More

    ಬಿಎಸ್​ವೈ ರಾಜೀನಾಮೆ: ಅಚ್ಚರಿ ಮೂಡಿಸಿದೆ ಕೇಂದ್ರ ನಾಯಕರ ಮೌನ!

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಬದಲಾವಣೆ ವಿಚಾರವೇ ಬಹಳಷ್ಟು ಕುತೂಹಲ ಕೆರಳಿಸಿದ್ದಲ್ಲದೆ, ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಮುಖ್ಯಮಂತ್ರಿಯಾಗಿದ್ದ ಬಿ.ಎಸ್​. ಯಡಿಯೂರಪ್ಪ ಅವರು ಇಂದು ರಾಜೀನಾಮೆ ನೀಡಿರುವುದರಿಂದ ಅದು ರಾಜ್ಯದ ಮಟ್ಟಿಗೆ ಮತ್ತಷ್ಟು ಸಂಚಲನ ಉಂಟು ಮಾಡಿದೆ.

    ಪ್ರಭಾವಿ ನಾಯಕ, ಅದರಲ್ಲೂ ರಾಜ್ಯದ ರಾಜಕಾರಣದಲ್ಲಿ ಅಧಿಕಾರದ ಕಮಲ ಅರಳಲು ಭಾರಿ ಶ್ರಮವಹಿಸಿದ್ದ, ರಾಜ್ಯದ ಮೂಲೆಮೂಲೆಗೂ ಓಡಾಡಿ ಬಿಜೆಪಿಯ ಅಡಿದಾವರೆಯಲ್ಲಿ ಅಧಿಕಾರ ನಳನಳಿಸುವಂತೆ ಮಾಡಿದ್ದ ಬಿ.ಎಸ್​.ಯಡಿಯೂರಪ್ಪ ಸುದೀರ್ಘ ರಾಜಕಾರಣದ ಬಳಿಕ ಇಂದು ರಾಜೀನಾಮೆ ನೀಡುವಂತಾಗಿದ್ದಕ್ಕೆ ರಾಜಕೀಯ ಕ್ಷೇತ್ರವಲ್ಲದೆ ಬೇರೆ ಕ್ಷೇತ್ರಗಳ ಪ್ರಮುಖರು ಕೂಡ ಬಹಳಷ್ಟು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಷಯದಲ್ಲಿ ಕೇಂದ್ರದ ನಾಯಕರಾರೂ ಕನಿಷ್ಠ ಒಂದು ಪ್ರತಿಕ್ರಿಯೆ ವ್ಯಕ್ತಪಡಿಸದ್ದು ರಾಜ್ಯದ ಜನರನೇಕರಲ್ಲಿ ಒಂದು ಅಚ್ಚರಿಯನ್ನು ಉಂಟುಮಾಡಿದೆ.

    ಹಾಗೆ ನೋಡಿದರೆ, ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಆಡಳಿತ ಇರುವುದು ಕರ್ನಾಟಕ ಮತ್ತು ಗೋವಾದಲ್ಲಿ ಮಾತ್ರ. ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಬರುವಲ್ಲಿ ಬಿಎಸ್​ವೈ ಅವರ ಪಾತ್ರ ಪ್ರಮುಖವಾಗಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಕರ್ನಾಟಕದ ಮಟ್ಟಿಗೆ ಬಿಜೆಪಿಯ ಬಲ, ಬಲಿಷ್ಠ ನಾಯಕ ಎಂದೆಲ್ಲ ಎನಿಸಿಕೊಂಡಿರುವ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವುಕ್ಕೆ ಬೇಸರ ವ್ಯಕ್ತಪಡಿಸಿ ಅಥವಾ ಅವರ ಮುಂದಿನ ರಾಜಕೀಯ ಜೀವನಕ್ಕೆ ಒಳಿತು ಹಾರೈಸಿ ಕೇಂದ್ರದ ನಾಯಕರಾರಿಂದಲೂ ಒಂದೇ ಒಂದು ಟ್ವೀಟ್​ ಪೋಸ್ಟ್​ ಆಗದಿರುವುದು ರಾಜ್ಯದ ಜನತೆಯಲ್ಲಿ ಅಚ್ಚರಿ ಮೂಡಿಸಿದೆ. ಅಷ್ಟು ಮಾತ್ರವಲ್ಲ, ರಾಜ್ಯದಿಂದಲೇ ರಾಷ್ಟ್ರ ರಾಜಕಾರಣಕ್ಕೆ ತೆರಳಿ ಆಯಕಟ್ಟಿನ ಜಾಗದಲ್ಲಿ ಇರುವವರೂ ಬಿಎಸ್​ವೈ ರಾಜೀನಾಮೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಆಶ್ಚರ್ಯ ಹುಟ್ಟಿಸಿದೆ.

    ಸಾವಿರ ವರ್ಷಗಳ ಹಿಂದಿನ ಬೆಳವಣಿಗೆಯನ್ನು ನೆನಪಿಸಿದೆ ಬಿಎಸ್​ವೈ ರಾಜೀನಾಮೆ: ಸತೀಶ್​ ಜಾರಕಿಹೊಳಿ

    ಇದು ಕಿಕ್ಕಿಳಿಸೋ ವಿಷಯ: ರಾಷ್ಟ್ರೀಯ-ರಾಜ್ಯ ಹೆದ್ದಾರಿ ಬಳಿ ಮದ್ಯದಂಗಡಿಗೆ ಪರವಾನಗಿ ಕೊಡಬೇಡಿ ಎಂದ ಸುಪ್ರೀಂ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts