Champions Trophy 2025: ಟೀಮ್​​ ಇಂಡಿಯಾ ಜರ್ಸಿ ಮೇಲೆ 'ಪಾಕಿಸ್ತಾನ' ಎಂಬ ಮುದ್ರೆಗೆ ಸಮ್ಮತಿಸಿದ ಬಿಸಿಸಿಐ

dk (63)
Published on

ICC Champions Trophy 2025:ಈ ಬಾರಿಯ ಚಾಂಪಿಯನ್​ ಟ್ರೋಫಿ ಫೆ.19ರಂದು ಆರಂಭವಾಗಲಿದ್ದು ಹೈಬ್ರಿಡ್​ ಮಾದರಿಯಲ್ಲಿ ಪಾಕಿಸ್ತಾನ ಮತ್ತು​ ಯುಎಇ ರಾಷ್ಟ್ರಗಳಲ್ಲಿ ನಡೆಯಲಿದೆ. ಐಸಿಸಿ ಚಾಂಪಿಯನ್​​ ಟ್ರೋಫಿ ಘೋಷಣೆಯಾದಗಿನಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ಒಂದಿಲ್ಲೊಂದು ವಿವಾದಗಳು ನಡೆಯುತ್ತಲಿವೆ.

ಹೌದು, ಇದೀಗ 'ICC Champions Trophy 2025 Pakistan' ಎಂಬ ಮುದ್ರೆಯನ್ನು ಟೀಮ್​ ಇಂಡಿಯಾದ ಜರ್ಸಿ ಮೇಲೆ ಮುದ್ರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಅಧಿಕಾರಿಗಳು ನಿರಕಾರಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ(PCB) ಬುಧವಾರ ಆರೋಪಿಸಿತ್ತು. ಆದರೆ, ಈ ಆರೋಪವನ್ನು ಬಿಸಿಸಿಐ ಅಧಿಕಾರಿಗಳು ಇದೀಗ ತಳ್ಳಿ ಹಾಕಿದ್ದಾರೆ.

ಭಾರತ ತಂಡ ಮತ್ತು ಬಿಸಿಸಿಐ ಮಂಡಳಿ, ಅಂತರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ನಿರ್ದೇಶನಕ್ಕೆ ಬದ್ಧವಾಗಿರುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜೀತ್​ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಈ ಬಾರಿಯ ಟ್ರೋಫಿಯ ಅತಿಥ್ಯ ವಹಿಸಿದೆ. ಐಸಿಸಿ ಮಾನದಂಡ ಮತ್ತು ಹೊಸ್ಟಿಂಗ್​​ನ ಎಲ್ಲಾ ಹಕ್ಕುಗಳನ್ನು ಹೊಂದಿದೆ. ಹೀಗಾಗಿ, ಲೋಗೊದ ಕೆಳಗೆ 'ಪಾಕಿಸ್ತಾನ' ಹೆಸರಿನ ಮುದ್ರೆ ಇದ್ದೆ ಇರುತ್ತದೆ. ಇದಕ್ಕೆ ನಮ್ಮದು ಯಾವುದೇ ತಕಾರರು ಇಲ್ಲ. ಅವರು ಮಾಡುತ್ತಿರುವ ಆರೋಪ ಸುಳ್ಳು ಎಂದು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಪಿಸಿಬಿ ಹೇಳಿದ್ದೇನು?

ಬಿಸಿಸಿಐ ಅಧಿಕಾರಿಗಳು ಕ್ರಿಕೆಟ್‌ನಲ್ಲಿ ರಾಜಕೀಯ ತರುತ್ತಿದ್ದಾರೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ಹೇಳಿಕೊಂಡಿದಾರೆ. ​​

"ಬಿಸಿಸಿಐ ಕ್ರಿಕೆಟ್‌ನಲ್ಲಿ ರಾಜಕೀಯವನ್ನು ತರುತ್ತಿದೆ, ಇದು ಆಟಕ್ಕೆ ಒಳ್ಳೆಯದಲ್ಲ. ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರು. ಉದ್ಘಾಟನಾ ಸಮಾರಂಭಕ್ಕೆ ತಮ್ಮ ನಾಯಕನನ್ನು ಕಳುಹಿಸಲು ಕೂಡ ಅವರು ಒಪ್ಪಲಿಲ್ಲ, ಇದೀಗ ಅವರು ತಮ್ಮ ಜೆರ್ಸಿಯಲ್ಲಿ ಆತಿಥೇಯ ರಾಷ್ಟ್ರದ (ಪಾಕಿಸ್ತಾನ) ಹೆಸರನ್ನು ಮುದ್ರಿಸಲು ಬಯಸುವುದಿಲ್ಲ ಎಂಬ ವರದಿಗಳಿವೆ. ಐಸಿಸಿ ಇದನ್ನು ಮಾಡಲು ಬಿಡುವುದಿಲ್ಲ ಎಂದು ನಾವು ನಂಬಿದ್ದೇವೆ" ಎಂದು ಪಿಸಿಬಿ ಅಧಿಕಾರಿ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.(ಏಜೆನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net