Mahakumbh Mela ಹಿನ್ನೆಲೆ ಕಿಕ್ಕಿರಿದ ಜನ; ಬಾಗಿಲು ತೆರೆಯದಿದಕ್ಕೆ ಟ್ರೈನ್​​ ಮೇಲೆ ಕಲ್ಲೆಸೆದು ದಾಳಿ ಮಾಡಿದ ಪ್ರಯಾಣಿಕರು!

dk (86)
Published on

ಭೂಪಾಲ್​: ಮಹಾಕುಂಭ ಮೇಳ(Mahakumbh Mela) ಹಿನ್ನೆಲೆ ಪ್ರಯಾಗ್​ರಾಜ್​​ಗೆ ತೆರಳುತ್ತಿದ್ದ ಟ್ರೈನ್, ಕಿಕ್ಕಿರಿದ ಜನ ಕಾರಣದಿಂದ ಬಾಗಿಲು ತೆರೆಯದ ಕಾರಣದಿಂದ ಆಕ್ರೋಶಗೊಂಡ ಪ್ರಯಾಣಿಕರು ಕಲ್ಲಿನಿಂದ ಬಾಗಿಲಿನ ಗ್ಲಾಸ್​ ಪುಡಿ-ಪುಡಿ ಮಾಡಿದ ಘಟನೆ ಮಧ್ಯಪ್ರದೇಶದ ಹರ್ಪಲ್​ಪುರದಲ್ಲಿ ಮಂಗಳವಾರ ನಡೆದಿದೆ.

ಅಂಬೇಡ್ಕರ್​ ನಗರದಿಂದ ಪ್ರಯಾಗ್​​ರಾಜ್​ಗೆ ತೆರಳುತ್ತಿದ್ದ ಎಕ್ಸ್​​ಪ್ರೆಸ್​ ಹರ್ಪಲ್​ಪುರ ನಿಲ್ದಾಣಕ್ಕೆ ಬಂದಾಗ ಸುಮಾರು 1 ರಿಂದ 1.30 ಸಮಯ ಆಗಿತ್ತು. ಕುಂಭಮೇಳಕ್ಕೆ ತೆರಳಲು ಉತ್ಸುಕರಾಗಿದ್ದ ಪ್ರಯಾಣಿಕರು ಟ್ರೈನ್​ ಹತ್ತಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಕೆಲ ಪ್ರಯಾಣಿಕರು ಒಳಗೆ ಹೋಗಿದ್ದಾರೆ. ಆದರೆ, ಕಿಕ್ಕಿರಿದ ಜನ ಇರುವ ಕಾರಣ ಎಕ್ಸ್​ಪ್ರೆಸ್​ ಸ್ವಯಂ ಬಾಗಿಲು ಹಾಕಿಕೊಂಡಿದೆ. ಇದರಿಂದ ಆಕ್ರೋಶಗೊಂಡ ಉಳಿದ ಪ್ರಯಾಣಿಕರು ಟ್ರೈನ್​​ ಮೇಲೆ ಕಲ್ಲಿನ ದಾಳಿಮ ಮಾಡಿದ್ದಾರೆ ಎಂದು ವರದಿಯಾಗಿದೆ.

ಕಲ್ಲು ಎಸೆದು ಟ್ರೈನ್​ನ ಬಾಗಿಲಿನ ಗ್ಲಾಸ್​​ ಒಡೆಯುತ್ತಿರುವ ದೃಶ್ಯ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಪ್ಲಾಟ್​ಫಾರಂನಲ್ಲಿ 7ರಿಂದ 8 ಸಾವಿರ ಜನರಿದ್ದರು. ಟ್ರೈನ್​ ಕಿಕ್ಕಿರಿದ ಪ್ರಯಾಣಿಕರಿದ್ದ ಕಾರಣ ಟ್ರೈನ್​​ ಅನ್ನು ಬಹಳ ಹೊತ್ತು ನಿಲ್ಲಿಸಿಲ್ಲ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ದಾಳಿ ನಡೆಸಿದ್ದರು. ಒಂದು ಗಂಟೆ ಕಾಲ ಪರಿಸ್ಥಿತಿ ಬಿಗಾಡಿಯಿಸಿದ್ದು, ಕೂಡಲೇ ನಮ್ಮ ಅಧಿಕಾರಿಗಳು ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಟ್ರೈನ್​ ತೆರಳು ಅನುವು ಮಾಡಿಕೊಟ್ಟಿದ್ದೇವೆ ಎಂದು ಸ್ಥಳೀಯ ಪೋಲಿಸ್​ ಠಾಣೆಯ ಪ್ರಭಾರಿ ಪುಷ್ಪಕ್​ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net