ಚಿನ್ನದ ಗಣಿ ಕುಸಿದು ಭೀಕರ ದುರಂತ: 107 ಕಾರ್ಮಿಕರ ದಾರುಣ ಸಾವು; ಮುಂದುವರಿದ ರಕ್ಷಣಾ ಕಾರ್ಯಾಚರಣೆ! Central African Republic Gold Mine Collapse

ದುರ್ಘಟನೆಯಲ್ಲಿ ಸುಮಾರು 107 ಕಾರ್ಮಿಕರ ದಾರುಣ ಅಂತ್ಯ
ದುರ್ಘಟನೆಯಲ್ಲಿ ಸುಮಾರು 107 ಕಾರ್ಮಿಕರ ದಾರುಣ ಅಂತ್ಯ
Published on

ಪ್ರಮುಖ ಮುಖ್ಯಾಂಶಗಳು

  • ಚಿನ್ನದ ಗಣಿ ಕುಸಿದು ಸಂಭವಿಸಿದ ಭೀಕರ ದುರಂತ
  • ದುರ್ಘಟನೆಯಲ್ಲಿ ಸುಮಾರು 107 ಕಾರ್ಮಿಕರ ದಾರುಣ ಅಂತ್ಯ
  • ಇನ್ನೂ ನೂರಾರು ಕಾರ್ಮಿಕರು ಸಿಲುಕಿರುವ ಶಂಕೆ
  • ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಬಾಂಗೈ: ಸೆಂಟ್ರಲ್​ ಆಫ್ರಿಕನ್​ ರಿಪಬ್ಲಿಕ್​ನಲ್ಲಿರುವ ಚಿನ್ನದ ಗಣಿ ಕುಸಿತಗೊಂಡ (Central African Republic Gold Mine Collapse) ಪರಿಣಾಮ ಸುಮಾರು ನೂರಕ್ಕೂ ಅಧಿಕ ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಈ ಘಟನೆಯು ಜಾಂಬೊಯ್​ನಲ್ಲಿರುವ ಪುರಾತನ ಗಣಿಯಲ್ಲಿ ಬುಧವಾರ (ಆ.19) ದುರ್ಘಟನೆ ಸಂಭವಿಸಿದ್ದು, ಅಲ್ಲಿನ ಸ್ವಸಹಾಯ ಗುಂಪಿನವರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾಗಿ ತಿಳಿದು ಬಂದಿದೆ.

100 ಮೃತ ದೇಹ ಪತ್ತೆ!

ಮಾಹಿತಿ ಪ್ರಕಾರ, ಬುಧವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಇಲ್ಲಿವರೆಗೆ ಸುಮಾರು 107 ಕಾರ್ಮಿಕರ ಮೃತದೇಹ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಹಾಗೂ ಇನ್ನೂ ಅನೇಕ ಕಾರ್ಮಿಕರು ಗಣಿಯಡಿಯಲ್ಲಿ ಸಿಲುಕಿದ್ದಾಗಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಅಲ್ಲಿಯ ಸ್ವ-ಸಹಾಯ ಗುಂಪಿನವರು ಹೇಳುವಂತೆ ಸಂಪೂರ್ಣ ಗಣಿಯೇ ಒಮ್ಮೆಲೇ ಕುಸಿತ ಕಂಡ ಹಿನ್ನಲೆ, ಅಧಿಕ ಸಾವು ಸಂಭವಿಸಿದೆ, ನಮಗಿರುವ ಮಾಹಿತಿ ಪ್ರಕಾರ, ಇನ್ನೂ 150-200 ಕಾರ್ಮಿಕರು ಗಣಿಯಲ್ಲಿ ಸಿಲುಕಿದ್ದಾರೆ. ಆದರೆ ಅವರು ಬದುಕಿರುವ ಲಕ್ಷಣ ಬಹಳ ಕಡಿಮೆ ಎಂದು ಹೇಳಿದ್ದಾರೆ.


ಘಟನೆಗೆ ಕಾರಣವೇನು?

ಈ ದುರ್ಘಟನೆ ನಡೆಯಲು ಕಾರಣವೇನು ಎಂದು ಕೇಳಿದರೆ, ಈ ಚಿನ್ನದ ಗಣಿಯು ಕೇಂದ್ರ ಆಫ್ರಿಕಾದಲ್ಲಿರುವ ಅತ್ಯಂತ ಪುರಾತನವಾದ ಗಣಿಯಾಗಿದ್ದು, ಇಲ್ಲಿ ಯಾವುದೇ ಆಧುನಿಕ ತಂತ್ರಜ್ಞಾನದ ಬದಲಿಗೆ, ಸಾಂಪ್ರದಾಯಿಕ ವಿಧಾನದಲ್ಲಿಯೇ ಗಣಿಗಾರಿಕೆ ನಡೆಸಲಾಗುತ್ತದೆ. ಹೀಗಾಗಿ ಇಲ್ಲಿ ಮಣ್ಣಿನ ಸವಕಳಿ ಹೆಚ್ಚಿನದಾಗಿ ನಡೆಯುತ್ತಿತ್ತು. ಯಾವುದೇ ಸುರಕ್ಷತೆ ಇಲ್ಲದೆ ಗಣಿಗಾರಿಕೆ ನಡೆಸಲು ಮುಂದಾದ ಹಿನ್ನಲೆ ಈ ದುರಂತ ಸಂಭವಿಸಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ,

(ಏಜನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net