ವಿರಾಟ್​ ಕೊಹ್ಲಿಗೆ ಚಿನ್ನದ ಬ್ಯಾಟ್​ ಉಡುಗೊರೆ ನೀಡಿ ಗೌರವಿಸಿದ ಬಂಗಾಳ ಕ್ರಿಕೆಟ್ ಸಂಸ್ಥೆ

Snehasish Ganguly
Published on

ಕಲ್ಕತ್ತಾ: ಭಾನುವಾರ(ನವೆಂಬರ್ 05)ರಂದು 35ನೇ ವಸಂತಕ್ಕೆ ಕಾಲಿಟ್ಟ ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಹಲವು ದಾಖಲೆಗಳನ್ನು ಸರಿಗಟ್ಟುವ ಮೂಲಕ ತಮ್ಮ ಜನ್ಮದಿನವನ್ನು ಸ್ಮರಣೀಯವಾಗಿರಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಸಿಯೇಷನ್​ (CAB) ಅಧ್ಯಕ್ಷ ಸ್ನೇಹಶಿಶ್​ ಗಂಗೂಲಿ ವಿರಾಟ್ ​ಕೊಹ್ಲಿಗೆ ಚಿನ್ನದ ಬ್ಯಾಟ್​ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಬ್ಯಾಟ್​ ಮೇಲೆ ಹ್ಯಾಪಿ ಬರ್ತ್​ಡೇ ವಿರಾಟ್​ ಎಂದು ಬರೆಯಲಾಗಿದ್ದು, ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂಬುದಕ್ಕೆ ಜೀವಂತ ಸಾಕ್ಷಿ ನೀವೇ ಎಂದು ಉಡುಗೊರೆ ನೀಡಿರುವ ಬ್ಯಾಟ್​ ಮೇಲೆ ಬರೆಸಲಾಗಿದೆ.

ಇದಾದ ಬಳಿಕ ತಮ್ಮ ಪ್ರತಿಮೆಯಂತಿದ್ದ ದೈತ್ಯ ಕೇಕ್​ ಅನ್ನು ಕತ್ತರಿಸಿ ಕೊಹ್ಲಿ ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಬಳಿಕ ಮೈದಾನದ ಸಿಬ್ಬಂದಿ ಜತೆ ಫೋಟೋಗೆ ಪೋಸ್​ ನೀಡಿದ್ದಾರೆ.

ಭಾರತದ ಪರ ಬ್ಯಾಟಿಂಗ್​ ಮುಗಿಸಿ ವಿರಾಟ್​ ಕೊಹ್ಲಿ ಡ್​ಗೌಟ್​ಗೆ ತೆಋಳುವ ವೇಳೆ ಬಾಲ್​ಬಾಯ್​ ಒಬ್ಬರು ವಿರಾಟ್​ ಕೊಹ್ಲಿ ಪಾದ ಮುಟ್ಟಿ ನಮಸ್ಕರಿಸಿದ್ದು, ವಿರಾಟ್​ ಪ್ರತಿಕ್ರಿಯೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಇದೆ.

ಭಾನುವಾರ (ನವೆಂಬರ್ 05)ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ 49ನೇ ಶತಕ ಬಾರಿಸುವ ಮೂಲಕ ವಿರಾಟ್​ ಕೊಹ್ಲಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಹಾಲಿ ವಿಶ್ವಕಪ್​ ಆವೃತ್ತಿಯಲ್ಲಿ ಭಾರತ ತನ್ನ 8ನೇ ಗೆಲುವನ್ನು ದಾಖಲಿಸಿದ್ದು, ತನ್ನ ಅಜೇಯ ಓಟವನ್ನು ಮುಂದುವರೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net