'ನಮ್ಮ ಮನೆಯ ದುಷ್ಟ ಬೆಕ್ಕಿನಿಂದ ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆ...'-ಬೇಸ್ತು ಬಿದ್ದ ಪತಿ ಮಹಾಶಯನ ಅಳಲು

Bekku
Published on

ನಾನು ಸಾಕಿದ ಬೆಕ್ಕು ತುಂಬ ದುಷ್ಟ...ಬರೀ ಒಂದು ವರ್ಷವಷ್ಟೇ ಆಗಿದೆ. ಆದರೆ ನನ್ನ ಪತ್ನಿ ಗರ್ಭಿಣಿಯಾಗಲು ಅದೇ ಕಾರಣ...!

ಹೀಗೊಂದು ವಿಚಿತ್ರ, ಗೊಂದಲಮಯ ಹೇಳಿಕೆ ನೀಡಿದ್ದು ಹಾಲೆಂಡ್​ನ ವ್ಯಕ್ತಿ. ಹಾಲೆಂಡ್​ನ ಈ ದಂಪತಿಗೆ ಒಂದು ವರ್ಷದ ಹಿಂದೆ ಮೊದಲ ಮಗು ಹುಟ್ಟಿದೆ. ಆದರೆ ಮಹಿಳೆಗೆ ಚೊಚ್ಚಲ ಹೆರಿಗೆ ತುಂಬ ಕಷ್ಟವಾಗಿತ್ತು. ಹೆರಿಗೆಯ ದಿನಕ್ಕೂ ಎರಡು ತಿಂಗಳ ಮೊದಲೇ ಮಗು ಹುಟ್ಟಿತ್ತು. ಇದರಿಂದಾಗಿ ಮಹಿಳೆಯೂ ಕೂಡ ದುರ್ಬಲರಾಗಿ, ಅಶಕ್ತರಾಗಿದ್ದರು.

ಹಾಗಾಗಿ ಮತ್ತೊಂದು ಮಗುವಿಗೆ ಅವಸರ ಮಾಡುವುದು ಬೇಡ..ಇನ್ನೂ ಎರಡು ಮೂರು ವರ್ಷ ಮಗು ಆಗದಂತೆ ಮುನ್ನೆಚ್ಚರಿಕೆ ವಹಿಸಲು ಅವರು ನಿರ್ಧರಿಸಿದ್ದರು.

ಮೊದಲು ಮಹಿಳೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಈ ಮಾತ್ರೆಗಳಿಂದ ಅವರ ಆರೋಗ್ಯದಲ್ಲಿ ತುಂಬ ಏರುಪೇರಾಗಲು ಶುರುವಾಯಿತು. ದೇಹದ ತೂಕ ಇಳಿಯತೊಡಗಿತು. ಮಾತ್ರೆಯಿಂದ ವ್ಯತಿರಕ್ತ ಪರಿಣಾಮ ಆಗುತ್ತಿರುವುದನ್ನು ಗಮನಿಸಿದ ದಂಪತಿ, ಇನ್ನು ಮುಂದೆ ಕಾಂಡೊಮ್​ ಬಳಕೆ ಮಾಡಲು ನಿರ್ಧರಿಸಿದರು.

ಮುಂದೇನಾಯಿತು ಎಂದು ಬೆಕ್ಕಿನಿಂದ ಬೇಸ್ತು ಬಿದ್ದ ಪತಿಯೇ ಹೇಳಿಕೊಂಡಿದ್ದಾರೆ. ನನ್ನ ಪತ್ನಿಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಾನು ಕಾಂಡೋಮ್​ ಬಳಕೆಗೆ ಸಲಹೆ ನೀಡಿದರೆ. ಅದರಂತೆ ಒಂದಷ್ಟು ವಿವಿಧ ಬಣ್ಣಗಳ ಕಾಂಡೊಮ್​ ತಂದು, ಇಯರ್​ ಬಡ್​ ಸಂಗ್ರಹಿಸಿಡುವ ಬಾಕ್ಸ್​ನಲ್ಲಿ ಇಟ್ಟಿದ್ದೆ. ಆ ಬಾಕ್ಸ್​ನ್ನು ಬೆಡ್​ರೂಂಗೆ ಅಟ್ಯಾಚ್​ ಆಗಿರುವ ಬಾತ್​ರೂಂ ಸಮೀಪ ಇರುವ ಒಂದು ಡ್ರಾಯರ್​ನಲ್ಲಿ ಇಟ್ಟಿದ್ದೆ. ಇದನ್ನೂ ಓದಿ: ದೇಶದ 18 ಕೋಟಿ ಜನರಿಗೆ ಈಗಾಗ್ಲೇ ಕರೊನಾ ಬಂದು ಹೋಗಿದೆ: ಕರ್ನಾಟಕಕ್ಕೂ ಸಿಕ್ತು ಗುಡ್​ ನ್ಯೂಸ್​!

ನಾವು ರಾತ್ರಿ ಸಂಭೋಗ ನಡೆಸುವ ಸಮಯದಲ್ಲಿ ಕತ್ತಲಲ್ಲೇ ಕಾಂಡೊಮ್​​ನ್ನು ತೆಗೆದು, ಧರಿಸುತ್ತಿದ್ದೆ. ಯಾವತ್ತೂ ಗಮನಿಸಿರಲಿಲ್ಲ.

ಒಂದು ದಿನ ನನ್ನ ಪತ್ನಿಗೆ ವಾಕರಿಕೆ ಶುರುವಾಯಿತು. ಅದೇನೋ ತಾನು ಗರ್ಭಿಣಿಯಾಗಿದ್ದೇನೆ ಎಂಬ ಅನುಮಾನ ಅವಳಿಗೆ ಶುರುವಾಯಿತು. ಮನೆಯಲ್ಲಿಯೇ ಪರೀಕ್ಷೆ ಮಾಡಿಕೊಂಡಾಗ, ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವುದು ಗೊತ್ತಾಯಿತು. ಅಯ್ಯೋ ಇದೇನಾಯಿತು ಎಂದು, ಕೂಡಲೇ ಅನುಮಾನ ಬಂದು ಕಾಂಡೊಮ್​ ಇಟ್ಟಿದ್ದ ಡ್ರಾಯರ್​ ತೆಗೆದು ನೋಡಿದರೆ ಅಲ್ಲಿ ನನಗೆ ಶಾಕ್​ ಕಾದಿತ್ತು ಎಂದು ಅವರು ಹೇಳಿದ್ದಾರೆ.

ಅಷ್ಟಕ್ಕೂ ಇಲ್ಲಿ ವಿಲನ್​ ಆಗಿದ್ದು ಅವರ ಮನೆಯ ಬೆಕ್ಕಿನ ಮರಿ. ನಾವು ಸಾಕಿರುವ ಬೆಕ್ಕಿಗೆ ಬರೀ ಒಂದು ವರ್ಷ. ಆದರೆ ಸಿಕ್ಕಾಪಟೆ ಕಿಲಾಡಿ. ಸಿಕ್ಕಿದ್ದನ್ನೆಲ್ಲ ಹಿಡಿದು ಎಳೆಯುತ್ತದೆ..ಕಚ್ಚಿ ತಿನ್ನುತ್ತದೆ. ಅದರಲ್ಲೂ ಡ್ರಾಯರ್​ಗಳನ್ನು ಎಳೆಯುವುದು, ಅದರಲ್ಲಿರುವ ವಸ್ತುಗಳನ್ನು ಬಾಯಲ್ಲಿ ಕಚ್ಚಿ ಹೊರಗೆ ಹಾಕುವುದು ಅದರ ಅಭ್ಯಾಸ. ಅಂತೆಯೇ ನಾನು ಇಟ್ಟಿದ್ದ ಕಾಂಡೊಮ್​ಗಳಿಗೂ ಅದೇ ಗತಿ ಬಂದಿತ್ತು. ಅದ್ಯಾವ ಸಮಯದಲ್ಲಿ ಡ್ರಾಯರ್​ ಎಳೆದು ಈ ಕಿತಾಪತಿ ನಡೆಸಿತ್ತೋ ಗೊತ್ತಿಲ್ಲ. ಬಹುತೇಕ ಕಾಂಡೊಮ್​ಗಳೆಲ್ಲ ಹಾಳಾದವೇ ಇದ್ದವು. ಹರಿದಿದ್ದವು...ಮೂರ್ನಾಲ್ಕು ತೂತುಗಳು ಉಂಟಾಗಿದ್ದವು. ಇದನ್ನೂ ಓದಿ: ಚೀನಾದಲ್ಲಿ ಚಿತ್ರಮಂದಿರ ಓಪನ್​; ಮೊದಲ ದಿನವೇ ದಾಖಲೆಯ ಟಿಕೆಟ್ ಮಾರಾಟ!

ಬಹುತೇಕ ರಾತ್ರಿಗಳಲ್ಲಿ ನಾವೂ ಸಹ ಮದ್ಯಪಾನ ಮಾಡಿ, ಸೆಕ್ಸ್​ನಲ್ಲಿ ತೊಡಗುತ್ತೇವೆ. ಹಾಗಾಗಿ ಕಾಂಡೊಮ್​ಗಳನ್ನು ಪರೀಕ್ಷಿಸಿಯೂ ಇರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಹಾಗೇ ಈಗ ಪತ್ನಿ ಗರ್ಭಿಣಿಯಾದ ಮೇಲೆ ಅವಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇವೆ. ನನ್ನ ಮಕ್ಕಳು ದೊಡ್ಡವರಾದ ಮೇಲೆ ಅವರಿಗೂ ಈ ಕತೆ ಹೇಳಬೇಕು ಎಂದುಕೊಂಡಿರುವೆ. ನನಗೇನೂ ಮುಜುಗರವಿಲ್ಲ ಎಂದು ಆ ಪತಿ ಮಹಾಶಯ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net