ನವದೆಹಲಿ : ಭಾರತದಲ್ಲಿ ಕರೊನಾ ಲಸಿಕೆ ಪಡೆಯುವ ಬಗ್ಗೆ ಹಲವು ಸಲಹೆಗಳನ್ನು ಲಸಿಕೆಯ ಬಗೆಗಿನ ತಾಂತ್ರಿಕ ಸಮಿತಿಯಾದ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಷನ್ (ಎನ್ಟಿಎಜಿಐ) ನೀಡಿದೆ. ಇದರ ಪ್ರಕಾರ ಕೋವಿಶೀಲ್ಡ್ ಲಸಿಕೆಯ ಮೊದಲನೇ ಡೋಸ್ ಪಡೆದ ನಂತರ 12 ರಿಂದ 16 ವಾರಗಳ ಅಂತರ ಬಿಟ್ಟು ಎರಡನೇ ಡೋಸ್ ಕೊಟ್ಟರೆ ಆ ಲಸಿಕೆಯ ಪರಿಣಾಮಕಾರಿತ್ವ ಇನ್ನೂ ಹೆಚ್ಚಲಿದೆ ಎನ್ನಲಾಗಿದೆ.
ಹಾಲಿ ಕೋವಿಶೀಲ್ಡ್ ಎರಡನೇ ಡೋಸ್ ಪಡೆಯಲು ಇರುವ 4 ರಿಂದ 8 ವಾರಗಳ ಅಂತರವನ್ನು ಏರಿಸಿರುವ ಎನ್ಟಿಎಜಿಐ, ಕೋವಾಕ್ಸಿನ್ಗೆ ಈ ರೀತಿಯ ಯಾವುದೇ ಬದಲಾವಣೆಯನ್ನು ಹೇಳಿಲ್ಲ. ಸಮಿತಿಯ ಇತರ ಶಿಫಾರಸುಗಳೆಂದರೆ :-
* ಕರೊನಾ ಸೋಂಕಿಗೆ ಒಳಗಾಗಿರುವವರು, ಗುಣಮುಖರಾಗಿ ಆರು ತಿಂಗಳು ಕಳೆಯುವವರೆಗೆ ಲಸಿಕೆ ಪಡೆಯುವುದನ್ನು ಮುಂದೂಡಬೇಕು.
* ಗರ್ಭಿಣಿಯರು ಭಾರತದಲ್ಲಿ ಲಭ್ಯವಿರುವ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆಗಳಲ್ಲಿ ಯಾವುದನ್ನು ಬೇಕಾದರೂ ಪಡೆಯಬಹುದು.
* ಹೆರಿಗೆಯ ನಂತರ ಮಗುವಿಗೆ ಹಾಲು ಕುಡಿಸುತ್ತಿರುವ ಬಾಣಂತಿಯರು ಯಾವುದೇ ಸಮಯದಲ್ಲಿ ಬೇಕಾದರೂ ಲಸಿಕೆ ಪಡೆಯಬಹುದು.
ಎನ್ಟಿಎಜಿಐನ ಈ ಶಿಫಾರಸುಗಳನ್ನು ಕೋವಿಡ್-19 ಲಸಿಕೆ ನಿರ್ವಹಣೆಗಾಗಿ ರಚಿಸಲಾಗಿರುವ ರಾಷ್ಟ್ರೀಯ ತಜ್ಞರ ಗುಂಪಿಗೆ ಕಳುಹಿಸಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)
ಜೂನ್ 1 ರವರೆಗೆ ಮಹಾ ಲಾಕ್ಡೌನ್ ವಿಸ್ತರಣೆ ; ರಾಜ್ಯ ಪ್ರವೇಶಿಸಲು ನೆಗೆಟಿವ್ ವರದಿ ಕಡ್ಡಾಯ
ಲಸಿಕೆ ಪಡೆಯಲು ಹೋದ ಆಟೋ ಡ್ರೈವರ್… ಮನೆಗೆ ವಾಪಸಾದಾಗ ಅಲ್ಮೆರಾ ಖಾಲಿ !