ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಹಲವು ದಿನಗಳಿಂದ ಇದ್ದ ಕರೊನಾ ಗಂಭೀರ ಸ್ಥಿತಿಯು ಸುಧಾರಿಸುವ ಸುಳಿವು ಕಾಣಿಸುತ್ತಿದೆ. ದೆಹಲಿ ನಗರದ ಕರೊನಾ ಸೋಂಕಿನ ದರದಲ್ಲಿ ಇಳಿಕೆಯಾಗುವುದರೊಂದಿಗೆ, ಆಕ್ಸಿಜನ್ ಮತ್ತು ಬೆಡ್ ಲಭ್ಯತೆ ಸಾಕಷ್ಟಿದೆ ಎನ್ನಲಾಗಿದೆ.
ದೆಹಲಿಯ ಆಕ್ಸಿಜನ್ ಅಗತ್ಯವು ದಿನಕ್ಕೆ 700 ಮೆಗಾಟನ್ಗಳಿಂದ 582 ಮೆಗಾಟನ್ಗಳಿಗೆ ಇಳಿದಿದೆ. ಆದ್ದರಿಂದ ಹೆಚ್ಚುವರಿಯಾಗಿರುವ ಆಕ್ಸಿಜನ್ಅನ್ನು ಬೇರೆ ರಾಜ್ಯಗಳಿಗೆ ನೀಡಬಹುದು ಎಂದು ದೆಹಲಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಡೆಪ್ಯುಟಿ ಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಇಂದು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಸೋಡಿಯಾ, ನಗರದಲ್ಲಿ ದಿನಂಪ್ರತಿ ದಾಖಲಾಗುತ್ತಿರುವ ಸೋಂಕಿನ ಪ್ರಮಾಣವೂ ಕಡಿಮೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮೂರ್ನಾಲ್ಕು ಸಾವಿರ ರೂ. ಕೊಟ್ರೆ ಪಾಸಿಟಿವ್ನೂ ಆಗ್ತಿತ್ತು ನೆಗೆಟಿವ್- ಸಿಕ್ಕಿಬಿದ್ದ ಕಿಂಗ್ಪಿನ್!
“ಹೊಸ ಪ್ರಕರಣಗಳ ಸಂಖ್ಯೆಯು 15 ದಿನಗಳ ಹಿಂದೆ 28,000 ಇದ್ದಿದ್ದು ಇದೀಗ 10,400 ಕ್ಕೆ ಇಳಿದಿದೆ. ಪಾಸಿಟಿವಿಟಿ ರೇಟ್ ಕೂಡ ಶೇ. 35 ರಿಂದ ಶೇ. 14 ಕ್ಕೆ ಇಳಿದಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ಈಗ ಹೆಚ್ಚು ಬೆಡ್ಗಳು ಲಭ್ಯವಿದ್ದು, ಆಕ್ಸಿಜನ್ ಬೇಡಿಕೆಯೂ ತಗ್ಗಿದೆ” ಎಂದು ಸಿಸೋಡಿಯಾ ತಿಳಿಸಿದ್ದಾರೆ. (ಏಜೆನ್ಸೀಸ್)
ಲಸಿಕೆ ತಾಂತ್ರಿಕ ಸಮಿತಿ ಶಿಫಾರಸು : ಕೋವಿಶೀಲ್ಡ್ ಡೋಸ್ಗಳ ಅಂತರ ಹೆಚ್ಚಿಸಿ, ಸೋಂಕಿತರು 6 ತಿಂಗಳು ಕಾಯಿರಿ