ಸಂಗಾತಿ ಇಲ್ಲದೆ ಹೋಟೆಲ್​ಗೆ ಒಬ್ಬರು ಹೋಗಲು ಸಾಧ್ಯವೆ?; BCCI ಹೊಸ ನಿಯಮಗಳ ಬಗ್ಗೆ ಟೀಕೆ ಮಾಡಿದ ಮೈಕಲ್​​ ಕ್ಲಾರ್ಕ್​ 

blank

ನವದೆಹಲಿ: ಟೀಮ್ ಇಂಡಿಯಾದಲ್ಲಿ ಶಿಸ್ತು ಮತ್ತು ಏಕತೆಯನ್ನು ಮೂಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ವಿಶೇಷವಾಗಿ ಹೊಸ ನಿಯಮಗಳನ್ನು ಹೊರಡಿಸಿದೆ. ಆಟಗಾರರು ಈ ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಎಚ್ಚರಿಸಿದೆ. ಇದೀಗ ಈ ಹೊಸ ರೂಲ್ಸ್​ಗಳ ಬಗ್ಗೆ ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್​​ ಮೈಕಲ್​​ ಕ್ಲಾರ್ಕ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ:ಚನ್ನಳ್ಳಿ ಗ್ರಾಪಂನಲ್ಲಿ ಸರ್ಕಾರದ ಹಣ ದುರುಪಯೋಗ ?; ಅತಿವೃಷ್ಠಿಗೆ ಹಾನಿಗೀಡಾದ ಮನೆಗಳಿಗೆ ಪರಿಹಾರದಲ್ಲಿ ಅವ್ಯವಹಾರ ಆರೋಪ

ಈ ಹೊಸ ನಿಯಮಗಳ ಪ್ರಕಾರ, ಇಡೀ ಪಂದ್ಯಾವಳಿಯಲ್ಲಿ ಪತ್ನಿಯರು ಆಟಗಾರರೊಂದಿಗೆ ಇರುವಂತಿಲ್ಲ. ಕುಟುಂಬವು 2 ವಾರಗಳವರೆಗೆ ಮಾತ್ರ ಒಟ್ಟಿಗೆ ಇರಬಹುದು. ಎಲ್ಲಾ ಆಟಗಾರರು ತಂಡದ ಬಸ್‌ನಲ್ಲಿ ಪ್ರಯಾಣಿಸಬೇಕು ಎಂಬುದು ಇದೆ. ಈ ವಿಷಯದ ಬಗ್ಗೆ ಎಲ್ಲಾ ಆಟಗಾರರು ತಮ್ಮ ಪತ್ನಿಯರನ್ನು ತಮ್ಮೊಂದಿಗೆ ಕರೆದೊಯ್ಯಲು ಅವಕಾಶ ನೀಡುವಂತೆ ಆಟಗಾರರು ಒತ್ತಡ ಹೇರಿದ್ದರು ಎಂದು ಹೇಳಲಾಗಿದೆ. ಆದರೆ, ಬಿಸಿಸಿಐ ಮಾತ್ರ ಇದಕ್ಕೆಲ್ಲ ಸೊಪ್ಪು ಹಾಕದೆ ಕಠಿಣ ನಿಯಮಗಳನ್ನು ಜಾರಿ ಮಾಡಿದೆ.

ಇದನ್ನೂ ಓದಿ:ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಮೈಕಲ್​​ ಕ್ಲಾರ್ಕ ಹೇಳಿದ್ದೇನು?

45 ದಿನ ಪ್ರವಾಸದಲ್ಲಿ 15 ದಿನಗಳು ಮಾತ್ರ ಕುಟುಂಬದ ಜತೆ ಕಾಲ ಕಳೆಯಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಇದು ಕುಟುಂಬದಿಂದ ದೂರ ಇರಲು ತುಂಬಾ ಕಷ್ಟಕರವಾಗಲಿದೆ ಎಂದು ಆಟಗಾರರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

‘ನಾನು ನನ್ನ ವೃತ್ತಿ ಜೀವನದುದ್ದಕ್ಕೂ ಕಷ್ಟಪಟ್ಟಿದ್ದೇನೆ. ಆಟದ ಜತೆಯಲ್ಲಿಯೆ ಕುಟುಂಬದ ಜತೆ ಕಾಲಕಳೆದಿದ್ದು ಎರಡು ಕಡೆ ಸಮತೋಲನ ಮಾಡಿದ್ದೇನೆ. ಕೆಲ ಕಠಿಣ ಪರಿಸ್ಥಿತಿಗಳಲ್ಲಿ ಕುಟುಂಬವನ್ನು ತೊರೆದು ಆಟವಾಡಿದ್ದೇನೆ. ಕುಟುಂಬದಿಂದ ದೂರು ಇದ್ದು ಆಟ ಆಡುವುದು ಕಷ್ಟಕರ’ ಎಂದು ಕ್ಲಾರ್ಕ್​ ಹೇಳಿದ್ದಾರೆ.

ಇದನ್ನೂ ಓದಿ:ರಾಷ್ಟ್ರ ಸಿಂಚನ ಆನ್‌ಲೈನ್ ನೃತ್ಯ ಸ್ಪರ್ಧೆ – ಗಣರಾಜ್ಯೋತ್ಸವ ನಿಮಿತ್ತ ಮುಳಿಯ ಜ್ಯವೆಲ್ಸ್ ಆಯೋಜನೆ

ಎರಡು ಕಡೆ ಬ್ಯಾಲೆನ್ಸ್​ ಮಾಡುವುದು ತುಂಬಾ ಕಷ್ಟ. ಒತ್ತಡ ಆಟಗಳ ಬಳಿಕ ರಿಲ್ಯಾಕ್ಸ್​ ಮಾಡಲು ಮತ್ತು ಭಾವನೆಗಳನ್ನು ಹೇಳಿಕೊಳ್ಳಲು ಕುಟುಂಬ ಇರಬೇಕು. ಸಂಗಾತಿ ಜತೆ ಇಲ್ಲದಿದ್ದಾರೆ ಒಬ್ಬರೇ ಬಾರ್​ ಮತ್ತು ರೆಸ್ಟೋರೆಂಟ್​​ಗೆ ಅನುಮತಿ ನೀಡುತ್ತಾರೆಯೇ? ಎಂದು ಪ್ರಶ್ನಿಸಿದ ಕ್ಲಾರ್ಕ್​ ಈ ನಿಯಮಗಳು ಅದೇಗೆ ವರ್ಕ್​ ಆಗುತ್ತೆ ಎಂದು ನನಗೆ ತಿಳಿಯದು ಎಂದು ಹೇಳಿದ್ದಾರೆ.(ಏಜೆನ್ಸೀಸ್​)

Champions Trophy 2025: ಟೀಮ್​​ ಇಂಡಿಯಾ ಜರ್ಸಿ ಮೇಲೆ ‘ಪಾಕಿಸ್ತಾನ’ ಎಂಬ ಮುದ್ರೆಗೆ ಸಮ್ಮತಿಸಿದ ಬಿಸಿಸಿಐ

Share This Article

ನರ ದೌರ್ಬಲ್ಯಕ್ಕೆ ನೆಲ್ಲಿಕಾಯಿಯೇ ರಾಮಬಾಣ! ಇದರ ಅನೇಕ ಪ್ರಯೋಜನಗಳ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ | Gooseberry

Gooseberry : ಪ್ರಕೃತಿಯಲ್ಲಿ ಹಲವು ರೀತಿಯ ಔಷಧಿಗಳಿವೆ. ಅವು ನಮ್ಮ ಕಣ್ಣಿಗೆ ಗೋಚರಿಸುತ್ತಿದ್ದರೂ ಅವುಗಳಲ್ಲಿರುವ ವಿಶೇಷ…

ಕೊರಿಯನ್ನರು, ಚೀನಿಯರು, ಜಪಾನಿಯರು ರಾತ್ರಿ ಹೊತ್ತು ಸ್ನಾನ ಮಾಡೋದೇಕೆ?ಅಚ್ಚರಿಯ ಮಾಹಿತಿ ಇಲ್ಲಿದೆ..! Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನಿ! ಅನಾರೋಗ್ಯ ದೂರ ಮಾಡಿ…Mango

ಬೆಂಗಳೂರು: ( Mango ) ಬೇಸಿಗೆಯಲ್ಲಿ  ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.…