ಬ್ಯಾನ್ ಮಾಡಿದ್ರೂ ಬಿಡದ ಪಾಕಿಗಳು: ಲಾಹೋರ್ ಗಲ್ಲಿ ಗಲ್ಲಿಯಲ್ಲಿ ಧುರಂಧರ್ 2 ಹವಾ; ವಿಡಿಯೋ ವೈರಲ್! Dhurandhar 2 in Pakistan
ಮಾರ್ಚ್ 19 ರಂದು ತೆರೆಕಂಡ ಧುರಂಧರ್ 2 ಸಿನಿಮಾ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಾರ್ಚ್ 19 ರಂದು ತೆರೆಕಂಡ ಧುರಂಧರ್ 2 ಸಿನಿಮಾ
ಮೊದಲ ದಿನವೇ ಸುಮಾರು 143 ಕೋಟಿ ಗಳಿಸಿರುವ ಸಿನಿಮಾ
ಪಾಕಿಸ್ತಾನ್ದಲ್ಲಿ ಈ ಸಿನಿಮಾ ಬ್ಯಾನ್
ನಿಷೇಧದ ನಡುವೆ ಸಿನಿಮಾವನ್ನು ಕಾಳಸಂತೆಯಲ್ಲಿ ಖರೀದಿಸಿ ಸಿನಿಮಾ ನೋಡುತ್ತರುವ ಪಾಕ್ ಜನತೆ
ಲಾಹೋರ್: ಗುರುವಾರ (ಮಾರ್ಚ್ 19) ಧುರಂಧರ್ 2: ದಿ ರಿವೆಂಜ್ ಸಿನಿಮಾ ತೆರೆಕಂಡ ಬೆನ್ನಲ್ಲೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಲು ಪ್ರಾರಂಭಿಸಿದೆ. ತೆರೆಕಂಡ ಮೊದಲ ದಿನವೇ ಸುಮಾರು 143 ಕೋಟಿ ಗಳಿಸುವ ಮೂಲಕ ಅತ್ಯಧಿಕ ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆದರೆ ಈ ಸಿನಿಮಾದಲ್ಲಿ ಪಾಕಿಸ್ತಾನ (Dhurandhar 2 in Pakistan) ವನ್ನು ಭಯೋತ್ಪಾದಕ ರಾಷ್ಟ್ರ ಎಂದು ಚಿತ್ರಿಸಿರುವ ಹಿನ್ನಲೆ, ಪಾಕಿಸ್ತಾನದಲ್ಲಿ ಈ ಸಿನಿಮಾದ ಮೊದಲ ಭಾಗ ಹಾಗೂ ಎರಡನೇ ಭಾಗ ಎರಡನ್ನು ನಿಷೇಧಿಸಲಾಗಿದೆ.
ಆದರೂ ಪಾಕಿಸ್ತಾನದ ಜನತೆ ಕಾಳಸಂತೆಯಲ್ಲಿ ಈ ಸಿನಿಮಾವನ್ನು ಖರೀದಿಸಿಕೊಂಡು ನೋಡುತ್ತಿದ್ದಾರೆಂದು ಪಾಕಿಸ್ತಾನದ ಪತ್ರಕರ್ತ ಖಾಲೀದ್ ಮೊಹಮ್ಮದ್ ಖಾಲೀದ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಆದಿತ್ಯ ಧರ್ ನಿರ್ದೇಶನದ ಹಾಗೂ ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಧುರಂಧರ್ ಸಿನಿಮಾವನ್ನು ಪಾಕಿಸ್ತಾನ ಸರ್ಕಾರ ಪ್ರದರ್ಶನವನ್ನು ನಿಷೇಧಿಸಿದೆ. ಈ ಸಿನಿಮಾದಲ್ಲಿ ಪಾಕಿಸ್ತಾನ ಒಂದು ಭಯೋತ್ಪಾದಕ ದೇಶ, ಇದು ಭಾರತದಲ್ಲಿ ಭಯೋತ್ಪಾದಕತೆಯನ್ನು ಭಿತ್ತಲು ಪ್ರಯತ್ನಿಸುತ್ತಿರುತ್ತದೆ, ಎಂದು ಚಿತ್ರಿಸಿದ ಕಾರಣ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ.
ಸರ್ಕಾರ ಈ ಸಿನಿಮಾವನ್ನು ಬ್ಯಾನ್ ಮಾಡಿದ್ದರೂ ಸಹ ಅಲ್ಲಿಯ ಜನರು, ಭಾರತ ನಮ್ಮ ದೇಶವನ್ನು ಯಾವ ರೀತಿಯಲ್ಲಿ ಚಿತ್ರಿಸಿದೆ ಎಂದು ತಿಳಿಯುವ ಕಾತುರತೆಯಿಂದ, ಕಾಳಸಂತೆಯಲ್ಲಿ ಈ ಸಿನಿಮಾವನ್ನು ಖರೀದಿಸಿ ನೋಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಪಾಕ್ ಪತ್ರಕರ್ತ ಖಾಲೀದ್ ಮೊಹಮ್ಮದ್ ಖಾಲೀದ್, ಧುರಂಧರ್ ಸಿನಿಮಾವನ್ನು ಲಾಹೋರಿನಲ್ಲಿ ನೋಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಿನಿಮಾ ಎಷ್ಟು ಉತ್ತಮವಾಗಿದೆ ಎಂದರೆ, ಶತ್ರು ದೇಶ ಸಹ ಸಿನಿಮಾ ನೋಡುವಂತಾಗಿದೆ ಎಂದು ಒಬ್ಬರು ಬರೆದರೆ, ಕರಾಚಿಯಲ್ಲಿ ನಡೆದ ಘಟನೆಯನ್ನು ಲಾಹೋರಿನ ಜನ ನೋಡುತ್ತಿದ್ದಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಧುರಂಧರ್ 2 ಇದು ಧುರಂಧರ್ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ರಾಕೇಶ್ ಬೇಡಿ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಡ್ಯಾನಿಶ್ ಇಕ್ಬಾಲ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್).