಅನ್ನ ನೀಡಿ, ಆಮೇಲೆ ಮತ ಕೇಳಿ
  • PoK ಚುನಾವಣೆಗೆ ಭಾರತದ ವಿದೇಶಾಂಗ ಇಲಾಖೆ ಖಡಕ್ ತಿರುಗೇಟು
ನವದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ ಪಾಕ್​ ಆಕ್ರಮಿತ ಕಾಶ್ಮೀರ ಭಾಗದಲ್ಲಿ ವಿಧಾನಸಭಾ ಚುನಾವಣೆ ನಡೆಸಲಾಗುವುದು ಎಂದು ಪಾಕ್​ ಸರ್ಕಾರ ಘೋಷಿಸಿರುವುದಕ್ಕೆ ಭಾರತದ ವಿದೇಶಾಂಗ ಸಚಿವಾಲಯ (Randhir Jaiswal on PoK Elections) ವಿರೋಧ ವ್ಯಕ್ತಪಡಿಸಿದೆ.
ಜಮ್ಮು-ಕಾಶ್ಮೀರದ ಸಂಪೂರ್ಣ ಭಾಗ ಹಾಗೂ ಲಡಾಕ್​ ಭಾರತದ ಅವಿಭಾಜ್ಯ ಅಂಗವಾಗಿದ್ದು, ಇಲ್ಲಿರುವ ಕೆಲ ಪ್ರದೇಶಗಳಲ್ಲಿ ಪಾಕಿಸ್ತಾನ ಚುನಾವಣೆ ನಡೆಸುತ್ತದೆ ಎಂದು ಹೇಳುತ್ತಿದೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್​ ಜೈಸ್ವಾಲ್​ ಹೇಳಿದ್ದಾರೆ.

ಮೊದಲು ಜನಕ್ಕೆ ಅನ್ನ ಕೊಡಿ; ಆಮೇಲೆ ಮತ ಕೇಳಿ!

ಪಾಕ್​ ಆಕ್ರಮಿತ ಪ್ರದೇಶದ ಜನರು ಈಗಾಗಲೇ ಪಾಕಿಸ್ತಾನದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಲ್ಲಿರುವ ಜನಕ್ಕೆ ಮೂಲ ಸೌಕರ್ಯಗಳನ್ನು ನೀಡಲು ಆ ದೇಶಕ್ಕೆ ಆಗುತ್ತಿಲ್ಲ, ಇನ್ನು ಚುನಾವಣೆಯನ್ನು ಹೇಗೆ ನಡೆಸುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಪಾಕ್​ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಅವರು ಕೇವಲ ಹಿಂಸಾಚಾರವನ್ನು ಮಾಡುತ್ತಿದ್ದಾರೆ, ಹಾಗು ಅದನ್ನೇ ಮುಂದುವರಿಸಿದ್ದಾರೆ. ಈಗ ಈ ಹಿಂಸಾಚಾರದ ಸುದ್ದಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗದಂತೆ ತಡೆಯಲು ಈ ಚುನಾವಣೆ ಎಂಬ ನಾಟಕವಾಡುತ್ತಿದ್ದಾರೆ ಎಂದು ಜೈಸ್ವಾಲ್​ ತಿಳಿಸಿದ್ದಾರೆ.

ಪಿಓಕೆ ಬೀದಿಗಳಲ್ಲಿ ಹೆಣಗಳ ರಾಶಿ!

ಪಾಕ್​ ಆಕ್ರಮಿತ ಪ್ರದೇಶದಲ್ಲಿ ಪಾಕಿಸ್ತಾನಿ ರೇಂಜರ್​ಗಳ ಅಟ್ಟಹಾಸ ಮೀತಿ ಮೀರಿದ್ದು, ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತಿರುವ ಜನರ ಮೇಲೆ ಗುಂಡಿನ ಮಳೆ ಹರಿಸಿ ಇಂದು (ಮಂಗಳವಾರ, ಜು.28) ಸುಮಾರು 20 ಜನ ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಂದಿದ್ದಾರೆಂದು ತಿಳಿದು ಬಂದಿದೆ.
ಪಿಓಕೆ ಪ್ರದೇಶದಲ್ಲಿ ಪಾಕಿಸ್ತಾನ ಮಲತಾಯಿ ಧೋರಣೆ ತಾಳಿದ್ದು, ನಮಗೆ ಸರಿಯಾಗಿ ಊಟ, ಹಾಕಲು ಬಟ್ಟೆ, ಮಾಡಲು ಕೆಲಸವನ್ನೂ ನೀಡುತ್ತಿಲ್ಲ. ಆದರೆ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿದ್ದಾರೆ ಎನ್ನುವುದು ಪಿಓಕೆ ಜರನ ಅಳಲಾಗಿದೆ. ಹಾಗೆಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರೆ ಭದ್ರತಾ ಸಿಬ್ಬಂದಿ ಮನೆಗೆ ನುಗ್ಗಿ ಕಳ್ಳತನ ಮಾಡುವುದು, ಬಲತ್ಕಾರ ಮಾಡುವುದು ಹಾಗೂ ಗುಂಡಿಟ್ಟು ಕೊಲ್ಲುತ್ತಿದ್ದಾರೆ ಎನ್ನವುದು ಅಲ್ಲಿಯ ಜನರ ಆರೋಪವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net