ಆದರೆ, ನಂತರದ ದಿನಗಳಲ್ಲಿ ಈ ಸಿನಿಮಾ ಕುರಿತು ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಚಾರ ದೊರೆತ ಪರಿಣಾಮ ನಾಲ್ಕನೇ ವಾರಕ್ಕೆ ಈ ಸಿನಿಮಾ ಸುಮಾರು 28 ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ, ಇಲ್ಲಿವರೆಗೆ ಸುಮಾರು 60 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೂಡಿಕೆಗಿಂತ ಸುಮಾರು 21 ಪಟ್ಟು ಹೆಚ್ಚಿಗೆ ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.