ತಾಯಿ ಜೊತೆ ಅಕ್ರಮ ಸಂಬಂಧ ಶಂಕೆ?; ವ್ಯಕ್ತಿಯೋರ್ವನನ್ನು ಕೊಂದು, ಎಲ್ಲರ ಎದುರೇ ಮೃತನ ಕರುಳು ಗಾಳಿಗೆ ಎಸೆದ ಸಹೋದರರು! | kill

dk (26)
Published on

ಅಹಮದಾಬಾದ್​: ತಾಯಿಯ ಅಕ್ರಮ ಸಂಬಂಧ ಅನುಮಾನಿಸಿ ಸಹೋದರರಿಬ್ಬರು ವ್ಯಕ್ತಿಯೋರ್ವವನ್ನು ರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಂದು(kill), ಆತನ ಕರುಳನ್ನು ಜನರೆದುರು ಗಾಳಿಯಲ್ಲಿಯೇ ತೂರಿ ವಿಕೃತಿ ಮೇರೆದ ಘಟನೆ ಸೋಮವಾರ ಇಲ್ಲಿನ ಗಾಂಧಿನಗರದ ಮೋಖಾಸನ್​ ಗ್ರಾಮದಲ್ಲಿ ನಡೆದಿದೆ.

45 ವರ್ಷದ ಮೇಸ್ತ್ರಿ ರತನ್ ​ಜಿ ಠಾಕೂರ್​ ಮೃತ ಎಂದು ಗುರುತಿಸಲಾಗಿದ್ದು, ಆರೋಪಿಗಳಾದ ಸಂಜಯ್​ ಠಾಕೂರ್​ ಮತ್ತು ಜಯೇಶ್​ ಠಾಕೂರ್​​ ಬಂಧಿಸಲಾಗಿದೆ ಎಂದು ಕಲೋಲ್​ ತಾಲೂಕು ಪೊಲೀಸರು ತಿಳಿಸಿದ್ದಾರೆ.

ತಮ್ಮ ತಾಯಿಯೊಂದಿಗೆ 15 ವರ್ಷಗಳಿಂದ ಸಂಬಂಧ ಹೊಂದ್ದಿದ್ದರು. ಹೀಗಾಗಿ, ಇದರಿಂದ ನಮ್ಮ ದಿವಂಗತ ತಂದೆಗೆ ಮತ್ತು ಕಟುಂಬಕ್ಕೆ ಅವಮಾನವಾಗಿದೆ. ಆದ್ದರಿಂದ ಕೊಲೆ ಮಾಡಲಾಗಿದೆ ಎಂದು ಆರೋಪಿಗಳು ತಪ್ಪೋಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ನಮ್ಮ ತಾಯಿಯಿಂದ ದೂರ ಇರುವಂತೆ ಈಗಾಗಲೇ ರತನ್​ ಜಿಗೆ ಪದೇಪದೆ ಎಚ್ಚರಿಕೆ ನೀಡಲಾಗಿದೆ. ಆದರೂ ಅತ ನಮ್ಮ ತಾಯಿಯ ಜತೆಗೆ ಇರುವುದನ್ನು ಹಲವರು ನೋಡಿದ್ದಾರೆ ಎಂದು ಆರೋಪಿಗಳು ಹೇಳಿದ್ದಾರೆ.

ಆರೋಪಿಗಳು ಈಗಾಗಲೇ ಈ ವಿಚಾರದ ಬಗ್ಗೆ ರತನ್​ ಜಿಗೆ ಹೇಳಿದ್ದಾರೆ. ಅಲ್ಲದೇ, ಸಮುದಾಯದ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಆದರೂ ಸಂಬಂಧ ಮುಂದುವರೆದ ಹಿನ್ನೆಲೆ ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.( ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net