ಬಿಎಸ್​ವೈ ರಾಜೀನಾಮೆ | ಇದು ಕರ್ನಾಟಕದ ದುರ್ದೈವವೇ ಸರಿ: ಸಿದ್ದರಾಮಯ್ಯ

bsy
Published on

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಈ ದಿನದ ಮಹತ್ವದ ಬೆಳವಣಿಗೆ, ಬಿ.ಎಸ್​. ಯಡಿಯೂರಪ್ಪ ರಾಜೀನಾಮೆಯನ್ನು ಕರ್ನಾಟಕದ ದುರ್ದೈವ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಎಸ್​. ಯಡಿಯೂರಪ್ಪ ಅವರ ರಾಜೀನಾಮೆ ವಿಚಾರವಾಗಿ ತಮ್ಮ ಅನಿಸಿಕೆ ಹಂಚಿಕೊಂಡರು.

ಬಿ.ಎಸ್​. ಯಡಿಯೂರಪ್ಪ ಅವರು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿಲ್ಲ. ಬಿಜೆಪಿ ಹೈಕಮಾಂಡ್​ ಅವರನ್ನು ಹೆದರಿಸಿ ರಾಜೀನಾಮೆ ನೀಡಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, 2019ರಲ್ಲಿ ಪ್ರವಾಹ ಬಂದಾಗ ಮಂತ್ರಿಮಂಡಲ ಇರಲಿಲ್ಲ. ಈ ಭಾರಿ ಪ್ರವಾಹ ಬಂದಾಗ ಸಿಎಂ ರಾಜೀನಾಮೆ ನೀಡಿದ್ದಾರೆ. ಇದು ಕರ್ನಾಟಕದ ದುರ್ದೈವವೇ ಸರಿ ಎಂದಿದ್ದಾರೆ.

ಇಂಥ ಪ್ರವಾಹ ಸಂದರ್ಭದಲ್ಲಿ ರಾಜೀನಾಮೆ ಪಡೆಯಬಾರದಿತ್ತು. ರಾಜೀನಾಮೆ ಪಡೆಯುವುದೇ ಆಗಿದ್ದರೆ ಸ್ವಲ್ಪ ದಿನ ಕಾದು ಪಡೆಯಬೇಕಿತ್ತು ಎಂದು ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net