ಪಾಕ್‌ನಲ್ಲಿ ಸರಣಿ ಬಾಂಬ್ ಬ್ಲಾಸ್ಟ್: ನೆಲಸಮವಾಯ್ತು ವ್ಯಾನ್, ರಕ್ಷಣೆಗೆ ಬಂದವರೂ ಸಾವು; IED ಸ್ಪೋಟಕ್ಕೆ 7 ಜನ ದುರ್ಮರಣ! IED Blast in Pakistan

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಬನ್ನು ಜಿಲ್ಲೆಯಲ್ಲಿ ಸಂಭವಿಸಿದ ಸರಣಿ IED ಬಾಂಬ್ ದಾಳಿ
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಬನ್ನು ಜಿಲ್ಲೆಯಲ್ಲಿ ಸಂಭವಿಸಿದ ಸರಣಿ IED ಬಾಂಬ್ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಬನ್ನು ಜಿಲ್ಲೆಯಲ್ಲಿ ಸಂಭವಿಸಿದ ಸರಣಿ IED ಬಾಂಬ್ ದಾಳಿ
  • IED ಬಾಂಬ್ ಸ್ಫೋಟದಲ್ಲಿ 7 ಜನ ಮೃತಪಟ್ಟಿದ್ದಾರೆ
  • ದಾಳಿ ಖಂಡಿಸಿ ಸಿಎಂ ಸೊಹೈಲ್ ಅಫ್ರಿದಿ ಸಂತಾಪ
ಇಸ್ಲಾಮಾಬಾದ್​: ಶನಿವಾರ (ಜೂ.20) ಪಾಕಿಸ್ತಾನ ಖೈಬರ್ ಪಖ್ತುಂಖ್ವಾ ಎಂಬಲ್ಲಿ ರಸ್ತೆ ಬದಿಯಲ್ಲಿ ಸಂಭವಿಸಿದ ಎರಡು ಬಾಂಬ್ ​ಸ್ಪೋಟದಲ್ಲಿ (IED Blast in Pakistan) 7 ಜನ ಮೃತಪಟ್ಟಿದ್ದು, 3 ಜನ ಗಾಯಗೊಂಡಿದ್ದಾರೆಂದು ವರದಿಯಾಗಿದೆ.
ಮಾಹಿತಿ ಪ್ರಕಾರ ಈ ದಾಳಿಯನ್ನು ಸಾರ್ವಜನಿಕರು ಸಂಚರಿಸುತ್ತಿದ್ದ ವಾಹನಗಳನ್ನೇ ಗುರಿಯಾಸಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ. ಸದ್ಯ ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ.

ಇದು IED ದಾಳಿ: ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ

ಈ ಎರಡೂ ಬಾಂಬ್​ ದಾಳಿಗಳು ಬನ್ನು ಜಿಲ್ಲೆಯಲ್ಲಿ ಸಂಭವಿಸಿದ್ದು, ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ, ಯಾಸಿರ್​ ಅಫ್ರಿದಿ, ಈ ದಾಳಿಗೆ ಸುಧಾರಿತ ಸ್ಫೋಟಕ ಸಾಧನ (IED) ವನ್ನು ಬಳಸಲಾಗಿದೆ ಎಂದಿದ್ದಾರೆ.
ಮೊದಲ ಸ್ಪೋಟವನ್ನು ಜನರು ತೆರಳುತ್ತಿದ್ದ ವ್ಯಾನ್​ನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಇದರಲ್ಲಿ ಸುಮಾರು 5 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಇವರನ್ನು ರಕ್ಷಿಸಲು ಇನ್ನಷ್ಟು ಜನ ಬಂದಾಗ ಇನ್ನೊಮ್ಮೆ ಸ್ಪೋಟ ಮಾಡಲಾಗಿದ್ದು, ಅದರಲ್ಲಿ ಮತ್ತೆರಡು ಜನ ಪ್ರಾಣವನ್ನು ಕಳೆದು ಕೊಂಡಿದ್ದಾರೆಂದು ಹೇಳಿದ್ದಾರೆ.
ಗಾಯಾಳುಗಳನ್ನು ಹಾಗೂ ಮೃತರನ್ನು ಈಗಾಗಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ. ಹಾಗೆಯೇ ಈ ದಾಳಿ ಕುರಿತು ತನಿಖೆ ಚುರುಕುಗೊಂಡಿದ್ದು, ಸ್ಥಳವನ್ನು ಸಂಪೂರ್ಣ ಸೀಲ್​ಡೌನ್​ ಮಾಡಲಾಗಿದೆ ಎಂದು ಅಫ್ರಿದಿ ತಿಳಿಸಿದ್ದಾರೆ.

ಸಿಎಂ ಸಂತಾಪ!

ಈ ಬಾಂಬ್​​ ದಾಳಿಯನ್ನು ಖೈಬರ್ ಪಖ್ತುಂಖ್ವಾದ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಹೀನ ಕೃತ್ಯವಾಗಿದೆ, ಇದನ್ನು ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ನೀಡುತ್ತೆವೆಂದು ಭರವಸೆ ನೀಡಿದ್ದಾರೆ.
ಈ ದಾಳಿಯ ಹಿಂದಿರುವ ಜನರನ್ನು ಪತ್ತೆ ಹಚ್ಚಲು ಉನ್ನತ ಮಟ್ಟದ ತಂಡವನ್ನು ನಿರ್ಮಿಸಲಾಗಿದ್ದು, ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ದೊರೆಯಲಿ, ಮನೆಯವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net