ಕುದುರೆಗೆ ಬಸ್ ಡಿಕ್ಕಿ; ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಕುದುರೆ ಸವಾರ!

Accident Horse
Published on

ಮಂಗಳೂರು: ಉಪ್ಪಿನಂಗಡಿ ಸಮೀಪದ ಪದುಮಲೆ ಎಂಬಲ್ಲಿ ಕುದುರೆಯೊಂದಕ್ಕೆ ಬಸ್​ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿಯಾದ ಪರಿಣಾಮ ಕುದುರೆ ಮೇಲಿದ್ದ ಸವಾರ ರಭಸವಾಗಿ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಅಪಘಾತದ ತೀವ್ರತೆಗೆ ಕುದುರೆ ಸವಾರ ಗಂಭೀರ ಗಾಯಗೊಂಡಿದ್ದಾನೆ. ಇಂದು (ಡಿ.25) ಬೆಳಗ್ಗೆ ಈ ಘಟನೆ ಸಂಭವಿಸಿದೆ.

ಸಚಿನ್ ಪಲಪ್ಪಾರ್ ಎಂಬಾತ ರಸ್ತೆ ಮಧ್ಯೆ ಕುದುರೆ ಸವಾರಿ ನಡೆಸುತ್ತಿದ್ದ. ಈ ವೇಳೆ ಬಂದ ಬಸ್ ಕುದುರೆಗೆ ಡಿಕ್ಕಿಯಾಗಿದೆ. ಸದ್ಯ ಗಾಯಗೊಂಡಿರುವ ಸಚಿನ್​ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಕುದುರೆಗೂ ಗಾಯವಾಗಿದೆ ಎಂದು ವರದಿಯಾಗಿದೆ.

ಸಚಿನ್ ಪೆಲಪ್ಪಾರ್ ಎಂಬಾತ ಸಮಯ ಸಿಕ್ಕಾಗೆಲ್ಲಾ ಕುದುರೆ ಸಾವಾರಿ ಮಾಡುತ್ತಿದ್ದ. ಹೀಗಾಗಿ ಎಂದಿನಂತೆ ಇಂದು ಕೂಡಾ ಕುದರೆಯೊಂದಿಗೆ ಸವಾರಿ ಮಾಡಿದ್ದಾನೆ. ಈ ವೇಳೆ ಅಪಘಾತ ನಡೆದಿದೆ ಎನ್ನಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net