

ಬೆಂಗಳೂರು: ಇಂಗ್ಲೆಂಡ್ಗೆ ತೆರಳುವುದಕ್ಕೂ ಮುನ್ನ ಭಾರತದಲ್ಲಿರುವ ಪತ್ನಿ ಸ್ಟಾರ್ ಟೆನಿಸ್ ಪಟು ಸಾನಿಯಾ ಮಿರ್ಜಾ ಹಾಗೂ ಮಗ ಇಜಾನ್ ಮಿರ್ಜಾ ಮಲಿಕ್ ಅವರನ್ನು ನೋಡುವ ಹಂಬಲಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ಶೋಯಿಬ್ ಮಲಿಕ್ ಆಸೆ ಕೈಗೂಡುವುದು ಅನುಮಾನವಾಗಿದೆ. ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧ ಜುಲೈ 31ರವರೆಗೂ ವಿಸ್ತರಣೆಯಾಗಿದ್ದರೆ, ಜುಲೈ 24 ರಂದು ಶೋಯಿಬ್ ಇಂಗ್ಲೆಂಡ್ನಲ್ಲಿರುವ ತಂಡ ಕೂಡಿಕೊಳ್ಳಬೇಕಿದೆ. ಇಂಗ್ಲೆಂಡ್ ಪ್ರವಾಸದ ಬಳಿಕವಷ್ಟೇ ಶೋಯಿಬ್ ಮಲಿಕ್ಗೆ ಪತ್ನಿ ಹಾಗೂ ಮಗನನ್ನು ನೋಡುವ ಭಾಗ್ಯ ಒಲಿಯಲಿದೆ. ಲಾಕ್ಡೌನ್ನಿಂದ ಶೋಯಿಬ್ ಮಲಿಕ್-ಸಾನಿಯಾ ಮಿರ್ಜಾ ಕಳೆದ 5 ತಿಂಗಳಿಂದ ಭೇಟಿಯಾಗಿಲ್ಲ.
ಇದನ್ನೂ ಓದಿ: ದೀಪಾವಳಿವರೆಗೆ ನಡೆಯುತ್ತಾ ಐಪಿಎಲ್ ಹಬ್ಬ?
ಹೈದರಾಬಾದ್ನಲ್ಲಿರುವ ಸಾನಿಯಾ ಮಿರ್ಜಾ, ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಮಗನೊಂದಿಗಿರುವ ವಿಡಿಯೋ ಶೇರ್ ಮಾಡಿದ್ದರು. ಮೈದಾನದಲ್ಲಿ ಅಂಪೈರ್ಗಳು ನೀಡುವಂತೆ ಬೌಂಡರಿ, ಸಿಕ್ಸರ್ ಸಿಗ್ನಲ್ಗಳನ್ನು ಇಜಾನ್ ಮಾಡಿ ತೋರಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.