ಉಪ ಚುನಾವಣೆ: 47 ಅಭ್ಯರ್ಥಿಗಳಿಂದ 70 ನಾಮಪತ್ರ ಸಲ್ಲಿಕೆ; ಇಲ್ಲಿದೆ ವಿವರ...

election
Published on

ಬೆಂಗಳೂರು: ರಾಜ್ಯದ ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಗೆ ಒಟ್ಟು 47 ಅಭ್ಯರ್ಥಿಗಳು 70 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿತ್ತು. ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ 23 ಅಭ್ಯರ್ಥಿಗಳು 33 ನಾಮಪತ್ರ ಸಲ್ಲಿಸಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ 10 ಮಂದಿ 13 ನಾಮಪತ್ರ ಸಲ್ಲಿಸಿದ್ದಾರೆ. ಬಸವ ಕಲ್ಯಾಣದಲ್ಲಿ 14 ಅಭ್ಯರ್ಥಿಗಳು 24 ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು 42 ಪುರುಷರು, 5 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ.

ಯಾವ ಪಕ್ಷ? ಎಷ್ಟು ನಾಮಪತ್ರ?

ಮಸ್ಕಿಯಲ್ಲಿ ಬಿಜೆಪಿ 2, ಕಾಂಗ್ರೆಸ್ 2, ಮಾನ್ಯತೆ ಪಡೆದ ನೋಂದಾಯಿತ ಪಕ್ಷದಿಂದ 1 ಹಾಗೂ 8 ಪಕ್ಷೇತರ ನಾಮಪತ್ರಗಳು ಸಲ್ಲಿಕೆಯಾಗಿವೆ. ಬಸವಕಲ್ಯಾಣದಲ್ಲಿ ಬಿಜೆಪಿ 3, ಕಾಂಗ್ರೆಸ್ 4, ಎನ್‌ಸಿಪಿ 2, ಜೆಡಿಎಸ್ 2, ಮಾನ್ಯತೆ ಪಡೆದ ನೋಂದಾಯಿತ ಪಕ್ಷದಿಂದ 5 ಮತ್ತು 8 ಪಕ್ಷೇತರ ನಾಮಪತ್ರ ಸಲ್ಲಿಕೆಯಾಗಿವೆ. ಬೆಳಗಾವಿಯಲ್ಲಿ ಬಿಜೆಪಿ 4, ಕಾಂಗ್ರೆಸ್ 4, ಎನ್‌ಸಿಪಿ 1, ಮಾನ್ಯತೆ ಪಡೆದ ನೋಂದಾಯಿತ ಪಕ್ಷದಿಂದ 4 ಹಾಗೂ 20 ಪಕ್ಷೇತರ ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಪರಿಶೀಲನೆ ಬುಧವಾರ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಏಪ್ರಿಲ್ 3 ಕೊನೆಯ ದಿನ. ಏಪ್ರಿಲ್ 17ರಂದು ಮತದಾನ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net