ಭಾರತೀಯ ವಾಯುಪಡೆಯಲ್ಲಿ ಬರೋಬ್ಬರಿ 38 ವರ್ಷಗಳ ಕಾಲ ಅಪ್ರತಿಮ ಸೇವೆ ಸಲ್ಲಿಸಿರುವ ಜಿತೇಂದ್ರ ಮಿಶ್ರಾ, ದೇಶ ಕಂಡ ಅತ್ಯಂತ ದಕ್ಷ ಅಧಿಕಾರಿಗಳಲ್ಲಿ ಒಬ್ಬರು. ಫೈಟರ್ ಪೈಲಟ್ ಆಗಿ, ಯುದ್ಧ ಬೋಧಕರಾಗಿ ಮತ್ತು ಪರೀಕ್ಷಾ ಪೈಲಟ್ ಆಗಿ ಅವರು ಸೇವೆ ಸಲ್ಲಿಸಿದ್ದಾರೆ. ಇವರ ಈ ಅದ್ಭುತ ಸೇವೆಗಾಗಿ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಾದ ಸರ್ವೋತ್ತಮ್ ಯುದ್ಧ ಸೇವಾ ಪದಕ (SYSM), ಅತಿ ವಿಶಿಷ್ಟ ಸೇವಾ ಪದಕ (AVSM), ಮತ್ತು ವಿಶಿಷ್ಟ ಸೇವಾ ಪದಕ (VSM) ಒಲಿದುಬಂದಿವೆ.