ಜೈಲಿನಲ್ಲಿರುವ ಇಮ್ರಾನ್​​ ಖಾನ್​​ಗೆ ಸೂಕ್ತ ಚಿಕಿತ್ಸೆ ನೀಡಿ: ಗವಾಸ್ಕರ್, ಕಪಿಲ್​ ದೇವ್​ ಸೇರಿ 21 ಕ್ರಿಕೆಟ್​​ ದಿಗ್ಗಜರಿಂದ ಪಾಕ್​ ಸರ್ಕಾರಕ್ಕೆ ಮನವಿ! Cricket Legends on Imran Khan

ಭಾರತದ ಕ್ರಿಕೆಟ್​ ದಿಗ್ಗಜರಾದ ಸುನೀರ್​ ಗವಾಸ್ಕರ್​, ಕಪಿಲ್ ದೇವ್​ ಸೇರಿಂದ ವಿಶ್ವದ 21 ಜನ ಕ್ರಿಕೆಟಿಗರಿಂದ ಪಾಕ್​ ಪ್ರಧಾನಿಗೆ ಪತ್ರ
ಭಾರತದ ಕ್ರಿಕೆಟ್​ ದಿಗ್ಗಜರಾದ ಸುನೀರ್​ ಗವಾಸ್ಕರ್​, ಕಪಿಲ್ ದೇವ್​ ಸೇರಿಂದ ವಿಶ್ವದ 21 ಜನ ಕ್ರಿಕೆಟಿಗರಿಂದ ಪಾಕ್​ ಪ್ರಧಾನಿಗೆ ಪತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದ ಮಾಜಿ ಕ್ರಿಕೆಟ್​ ದಿಗ್ಗಜ ಇಮ್ರಾನ್​ ಖಾನ್​ ಆರೋಗ್ಯದಲ್ಲಿ ವ್ಯತ್ಯಯ
  • ರಾಜಕೀಯ ಕಾರಣದಿಂದ ಇಮ್ರಾನ್​ಗೆ ಸರಿಯಾದ ಚಿಕಿತ್ಸೆ ನೀಡದ ಪಾಕ್​ ಸರ್ಕಾರ
  • ಭಾರತದ ಕ್ರಿಕೆಟ್​ ದಿಗ್ಗಜರಾದ ಸುನೀರ್​ ಗವಾಸ್ಕರ್​, ಕಪಿಲ್ ದೇವ್​ ಸೇರಿಂದ ವಿಶ್ವದ 21 ಜನ ಕ್ರಿಕೆಟಿಗರಿಂದ ಪಾಕ್​ ಪ್ರಧಾನಿಗೆ ಪತ್ರ
ಇಸ್ಲಾಮಾಬಾದ್​: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ವಿಶ್ವದ ಶ್ರೇಷ್ಠ ಆಲ್ ರೌಂಡ ಕ್ರಿಕೆಟರ್​, ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಕ್ರಿಕೆಟ್ ದಿಗ್ಗಜ (Cricket Legends on Imran Khan) ರಾದ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಸೇರಿದಂತೆ ವಿಶ್ವದ 21 ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ನಾಯಕರು ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರಾಜಕೀಯವನ್ನು ಬದಿಗಿಟ್ಟು, ಮಾನವೀಯತೆಯ ನೆಲೆಯಲ್ಲಿ ಇಮ್ರಾನ್ ಖಾನ್ ಅವರಿಗೆ ಕೂಡಲೇ ಸರಿಯಾದ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಈ ಆಟಗಾರರು ಒತ್ತಾಯಿಸಿದ್ದಾರೆ.

ಪತ್ರದಲ್ಲೇನಿದೆ?

1992 ರಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡಕ್ಕೆ ಚೊಚ್ಚಲ ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದ ಇಮ್ರಾನ್​ ಖಾನ್​ ಇಂದು ಅದೇ ದೇಶದ ಸರ್ಕಾರದಿಂದ ಚಿತ್ರಹಿಂಸೆ ಪಡುವಂತಾಗಿದೆ.
ಹೀಗಾಗಿ ಭಾರತದ ಸುನಿಲ್ ಗವಾಸ್ಕರ್, ಕಪಿಲ್ ದೇವ್, ದಿಲೀಪ್ ವೆಂಗ್‌ಸರ್ಕಾರ್ ಜೊತೆಗೆ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ನ ಖ್ಯಾತನಾಮ ಕ್ರಿಕೆಟ್​ಪಟುಗಳು, ಇಮ್ರಾನ್​ ಖಾನ್​ ನಿಮ್ಮ ದೇಶದ ಜೊತೆಗೆ ಕ್ರಿಕೆಟ್​ನ ದಿಗ್ಗಜ ಆಟಗಾರನು ಹೌದು, ಹೀಗಾಗಿ ಅವರ ಆರೋಗ್ಯ ಚೇತರಿಕೊಳ್ಳಲು ಅಗತ್ಯ ವೈದ್ಯಕೀಯ ನೆರವನ್ನು ನೀಡಬೇಕಾಗಿ ಕೇಳಿಕೊಂಡಿದ್ದಾರೆ.

ಇಮ್ರಾನ್ ಖಾನ್​ರನ್ನು ಪರೀಕ್ಷಿಸಲು ಸುಪ್ರೀಂ ಕೋರ್ಟ್ ಸೂಚಿಸಿದ್ದ ಸ್ವತಂತ್ರ ವೈದ್ಯಕೀಯ ಮಂಡಳಿಗೆ ತಡೆ ಒಡ್ಡಿ, ಕೇವಲ ಕೆಲವೇ ಗಂಟೆಗಳಲ್ಲಿ ಅವರನ್ನು ಮರಳಿ ಜೈಲಿಗೆ ಕಳುಹಿಸಿರುವುದನ್ನು ಈ ಪತ್ರದಲ್ಲಿ ತೀವ್ರವಾಗಿ ಖಂಡಿಸಲಾಗಿದೆ.

73 ವರ್ಷ ವಯಸ್ಸಿನ ಇಮ್ರಾನ್ ಖಾನ್ ಅವರ ಬಲಗಣ್ಣಿನ ದೃಷ್ಟಿ ನಷ್ಟವಾಗುತ್ತಿದೆ ಎಂಬ ಗಂಭೀರ ವರದಿಗಳಿದ್ದು, ಇದರ ಬಗ್ಗೆ ಸ್ವತಂತ್ರ ತಜ್ಞರಿಂದ ತಪಾಸಣೆ ನಡೆಸಬೇಕೆಂದು ಆಗ್ರಹಿಸಲಾಗಿದೆ.


ನಾವು ರಾಜಕಾರಣಿಗಳಾಗಿ ಈ ಪತ್ರ ಬರೆಯುತ್ತಿಲ್ಲ. ಕ್ರಿಕೆಟ್ ಮೈದಾನದಲ್ಲಿ ಗಡಿಗಳನ್ನು ಮೀರಿ ಬೆಸೆದ ಬಾಂಧವ್ಯದ ನೆನಪಿನಲ್ಲಿ, ಮಾನವೀಯತೆಯ ದೃಷ್ಟಿಯಿಂದ ಈ ಮನವಿ ಮಾಡುತ್ತಿದ್ದೇವೆ ಎಂದು ಮಾಜಿ ನಾಯಕರು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮಾಜಿ ನಾಯಕರು ಮುಂದಿಟ್ಟಿರುವ 3 ಪ್ರಮುಖ ಬೇಡಿಕೆಗಳು

ಸ್ವತಂತ್ರ ವೈದ್ಯಕೀಯ ತಪಾಸಣೆ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇಮ್ರಾನ್ ಖಾನ್ ಅವರ ವೈಯಕ್ತಿಕ ವೈದ್ಯರು ಮತ್ತು ಕುಟುಂಬದವರನ್ನೊಳಗೊಂಡ ಮಂಡಳಿಯಿಂದ ಆರೋಗ್ಯ ತಪಾಸಣೆ ನಡೆಸುವುದು.
ಕುಟುಂಬ ಭೇಟಿಗೆ ಅವಕಾಶ: ನ್ಯಾಯಾಲಯ ಮರುಸ್ಥಾಪಿಸಿರುವ ಕುಟುಂಬ ಭೇಟಿಗೆ ಯಾವುದೇ ಆಡಳಿತಾತ್ಮಕ ಅಡೆತಡೆಗಳನ್ನು ಮಾಡದಿರುವುದು.
ತಕ್ಷಣದ ಚಿಕಿತ್ಸೆ: ವೈದ್ಯಕೀಯ ವರದಿಯ ಆಧಾರದ ಮೇಲೆ ಯಾವುದೇ ವಿಳಂಬವಿಲ್ಲದೆ ಅಗತ್ಯ ಚಿಕಿತ್ಸೆ ಒದಗಿಸುವುದು.

ಪತ್ರಕ್ಕೆ ಸಹಿ ಮಾಡಿರುವ ಕ್ರಿಕೆಟ್​ ದಿಗ್ಗಜರು!

ಇಮ್ರಾನ್ ಖಾನ್​ ಆರೋಗ್ಯದ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತಾ ಭಾರತದ ಸುನೀರ್​ ಗವಾಸ್ಕರ್​, ಕಪಿಲ್ ದೇವ್​,ದಿಲೀಪ್ ವೆಂಗ್‌ಸರ್ಕಾರ್, ​ಇಂಗ್ಲೆಂಡ್​ನ ಮೈಕೆಲ್ ಅಥರ್ಟನ್, ಮೈಕೆಲ್ ಬ್ರಿಯಾರ್ಲಿ, ಸರ್ ಅಲಸ್ಟೈರ್ ಕುಕ್, ಡೇವಿಡ್ ಗೋವರ್, ನಾಸರ್ ಹುಸೇನ್, ಸರ್ ಆಂಡ್ರ್ಯೂ ಸ್ಟ್ರಾಸ್, ಆಸ್ಟ್ರೇಲಿಯಾದ ಅಲನ್ ಬಾರ್ಡರ್, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಕಿಮ್ ಹ್ಯೂಸ್, ಸ್ಟೀಫನ್ ವಾ ಸಹಿ ಹಾಕಿದರೆ, ವೆಸ್ಟ್ ಇಂಡೀಸ್‌ನ ಸರ್ ಕ್ಲೈವ್ ಲಾಯ್ಡ್, ಶ್ರೀಲಂಕಾದ ಅರ್ಜುನ ರಣತುಂಗ ನ್ಯೂಜಿಲೆಂಡ್‌ನ ಜಾನ್ ರೈಟ್ ಸಹ ಸಹಿ ಮಾಡಿದವರಲ್ಲಿ ಸೇರಿದ್ದಾರೆ.
ಕಳೆದ ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಜೈಲಿನಲ್ಲಿರುವ 73 ವರ್ಷದ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಈ ಜಾಗತಿಕ ಕ್ರಿಕೆಟ್ ದಿಗ್ಗಜರ ಪತ್ರವು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net