ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧೆ ಮೇಲೆ ಗೂಳಿ ದಾಳಿ! ವಿಡಿಯೋ ಫುಲ್​ ವೈರಲ್​ | Bull

untitled-design-2025-09-27t162021240-68d7c18b675a1
Published on

Bull: ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯನ್ನು ಹೋರಿಯೊಂದು ದಾಳಿ ಮಾಡಿರುವ ಆಘಾತಕಾರಿ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ?

ಉತ್ತರ ಪ್ರದೇಶದ ಝಾನ್ಸಿಯ ಬಬಿನಾ ಗ್ರಾಮದಲ್ಲಿ ವೃದ್ಧೆಯೊಬ್ಬಳು ಸಂಜೆ 5 ಗಂಟೆ ಸುಮಾರಿಗೆ ಕಿರಿದಾದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಆ ವೇಳೆ ಆಕೆಯ ಹಿಂದೆ ಗೂಳಿ ಹಿಂಬಾಲಿಸುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ. ನಂತರ ಮಹಿಳೆಯ ಮೇಲೆ ದಾಳಿ ನಡೆಸಿ ಬೀಳಿಸಿದ್ದು, ಆಕೆ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ.

ಇದಾದ ಬಳಿಕ ಬೈಕ್​ ಸವಾರನೊಬ್ಬ ಆ ಸ್ಥಳಕ್ಕೆ ಬಂದು ದಿಗ್ಭ್ರಮೆಗೊಂಡಿದ್ದು, ಹೋರಿಯನ್ನು ಓಡಿಸಿದ್ದಾನೆ. ಇನ್ನು ಪ್ರಜ್ಞೆತಪ್ಪಿದ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಇನ್ನು ಮಹಿಳೆಯು ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರ ಅಪಾಯವಾಗಿಲ್ಲ ಎಂದು ತಿಳಿಸಿದ್ದಾರೆ.

ಇದೇ ರೀತಿ ಬಿಡಾಡಿ ದನಗಳ ಹಾವಳಿಯಿಂದ ಅಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಇವುಗಳ ನಿಯಂತ್ರಣ ಮಾಡಲು ಅಲ್ಲಿನ ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಹಿಂದೆ ರಾಜಸ್ಥಾನದ ಜೋಧ್‌ಪುರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳ ಮೇಲೆ ಗೂಳಿಯೊಂದು ದಾಳಿ ನಡೆಸಿ ಸುಮಾರು 4 ಅಡಿಗೂ ಎತ್ತರಕ್ಕೆ ಎಸೆದಿದೆ. ಈ ವೇಳೆ ನೆಲಕ್ಕೆ ಉರುಳಿ ಮಹಿಳೆ ತೀವ್ರನೋವು ಅನುಭವಿಸಿರುವುದಾಗಿ ವರದಿಯಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net