More

    ಪ್ರತಿಮಾ ಕೊಲೆ ಪ್ರಕರಣ; ಹತ್ಯೆ ಹಿಂದಿದೆಯಾ ಮಾಫಿಯಾ ಕೈವಾಡ

    ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಒಂದು ಹೊರಬಂದಿದೆ. ಅವರ ಹತ್ಯೆ ಪ್ರಕರಣದ ಹಿಂದೆ ಕಲ್ಲು ಕ್ವಾರಿ ಮಾಫಿಯಾ ಅನುಮಾನಗಳು ವ್ಯಕ್ತವಾಗಿವೆ

    ಪ್ರತಿಮಾ ಅವರ ಹತ್ಯೆ ಪೂರ್ವನಿಯೋಜಿತ ಕೃತ್ಯವಾಗಿದ್ದು, ಇಬ್ಬರು ದುಷ್ಕರ್ಮಿಗಳು ದಂಡುಪಾಳ್ಯ ಸಿನಿಮಾ ಮಾದರಿಯಲ್ಲಿ ಕೊಲೆಗೈದಿದ್ದಾರೆ. ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಬಳಿಕ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಪ್ರೆತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಕಾಂಗ್ರೆಸ್​ ನಾಯಕ ಸೂರ್ಯ ಮುಕುಂದರಾಜ್​ ಆಗ್ರಹಿಸಿದ್ದಾರೆ. ಹುಣಸಮಾರನಹಳ್ಳಿಯಲ್ಲಿ ಪರವಾನಗಿ ಪಡೆಯದೆ ಬಂಡೆಗಳು ಸ್ಫೋಟಿಸಲಾಗಿತ್ತು. ಈ ಸಂಬಂಧ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು.

    ಹುಣಸಮಾರನಹಳ್ಳಿ ಪ್ರಕರಣದಲ್ಲಿ ಶಾಸಕ ಮುನಿರತ್ನ 2ನೇ ಆರೋಪಿಯಾಗಿದ್ದಾರೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ರಾಜಸ್ವಧನದಲ್ಲೂ ನಷ್ಟ ಉಂಟು ಮಾಡಿದ್ದಾರೆಂದು ವರದಿಯಲ್ಲಿ ಆರೋಪಿಸಲಾಗಿತ್ತು. ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಬಗ್ಗೆ ಹಲವು ಅನುಮಾನ ವ್ಯಕ್ತವಾಗುತ್ತಿದೆ. ಎಲ್ಲ ಆಯಾಮದಲ್ಲೂ ಬಿಜೆಪಿ ಶಾಸಕ ಮುನಿರತ್ನಗೆ ನೋಟಿಸ್ ನೀಡಿ ತನಿಖೆ ನಡೆಸುವಂತೆ ಕಾಂಗ್ರೆಸ್​ ನಾಯಕ ಸೂರ್ಯ ಮುಕುಂದರಾಜ್ ಆಗ್ರಹಿಸಿದ್ದಾರೆ.

    ಇದನ್ನು ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ; ಮಹದೇವ ಸೇರಿದಂತೆ 22 ಬೆಟ್ಟಿಂಗ್​ ಆ್ಯಪ್​ ನಿಷೇಧಿಸಿದ ಕೇಂದ್ರ ಸರ್ಕಾರ

    ಚಾಲಕ ಪರಾರಿ

    ಇತ್ತ ಪ್ರತಿಮಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕಾರಿಗೆ ಚಾಲಕನಾಗಿದ್ದ ಕಿರಣ್​ ಎಂಬಾತ ತಲೆಮಾರಿಸಿಕೊಂಡಿದ್ದು, ಆತನನ್ನು ವಾರದ ಹಿಂದಷ್ಟೇ ಕೆಲಸದಿಂದ ತೆಗೆದು ಹಾಕಲಾಗಿತ್ತು. ಕಿರಣ್​ ನಂತರ ಚೇತನ್​ ಎಂಬುವವರು ಕೆಲಸಕ್ಕೆ ಸೇರಿಸಿಕೊಂಡಿದ್ದರು. ಇತ್ತ ಪ್ರತಿಮಾ ಅವರ ಹತ್ಯೆ ಆಗುತ್ತಿದ್ದಂತೆ ಕಿರಣ್​ ತಲೆಮಾರಿಸಿಕೊಂಡಿದ್ದು, ಆತ ತನ್ನ ಮೊಬೈಲ್​ಅನ್ನು ಸ್ವಿಚ್​ ಆಫ್​ ಮಾಡಿಕೊಂಡಿದ್ದಾನೆ. ಪ್ರಕರಣದಲ್ಲಿ ಆತನ ಪಾತ್ರವಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

    ಇತ್ತ ಪ್ರತಿಮಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಅವರ ಐಫೋನ್​ಅನ್ನು ವಶಕ್ಕೆ ಪಡೆದು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಮಾ ಅವರ ಕಚೇರಿ ಸಿಬ್ಬಂದಿ ಹಾಗೂ ಸಹೋದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಇತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಹಾಗೂ ವೃತ್ತಿ ಕಾರಣಗಳಿಗೆ ಹತ್ಯೆ ನಡೆದಿರಬಹುದು ಎಂದು ಶಂಕಿಸಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಆರೋಪಿಗಳನ್ನು ಪತ್ತೆ ಹಚ್ಚಲು ಆರು ತಂಡಗಳನ್ನು ರಚಿಸಿದ್ದಾರೆ.

    ಸಿನಿಮೀಯ ಶೈಲಿಯಲ್ಲಿ ಹತ್ಯೆ

    ಶನಿವಾರ ಸಂಜೆ ಎಂದಿನಂತೆ ಕೆಲಸ ಮುಗಿದ ಬಳಿಕ ರಾತ್ರಿ 7:45ರ ಸುಮಾರಿಗೆ ಕಚೇರಿಯಿಂದ ಹೊರಟಿದ್ದು, ರಾತ್ರಿ 8:30ರ ಸುಮಾರಿಗೆ ಮನೆಗೆ ಬಂದಿದ್ದಾರೆ. ಬಳಿಕ ಡ್ರೈವರ್​ ಕಾರ್​ ಪಾರ್ಕ್​ ಮಾಡಿ ತನ್ನ ಪಾಡಿಗೆ ತಾನಿ ತೆರಳಿದ್ದಾನೆ. ಕಾರಿನಿಂದ ಇಳಿದು ಪ್ರತಿಮಾ ಮೊದಲ ಮಹಡಿಯಲ್ಲಿರುವ ಮನೆಗೆ ಬಂದಿದ್ದರು. ಮನೆಯ ಡೋರ್ ತೆಗೆಯುತ್ತಿದ್ದಂತೆ ಹಿಂದಿನಿಂದ ದಾಳಿ ಮಾಡಲಾಗಿದೆ.

    ಈ ವೇಳೆ ಪ್ರತಿಮಾರ ಬಾಯಿಯನ್ನು ಮುಚ್ಚಿರುವ ಆರೋಪಿಗಳು ಕುತ್ತಿಗೆಯಿಂದ ಹಗ್ಗವನ್ನು ಕಟ್ಟಿ ಮನೆ ಒಳಗೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಚಾಕುವಿನಿಂದ ಕತ್ತು ಸೀಳಿ ಅವರ ಹತ್ಯೆ ಮಾಡಿದ್ದಾರೆ. ದಾಳಿ ವೇಳೆ ಪ್ರತಿಮಾ ಧರಿಸುತ್ತಿದ್ದ ಕನ್ನಡಕ ಹಾಗೂ ಊಟದ ಡಬ್ಬಿ ಬಾಗಿಲ ಬಳಿಯೇ ಬಿದ್ದಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts