ಕಳೆದ ವರ್ಷ ಆಗಸ್ಟ್ನಲ್ಲೇ ಹೈಕೋರ್ಟ್ ವಕೀಲರೊಬ್ಬರನ್ನು ಆಯುಕ್ತರನ್ನಾಗಿ ನೇಮಿಸಿ ಧೋನಿ ಹೇಳಿಕೆ ಪಡೆಯಲು ಮುಂದಾದಾಗ ಸಂಪತ್ ಕುಮಾರ್ ಅದನ್ನು ವಿರೋಧಿಸಿದ್ದರು. ವಿಭಾಗೀಯ ಪೀಠದಲ್ಲೂ ಹಿನ್ನಡೆಯಾಗಿದ್ದರೂ, ಈಗ ಸಿಕ್ಕಿರುವ ಈ ಹೊಸ ಆದೇಶ ಪ್ರಕರಣವನ್ನು ಮತ್ತಷ್ಟು ಕುತೂಹಲಕಾರಿ ಹಂತಕ್ಕೆ ಕೊಂಡೊಯ್ದಿದೆ. ಕ್ಯಾಪ್ಟನ್ ಕೂಲ್ ಕೋರ್ಟ್ ಮೆಟ್ಟಿಲೇರಿರುವ ಈ ಬೃಹತ್ ಮೊಕದ್ದಮೆ ಮುಂದಿನ ದಿನಗಳಲ್ಲಿ ಯಾವ ದಿಕ್ಕಿಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ, (ಏಜನ್ಸೀಸ್).