More

    ಕ್ರಿಕಟ್ ದಿಗ್ಗಜನ ದಾಖಲೆ ಮುರಿದ ಬೆನ್ನಲ್ಲೇ ಕೊಹ್ಲಿಯನ್ನು ಸ್ವಾರ್ಥಿ ಎಂದ ನೆಟ್ಟಿಗರು

    ಕಲ್ಕತ್ತಾ: ಕ್ರಿಕೆಟ್​ ಕಾಶಿ ಎಂದೇ ಹೆಸರುವಾಸಿಯಾಗಿರುವ ಈಡನ್​ ಗಾರ್ಡನ್​ನಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಆಲ್​ರೌಂಡ್​ ಪ್ರದರ್ಶನದ ಫಲವಾಗಿ ಭಅರತ ತಂಡವು 243 ರನ್​ಗಳ ಭರ್ಜರಿ ಜಯಗಳಿಸಿದೆ.

    ಕೋಟ್ಯಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ರೀಡಾಭಿಮಾನಿಗಳ ಬಹುದಿನದ ಬಯಕೆಯನ್ನು ವಿರಾಟ್​ ಕೊಹ್ಲಿ 49ನೇ ಏಕದಿನ ಶತಕ ಗಳಿಸುವ ಮೂಲಕ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಹೆಸರಿನಲ್ಲಿರುವ ದಾಖಲೆಯನ್ನು ಸರಿಗಟ್ಟಿದ್ದಾರೆ. ಇತ್ತ ವಿರಾಟ್​ ಕೊಹ್ಲಿ ತಮ್ಮ ಜನ್ಮದಿನದಂದೇ ಶತಕ ಬಾರಿಸಿದ ಬೆನ್ನಲ್ಲೇ ಸ್ವಾರ್ಥಿ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡವು ಆರಂಭಿಕರಾದ ರೋಹಿತ್​ ಶರ್ಮಾ ಹಾಗೂ ಶುಭಮನ್​ ಗಿಲ್ ಅಬ್ಬರದ ಬ್ಯಾಟಿಂಗ್​ ಫಲವಾಗಿ ಪವರ್​ಪ್ಲೇ ಅಂತ್ಯಕ್ಕೆ 91 ರನ್​ಗಳನ್ನು ಗಳಿಸಿತ್ತು. ಬಿರುಸಿನ ಆರಂಭ ಪಡೆದ ಭಾರತ ಮೊದಲಿಗೆ 400ಕ್ಕೂ ಅಧಿಕ ರನ್​ಗಳನ್ನು ಗಳಿಸಲಿದೆ ಎಂದೇ ಹೇಳಲಾಗಿತ್ತು. ಆದರೆ, ರೋಹಿತ್​ ಶರ್ಮಾ ಹಾಗೂ ಶುಭಮನ್​ ಗಿಲ್ ಔಟಾದ ಬಳಿಕ ಜತೆಯಾದ ಶ್ರೇಯಸ್​ ಅಯ್ಯರ್​ ಹಾಗೂ ವಿರಾಟ್​ ಕೊಹ್ಲಿ ನಿಧಾನಗತಿ ಬ್ಯಾಟಿಂಗ್​​ಗೆ ಮುಂದಾದರು. ಬಳಿಕ ತಂಡದ ರನ್​ರೇಟ್ ದಿಢೀರ್ ಕುಸಿತ ಕಂಡಿತು. ಈ ಇಬ್ಬರೂ ಅರ್ಧಶತಕದ ಇನ್ನಿಂಗ್ಸ್ ಆಡುವುದರೊಂದಿಗೆ 134 ರನ್​ಗಳ ಜತೆಯಾಟವಾಡಿದ್ದರು.

    ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಹಳಿ ಮೇಲೆ ಬಿದ್ದ ಬಸ್; ನಾಲ್ವರು ಸಾವು

    ಅಂತಿಮವಾಗಿ ಕೊಹ್ಲಿ 49ನೇ ಓವರ್​ನಲ್ಲಿ ತಮ್ಮ ದಾಖಲೆಯ ಶತಕ ಪೂರೈಸಿದರು. ಹೀಗಾಗಿ ಕೊಹ್ಲಿಯ ಈ ನಿದಾನಗತಿಯ ಬ್ಯಾಟಿಂಗ್ ನೋಡಿದ ನೆಟ್ಟಿಗರು ಕೊಹ್ಲಿ, ಶತಕ ಬಾರಿಸುವುದಕ್ಕಾಗಿಯೇ ನಿದಾನವಾಗಿ ಬ್ಯಾಟಿಂಗ್ ಮಾಡಿದರು ಎಂದು ದೂರುತ್ತಿದ್ದಾರೆ. 121 ಎಸೆತಗಳನ್ನು ಎದುರಿಸಿದ ಕೊಹ್ಲಿ  83.47 ಸ್ಟ್ರೈಕ್ ರೇಟ್‌ನೊಂದಿಗೆ 10 ಬೌಂಡರಿಗಳ ಸಹಿತ ಅಜೇಯ 101 ರನ್ ಬಾರಿಸಿ ತಮ್ಮ ದಾಖಲೆಯ 49ನೇ ಶತಕವನ್ನು ಬಾರಿಸಿದರು.

    ಇತ್ತ ನಿಧಾನಗತಿ ಬ್ಯಾಟಿಂಗ್​ ಕುರಿತು ಪಂದ್ಯದ ಬಳಿಕ ಮಾತನಾಡಿದ ವಿರಾಟ್​, ಮಧ್ಯಮ ಓವರ್‌ಗಳಲ್ಲಿ ಬ್ಯಾಟ್ ಮಾಡಲು ವಿಕೆಟ್ ಸ್ವಲ್ಪ ಟ್ರಿಕಿಯಾಗಿತ್ತು. ರೋಹಿತ್ ಮತ್ತು ಶುಭ್​ಮನ್ ಅದ್ಭುತ ಆರಂಭ ನೀಡಿದರು. ಆದರೆ ಒಮ್ಮೆ ಅವರು ಔಟಾದ ನಂತರ ಚೆಂಡು ಹಳೆಯದಾಗುತ್ತಿದ್ದಂತೆ ವಿಕೆಟ್ ಸ್ವಲ್ಪ ನಿಧಾನವಾಯಿತು. ಹೀಗಾಗಿ ದೀರ್ಘ ಸಮಯ ಬ್ಯಾಟಿಂಗ್ ಮತ್ತು ಇನ್ನಿಂಗ್ಸ್ ಅನ್ನು ಕೊನೆಯವರೆಗೂ ಕೊಂಡೊಯ್ಯುವುದು ನನ್ನ ಪಾತ್ರವಾಗಿತ್ತು. ತಂಡದ ಮ್ಯಾನೇಜ್‌ಮೆಂಟ್ ಕೂಡ ನನಗೆ ಇದನ್ನೇ ತಿಳಿಸಿತ್ತು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts