ಸ್ಟಾಕ್ ಎಕ್ಸ್‌ಚೇಂಜ್‌ ಸ್ಕ್ಯಾಮ್​: ಆನ್​ಲೈನ್​ ಸಲಹೆ ಸ್ವೀಕರಿಸುತ್ತಾ ಮಹಿಳಾ ಉದ್ಯಮಿ ಕಳೆದುಕೊಂಡ್ರು ಬರೋಬ್ಬರಿ 73 ಲಕ್ಷ!

Cyber Crime
Published on

ಮುಂಬೈ: ಮಹಿಳಾ ಉದ್ಯಮಿಯೊಬ್ಬರು ಸೈಬರ್​ ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂ.ಕಳೆದುಕೊಂಡಿದ್ದಾರೆ. ಘಟನೆ ಮುಂಬೈನಲ್ಲಿ ನಡೆದಿದೆ.

ಅಲ್ಯೂಮಿನಿಯಂ ವಸ್ತುಗಳ ತಯಾರಿಕಾ ಕಂಪನಿ ನಡೆಸುತ್ತಿರುವ ಮುಂಬೈ ಮೀರಾ ರೋಡ್‌ನ 49 ವರ್ಷದ ಮಹಿಳಾ ಉದ್ಯಮಿಗೆ ಷೇರು ವಿನಿಮಯ ಕೇಂದ್ರದಲ್ಲಿ ಹೂಡಿಕೆ ಮಾಡಲು ಸಲಹೆ ನೀಡುವುದಾಗಿ ವಾಟ್ಸಾಪ್​ಗೆ ಸಂದೇಶ ಬಂದಿತ್ತು. ಅದಕ್ಕೆ ಅವರು ಕಾಲ್​ ಮಾಡಿದಾಗ ಅವರಿಗೆ ಆನ್​ಲೈನ್​ನಲ್ಲಿ ಸಲಹೆ ನೀಡುವ ನೆಪದಲ್ಲಿ ಸೈಬರ್ ವಂಚಕರು 35 ದಿನಗಳಲ್ಲಿ 72.80 ಲಕ್ಷ ರೂ. ವಂಚಿಸಿದ್ದಾರೆ.

ವಿಶೇಷವೆಂದರೆ ಈ ಉದ್ಯಮಿ ಈಗಾಗಲೇ ಸ್ಟಾಕ್ ಟ್ರೇಡ್ ಹೂಡಿಕೆದಾರರಾಗಿದ್ದರು. ಆದರೂ 2024ರ ಆಗಸ್ಟ್ 4 ರಿಂದ ಸೆಪ್ಟೆಂಬರ್ 10 ರ ನಡುವೆ ಮೊತ್ತವನ್ನು ಕಳೆದುಕೊಂಡಿದ್ದಾರೆ.

ಕಾಶಿಗಾಂವ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉದ್ಯಮಿ, ತಜ್ಞರ ಸಲಹೆಯ ಮೇರೆಗೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಹೂಡಿಕೆಯ ಮೇಲೆ ಲಾಭ ಪಡೆಯುವ ಸಲಹೆ ನೀಡುವುದಾಗಿ ಅಪರಿಚಿತ ಮೆಸೇಜ್​ ಕಳೂಹಿಸಿದ್ದು, ಗುಂಪಿನಲ್ಲಿ ನೀಡಲಾಗುತ್ತಿರುವ ಟ್ಯುಟೋರಿಯಲ್‌ಗಳಿಗೆ ಹಾಜರಾದ ನಂತರ, ಹಣವನ್ನು ಹೂಡಿಕೆ ಮಾಡಲು ಮುಂದಾದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net