

Copper bottles : ತಾಮ್ರದ ಬಾಟಲಿಗಳಿಂದ ನೀರು ಕುಡಿಯುವುದು ಉತ್ತಮ ಎಂದು ಆಯುರ್ವೇದ ಹೇಳುತ್ತದೆ. ಏಕೆಂದರೆ, ಇದು ಆಂಟಿಮೈಕ್ರೋಬಿಲ್ ಗುಣಗಳನ್ನು ಹೊಂದಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದರೆ, ಇದು ಎಲ್ಲರಿಗೂ ಸುರಕ್ಷಿತವಲ್ಲ. ಅತಿಯಾದ ತಾಮ್ರ ಸೇವೆಯಿಂದ ತಾಮ್ರ ವಿಷಕಾರಕ್ಕೆ ಒಳಗಾಗಬಹುದು. ಇದು ಮಲಬದ್ಧತೆ, ಹೊಟ್ಟೆನೋವು, ಕಡ್ನಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಮೂತ್ರಪಿಂಡಗಳು ದೇಹದಿಂದ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕಲು ಕೆಲಸ ಮಾಡುತ್ತವೆ.ಹಾಗಾಗಿ ಅತಿಯಾದ ತಾಮ್ರ ಸಂಗ್ರಹವಾಗಿ ಕಿಡ್ನಿ ಕಾರ್ಯವನ್ನು ಹದಗೆಡಿಸುತ್ತದೆ. ಇದು ದೇಹದಲ್ಲಿ ಉರಿಮಿಯಾ ಟಾಕ್ಸಿನ್‌ನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಈ ಸಮಸ್ಯೆಯಿಂದ ಬಳಲುತ್ತಿರುವವರು ಗಾಜಿನ ಬಾಟಲಿ ಅಥವಾ ಇನ್ನಿತರ ಬಾಟಲುಗಳಲ್ಲಿ ನೀರು ಕುಡಿಯುವುದು ಉತ್ತಮ.
ಈ ರೋಗವು ದೇಹದಲ್ಲಿ, ಯಕೃತ್ತು ಮತ್ತು ಮೆದುಳಿನಲ್ಲಿ ತಾಮ್ರ ಸಂಗ್ರಹವಾಗಿ ಗಂಭೀರ ಸಮಸ್ಯೆಯನ್ನುಂಟು ಮಾಡುತ್ತದೆ. ತಾಮ್ರದ ಬಾಟಲಿಯಲ್ಲಿ ಶೇಕರಿಸಿದ ನೀರನ್ನು ಕುಡಿಯುವುದರಿಂದ ಜೀವಾಳವನ್ನು ಹಾನಿ ಮಾಡುತ್ತದೆ ಹಾಗಾಗಿ ಈ ಸಮಸ್ಯೆ ಇರುವಂತವರು ತಮ್ಮ ವೈದ್ಯರು ನೀಡುವ ಆಹಾರ ಸೂಚನೆಗಳನ್ನು ಪಾಲಿಸುವುದು ಮತ್ತು ತಾಮ್ರದ ಸಂಪರ್ಕವನ್ನು ತಪ್ಪಿಸುವುದು ಅತ್ಯಂತ ಮುಖ್ಯವಾಗಿದೆ.
ತಾಮ್ರ ಎಲ್ಲರಿಗೂ ತೊಂದರೆ ಕೊಡುವುದಿಲ್ಲ, ಆದರೆ ಕೆಲವರಿಗೆ ಇದರ ಸೇವನೆಯು ಅಲರ್ಜಿಯನ್ನುಂಟು ಮಾಡುತ್ತದೆ. ತಾಮ್ರದ ಬಾಟಲಿಯಿಂದ ನೀರು ಕುಡಿದ ನಂತರ ಚರ್ಮದ ಕಿರಿಕಿರಿ, ದದ್ದುಗಳು, ಹೊಟ್ಟೆ ನೋವು ಅಥವಾ ಜೀರ್ಣಕಾರಿ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹಾಗಾಗಿ ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ತಾಮ್ರದ ಬಾಟಲಿಯಲ್ಲಿ ಶೇಖರಿಸಿಟ್ಟಿರುವ ನೀರನ್ನು ಸೇವಿಸಬೇಡಿ.
ಗರ್ಭಾವಸ್ಥೆಯಲ್ಲಿನ ಮಹಿಳೆಯರು ತಾಮ್ರದಲ್ಲಿ ಶೇಖರಿಸಿಟ್ಟಿರುವ ನೀರನ್ನು ಕುಡಿಯುವುದು ತಾಯಿ ಹಾಗೂ ಮಗುವಿಗೆ ಅಪಾಯಕಾರಿಯಾಗಿದೆ. ಈ ಬಾಟಲಿನಲ್ಲಿರುವ ನೀರನ್ನು ಸೇವಿಸುವುದರಿಂದ ದೇಹದ ಆರೋಗ್ಯದಲ್ಲಿ ಏರುಪೇರಾಗಬಹುದು. ಹಾಗಾಗಿ ಈ ಮಹಿಳೆಯರು ಮೊದಲು ವೈದ್ಯರನ್ನು ಸಂಪರ್ಕಿಸಿ ನಂತರ ಸೇವಿಸುವುದು ಉತ್ತಮ.
ಮಕ್ಕಳ ದೇಹವು ಬೆಳವಣಿಗೆಯ ಹಂತದಲ್ಲಿದ್ದು, ಅವರ ಚಯಾಪಚಯ ಕ್ರಿಯೆಯಲ್ಲಿ ಹೆಚ್ಚು ತಾಮ್ರವನ್ನು ಸರಿಯಾಗಿ ಸಂಸ್ಕರಿಸಲು ಸಾಧ್ಯವಾಗುವುದಿಲ್ಲ. ಆದರಿಂದ ಇದು ಮಕ್ಕಳಲ್ಲಿ ಹೊಟ್ಟೆ ನೋವು, ಲಿವರ್ ಹಾನಿ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಯನ್ನು ಉಂಟುಮಾಡಬಹುದು. ಹಾಗಾಗಿ ಇವುಗಳನ್ನು ತಪ್ಪಿಸುವುದು ಉತ್ತಮ.