ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಿಂದ ಅಧಿಕೃತವಾಗಿ ಇರಾನ್ ವಿರುದ್ಧ ಬೃಹತ್ ಯುದ್ಧ ಕಾರ್ಯಾಚರಣೆ ಆರಂಭವಾಗಿದೆ ಎಂದು ಘೋಷಿಸಿದ್ದಾರೆ. ಇರಾನ್‌ನ ಅಣುಶಕ್ತಿ ಕೇಂದ್ರಗಳು ಮತ್ತು ಕ್ಷಿಪಣಿ ನೆಲೆಗಳನ್ನು ಧ್ವಂಸಗೊಳಿಸುವುದೇ ನಮ್ಮ ಗುರಿಯಾಗಿದೆ. ಇರಾನ್ ಜನರೇ, ನಿಮ್ಮ ಸ್ವಾತಂತ್ರ್ಯದ ಸಮಯ ಬಂದಿದೆ, ನಿಮ್ಮ ಸರ್ಕಾರವನ್ನು ನೀವೇ ವಹಿಸಿಕೊಳ್ಳಿ ಎಂದು ಟ್ರಂಪ್ ಕರೆ ನೀಡಿದ್ದಾರೆ. ಇಸ್ರೇಲ್‌ನ ಯುದ್ಧ ವಿಮಾನಗಳು ಟೆಹ್ರಾನ್‌ನಾದ್ಯಂತ ಬಾಂಬ್ ಮಳೆಗರೆದಿದ್ದು, ಸುಪ್ರೀಂ ಲೀಡರ್ ಖಮೇನಿಯವರ ಕಚೇರಿ ಬಳಿಯೂ ಸ್ಫೋಟಗಳು ಸಂಭವಿಸಿವೆ, (ಏಜನ್ಸೀಸ್).