ನಟ ಧ್ರುವ್​ ವಿಕ್ರಮ್​ಗೆ ಚಪ್ಪಲಿಯಲ್ಲಿ ಹೊಡೆದ್ರಾ ನಟಿ ಅನುಪಮಾ ಪರಮೇಶ್ವರನ್​? ಏನಿದು ಹೋಟೆಲ್​ನಲ್ಲಿ ನಡೆದ ಗಲಾಟೆ? Anupama Parameswaran

ನಟ ಧ್ರುವ್​ ವಿಕ್ರಮ್​ಗೆ ಚಪ್ಪಲಿಯಲ್ಲಿ ಹೊಡೆದ್ರಾ ನಟಿ ಅನುಪಮಾ ಪರಮೇಶ್ವರನ್​? ಏನಿದು ಹೋಟೆಲ್​ನಲ್ಲಿ ನಡೆದ ಗಲಾಟೆ? Anupama Parameswaran
ನಟ ಧ್ರುವ್​ ವಿಕ್ರಮ್​ಗೆ ಚಪ್ಪಲಿಯಲ್ಲಿ ಹೊಡೆದ್ರಾ ನಟಿ ಅನುಪಮಾ ಪರಮೇಶ್ವರನ್​? ಏನಿದು ಹೋಟೆಲ್​ನಲ್ಲಿ ನಡೆದ ಗಲಾಟೆ? Anupama Parameswaran
Published on

ಪ್ರಮುಖ ಮುಖ್ಯಾಂಶಗಳು

  • ನಟ ಧ್ರುವ್ ವಿಕ್ರಮ್ ಜೊತೆಗಿನ ಬ್ರೇಕಪ್ ವದಂತಿಯಿಂದ ತೀವ್ರ ಸುದ್ದಿಯಲ್ಲಿದ್ದಾರೆ ನಟಿ ಅನುಪಮಾ ಪರಮೇಶ್ವರನ್
  • ಚೆನ್ನೈ ಹೋಟೆಲ್‌ನಲ್ಲಿ ಧ್ರುವ್ ವಿಕ್ರಮ್ ಮೇಲೆ ಅನುಪಮಾ ಪರಮೇಶ್ವರನ್ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಹರಿದಾಡುತ್ತಿದೆ ವದಂತಿ
  • ಧ್ರುವ್ ವಿಕ್ರಮ್ ಜೊತೆಗಿನ ಪ್ರೇಮ ಸಂಬಂಧ ಮುರಿದುಬಿದ್ದಿದೆ ಎಂಬುದಕ್ಕೆ ನಟಿ ಅನುಪಮಾ ಇನ್‌ಸ್ಟಾಗ್ರಾಮ್ ಪೋಸ್ಟ್ ಸಾಕ್ಷಿಯೇ?
  • ಚೆನ್ನೈನ ಹೋಟೆಲ್ ಒಂದರಲ್ಲಿ ನಡೆದ ಮಾತಿನ ಚಕಮಕಿಯ ನಂತರ ಅಲ್ಲಿಂದ ಹೊರಟು ಹೋದ ನಟ ಧ್ರುವ್ ವಿಕ್ರಮ್?
Anupama Parameswaran : ಪ್ರೇಮಂ ಸಿನಿಮಾ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿರುವ ನಟಿ ಅನುಪಮಾ ಪರಮೇಶ್ವರನ್ ಪ್ರಸ್ತುತ ವದಂತಿಯೊಂದರಿಂದಾಗಿ ಭಾರಿ ಸುದ್ದಿಯಲ್ಲಿದ್ದಾರೆ. ತಮಿಳು ನಟ ಧ್ರುವ್ ವಿಕ್ರಮ್ ಅವರನ್ನು ಅನುಪಮಾ ಪ್ರೀತಿ ಮಾಡುತ್ತಿದ್ದರು ಮತ್ತು ಇದೀಗ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಲಯಾಳಂ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ನಟನಾ ಮುದ್ರೆಯನ್ನು ಒತ್ತಿರುವ ಅನುಪಮಾ ಪರಮೇಶ್ವರನ್ ಅವರು ತಮಿಳು ನಟ ಚಿಯಾನ್ ವಿಕ್ರಮ್ ಅವರ ಪುತ್ರ ಧ್ರುವ್ ವಿಕ್ರಮ್​ರನ್ನು ಪ್ರೀತಿ ಮಾಡುತ್ತಿದ್ದರು ಎಂಬ ಸುದ್ದಿ ದೀರ್ಘಕಾಲದಿಂದ ಹರಿದಾಡುತ್ತಿತ್ತು. ಬೈಸನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸುವಾಗ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು ಎನ್ನಲಾಗಿದೆಯಾದರೂ ಇಬ್ಬರಲ್ಲಿ ಯಾರೊಬ್ಬರೂ ಈವರೆಗೆ ತಮ್ಮ ಸಂಬಂಧವನ್ನು ಅಧಿಕೃತವಾಗಿ ಎಲ್ಲಿಯೂ ಒಪ್ಪಿಕೊಂಡಿಲ್ಲ.
ಸುಮಾರು ಮೂರು ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದ ಈ ಜೋಡಿ ಈಗ ಬೇರೆಯಾಗಿದೆ ಎಂಬ ಸುದ್ದಿಗಳು ಕೂಡ ಬಲವಾಗಿ ಕೇಳಿಬರುತ್ತಿವೆ. ಇತ್ತೀಚೆಗೆ ನಟಿ ಅನುಪಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಸುದೀರ್ಘ ಟಿಪ್ಪಣಿಯೊಂದು ಈ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಒಮ್ಮೆ ಸಂಪೂರ್ಣವಾಗಿ ಮರೆತು ಹೋಗಿದ್ದ ತಮ್ಮ ಸ್ವಂತ ಜೀವನವನ್ನು ಈಗ ಮತ್ತೆ ಪೂರ್ಣ ಹೃದಯದಿಂದ ಪ್ರೀತಿಸಲು ಪ್ರಾರಂಭಿಸಿದ್ದೇನೆ ಎಂದು ಅನುಪಮಾ ಬರೆದುಕೊಂಡಿರುವುದು ಬ್ರೇಕಪ್ ಊಹಾಪೋಹಗಳನ್ನು ಹೆಚ್ಚಿಸಿದೆ.
ಇದರ ಮಧ್ಯೆ ಚೆನ್ನೈನ ಹೋಟೆಲೊಂದರಲ್ಲಿ ನಡೆದಿದೆ ಎನ್ನಲಾದ ಕಹಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಹೋಟೆಲ್‌ನಲ್ಲಿ ಅನುಪಮಾ ಮತ್ತು ಧ್ರುವ್ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಕೋಪಗೊಂಡ ಅನುಪಮಾ, ಧ್ರುವ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಧ್ರುವ್ ಅವರ ನಡವಳಿಕೆಯನ್ನು ಅನುಪಮಾ ಪ್ರಶ್ನಿಸಿದ್ದೇ ಈ ಗಲಾಟೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.
ಈ ಘಟನೆಯ ನಂತರ ನಟ ಧ್ರುವ್ ವಿಕ್ರಮ್ ಹೋಟೆಲ್‌ನಿಂದ ತಕ್ಷಣವೇ ಹೊರಟು ಹೋಗಿದ್ದಾರೆ ಎಂದು ಮಿಡ್ ಡೇ ವರದಿ ಉಲ್ಲೇಖಿಸಿದೆ. ಆದರೆ, ಈ ಘಟನೆ ನಿಜವಾಗಿಯೂ ನಡೆದಿದೆಯೇ ಅಥವಾ ಬರೀ ವದಂತಿಯೇ ಎಂಬ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಈ ಬಗ್ಗೆ ಅನುಪಮಾ ಆಗಲಿ ಅಥವಾ ನಟ ಧ್ರುವ್​ ಆಗಲಿ ಸ್ಪಷ್ಟನೆ ನೀಡುವವರೆಗೂ ಒಂದಲ್ಲ ಒಂದು ವದಂತಿಗಳು ಹರಡುತ್ತಲೇ ಇರುತ್ತವೆ. ಸದ್ಯಕ್ಕೆ ಈ ಘಟನೆ ಹಾಗೂ ಬ್ರೇಕಪ್ ವಿಚಾರಗಳು ಚಿತ್ರರಂಗದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net