ಸೌದಿ ಅರೇಬಿಯಾ, ಯುಎಇ, ಕುವೈತ್ ಮತ್ತು ಇರಾಕ್ ದೇಶಗಳ ತೈಲ ಟ್ಯಾಂಕರ್‌ಗಳು ಜಗತ್ತಿಗೆ ತಲುಪಬೇಕೆಂದರೆ ಈ ಹಾದಿಯಲ್ಲೇ ಬರಬೇಕು. ಇರಾನ್ ಈ ಮಾರ್ಗವನ್ನು ಬಂದ್ ಮಾಡಿದರೆ ಅಥವಾ ಇಲ್ಲಿ ಸಂಘರ್ಷ ನಡೆದರೆ, ಜಗತ್ತಿನ ತೈಲ ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತದೆ. ಸೌದಿ ಅಥವಾ ಯುಎಇ ದೇಶಗಳ ಬಳಿ ಈ ಮಾರ್ಗವನ್ನು ದಾಟಲು ಪರ್ಯಾಯ ವ್ಯವಸ್ಥೆಗಳಿದ್ದರೂ, ಅವು ಈಗಿರುವ ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ.