ಸಂದರ್ಶನದಲ್ಲಿ ಆ ದಿನಗಳನ್ನು ನೆನೆಸಿಕೊಂಡ ತೇಜಸ್ವಿನಿ, ಅನುರಾಗ್ ನನಗೆ ಚಿತ್ರಕಥೆ ನೀಡಿ ಓದಲು ಹೇಳಿದರು. ಆದರೆ, ನನಗೆ ಆ ಕಥೆಯಲ್ಲಿ ನಟಿಸಬೇಕಿದ್ದ ಮಹಿಳಾ ಪಾತ್ರಕ್ಕೆ ಅಷ್ಟಾಗಿ ಪ್ರಾಮುಖ್ಯತೆ ಇದೆ ಎನಿಸಲಿಲ್ಲ. ಅದಕ್ಕಿಂತ ಹೆಚ್ಚಾಗಿ ಆ ಪಾತ್ರದಲ್ಲಿ ಬೆತ್ತಲಾಗಿ ನಟಿಸಬೇಕಾದ ಅಗತ್ಯವಿತ್ತು. ಇದನ್ನು ಕೇಳಿದ ತಕ್ಷಣವೇ ನಾನು ಅನುರಾಗ್ ಅವರ ಬಳಿ, ನಿಮಗೇನಾದರೂ ತಲೆ ಕೆಟ್ಟಿದೆಯಾ? ಇದನ್ನು ಮಾಡಲು ಹೇಗೆ ಸಾಧ್ಯ? ಇದು ಹಿಂದಿ ಸಿನಿಮಾ, ನಾನು ಹೀಗೆ ನಟಿಸಿದರೆ ನನ್ನನ್ನು ಮನೆಯಿಂದಲೇ ಹೊರಹಾಕುತ್ತಾರೆ ಎಂದು ನೇರವಾಗಿಯೇ ಹೇಳಿದೆ. ಆದರೆ ಆ ಪಾತ್ರವನ್ನು ಬರೆದಿರುವುದೇ ಆ ರೀತಿ ಎಂದು ಅನುರಾಗ್ ಉತ್ತರಿಸಿದ್ದರು ಎಂದು ತೇಜಸ್ವಿನಿ ಸ್ಪಷ್ಟಪಡಿಸಿದ್ದಾರೆ.