ಇರಾನ್-ಇಸ್ರೇಲ್ ಸಮರಕ್ಕೆ ಬಾಬಾ ವಂಗಾ ಕನೆಕ್ಷನ್: ದಶಕಗಳ ಹಿಂದೆಯೇ ನುಡಿದಿದ್ದ ಭವಿಷ್ಯವಾಣಿ ಈಗ ನಿಜವಾಗುತ್ತಿದೆಯೇ? Baba Vanga

ಇರಾನ್​ ಇಸ್ರೇಲ್​ ನಡುವೆ ನಡೆಯುತ್ತಿರುವ ಭೀಕರ ಯುದ್ಧ, ಬಾಬಾ ವಂಗಾ
ಇರಾನ್​ ಇಸ್ರೇಲ್​ ನಡುವೆ ನಡೆಯುತ್ತಿರುವ ಭೀಕರ ಯುದ್ಧ, ಬಾಬಾ ವಂಗಾ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ
  • ಇರಾನ್​ ಇಸ್ರೇಲ್​ ನಡುವೆ ನಡೆಯುತ್ತಿರುವ ಭೀಕರ ಯುದ್ಧ
  • ಈ ಯುದ್ಧದ ಬಗ್ಗೆ ದಶಕಗಳ ಹಿಂದೆ ಭವಿಷ್ಯ ನುಡುದಿದ್ದ ಬಾಬಾ ವಂಗಾ
ಟೆಹ್ರಾನ್‌/ವಾಷಿಂಗ್ಟನ್: ಶನಿವಾರ (ಫೆ. 28) ಇಡೀ ವಿಶ್ವವೇ ಬೆಚ್ಚಿಬೀಳುವಂತಹ ಬೆಳವಣಿಗೆ ನಡೆದಿದೆ. ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳನ್ನೇ ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಸರಣಿ ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಈ ದಾಳಿಯ ಬೆನ್ನಲ್ಲೇ ಖಮೇನಿ ಅವರನ್ನು ಗುಪ್ತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಮಧ್ಯಪ್ರಾಚ್ಯದಲ್ಲಿ ಈಗ ಯುದ್ಧದ (Iran Israel War) ಕಿಡಿ ಸ್ಫೋಟಗೊಂಡಿದೆ.
ಆದರೆ, ಈ ಯುದ್ಧದ ಸುದ್ದಿಗಿಂತಲೂ ಹೆಚ್ಚಾಗಿ ಈಗ ಜನರ ಗಮನ ಸೆಳೆಯುತ್ತಿರುವುದು ದಶಕಗಳ ಹಿಂದೆಯೇ ನಿಧನರಾದ ಬಲ್ಗೇರಿಯಾದ ಅತೀಂದ್ರಿಯ ಶಕ್ತಿ ಬಾಬಾ ವಂಗಾ (Baba Vanga) ಅವರ ಭವಿಷ್ಯವಾಣಿ.

ಬಾಬಾ ವಂಗಾ ಹೇಳಿದ್ದ ಮಹಾ ಯುದ್ಧ ಆರಂಭವಾಯಿತೇ?

1996ರಲ್ಲೇ ನಿಧನರಾದ ಬಾಬಾ ವಂಗಾ ಅವರು 2026ರ ಆರಂಭದಲ್ಲಿ ಪೂರ್ವದಿಂದ ಉದಯಿಸುವ ಮಹಾ ಯುದ್ಧವೊಂದು ಇಡೀ ಜಗತ್ತನ್ನು ಆವರಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಈಗ ಇರಾನ್ ಮೇಲೆ ನಡೆದಿರುವ ಈ ದಾಳಿ ಮತ್ತು ಇರಾನ್ ನಡೆಸುತ್ತಿರುವ ಪ್ರತೀಕಾರದ ಸಿದ್ಧತೆಗಳನ್ನು ನೋಡುತ್ತಿದ್ದರೆ, ವಂಗಾ ಹೇಳಿದ್ದ ಆ ಭೀಕರ ವರ್ಷ ಇದೇ ಇರಬಹುದೇ ಎಂಬ ಆತಂಕ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.
ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಈ ಯುದ್ಧವು ಪಶ್ಚಿಮ ರಾಷ್ಟ್ರಗಳನ್ನು ಅದರಲ್ಲೂ ವಿಶೇಷವಾಗಿ ಯುರೋಪ್​ನ್ನು ಸಂಪೂರ್ಣವಾಗಿ ಬಂಜರು ಮಾಡಲಿದೆ. ಈ ಯುದ್ಧದ ನಂತರ ರಷ್ಯಾ ಜಗತ್ತಿನ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅವರು ಅಂದೇ ನುಡಿದಿದ್ದರು.

ನೆತನ್ಯಾಹು ಮತ್ತು ಟ್ರಂಪ್ ಅವರ ಖಡಕ್ ಸಂದೇಶ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದು, ಇರಾನ್‌ನ ಪರಮಾಣು ಬೆದರಿಕೆಯನ್ನು ಕೊನೆಗಾಣಿಸಲು ಇದು ಅನಿವಾರ್ಯ ಎಂದಿದ್ದಾರೆ. ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿಯೇ ಇರಾನ್ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಾವು ಇರಾನ್‌ನಲ್ಲಿ ವ್ಯಾಪಕ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ್ದೇವೆ. ಇದು ಅಮೆರಿಕದ ಜನರನ್ನು ರಕ್ಷಿಸಲು ಕೈಗೊಂಡ ಕ್ರಮ, ಎಂದಿರುವ ಟ್ರಂಪ್, ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳಿಗೆ ಶಸ್ತ್ರ ತ್ಯಜಿಸಿ ಇಲ್ಲವೇ ಸಾವಿಗೆ ಸಿದ್ಧರಾಗಿ ಎಂದು ಅಂತಿಮ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಇರಾನ್ ಜನತೆಗೆ ತಮ್ಮ ಸರ್ಕಾರವನ್ನು ತಾವೇ ವಹಿಸಿಕೊಳ್ಳಲು ಇದು ಕೊನೆಯ ಅವಕಾಶ ಎಂದು ಕರೆ ನೀಡಿದ್ದಾರೆ.

ಸ್ತಬ್ಧವಾದ ವಾಯುಮಂಡಲ: ಯುದ್ಧದ ಭೀತಿಯಲ್ಲಿ ಜಗತ್ತು

ದಾಳಿ ಬೆನ್ನಲ್ಲೇ ಇರಾನ್ ತನ್ನ ಇಡೀ ವಾಯುಪ್ರದೇಶವನ್ನು ಮುಚ್ಚಿದೆ. ಯಾವುದೇ ನಾಗರಿಕ ವಿಮಾನಗಳ ಹಾರಾಟಕ್ಕೆ ಅವಕಾಶವಿಲ್ಲ. ಇತ್ತ ಇಸ್ರೇಲ್ ಕೂಡ ಇರಾನ್‌ನಿಂದ ಕ್ಷಿಪಣಿ ಅಥವಾ ಡ್ರೋನ್ ದಾಳಿ ನಡೆಯುವ ಭೀತಿಯಲ್ಲಿ ತನ್ನ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಿದೆ.
ಈಗ ಜಗತ್ತಿನ ಕಣ್ಣು ಇರಾನ್ ಮೇಲಿದೆ. ಇರಾನ್ ಯಾವ ರೀತಿ ಪ್ರತೀಕಾರ ತೀರಿಸಿಕೊಳ್ಳಲಿದೆ? ಇದು ನಿಜಕ್ಕೂ ಬಾಬಾ ವಂಗಾ ಹೇಳಿದಂತೆ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಲಿದೆಯೇ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net