ತಗಡು ಕುಸಿದ ಬೆನ್ನಿಗೇ ಶಾಕ್​ ತಗುಲಿ ಸ್ಥಳದಲ್ಲೇ ಸಾವಿಗೀಡಾದ ಸಹೋದರರು..

ತಗಡು
Published on

ಬೆಳಗಾವಿ: ಬರೀ ತಗಡಷ್ಟೇ ಬಿದ್ದಿದ್ದಾಗಿದ್ದರೆ ಈ ಇಬ್ಬರು ಸಹೋದರರು ಬಹುಶಃ ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿ ಬದುಕುಳಿಯುತ್ತಿದ್ದರು. ಆದರೆ ಜತೆಗೆ ವಿದ್ಯುತ್​ ಶಾಕ್​ ಕೂಡ ತಗುಲಿದ್ದರಿಂದ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಬೆಳಗಾವಿ ಜಿಲ್ಲೆ ದೇಸೂರ್​ ಗ್ರಾಮದ ನಿವಾಸಿಗಳಾದ ಬಸವರಾಜ್ ವಡ್ಡರ್ ಹಾಗೂ ವೆಂಕಟೇಶ್ ವಡ್ಡರ್ ಮೃತಪಟ್ಟ ಸಹೋದರರು. ತಗಡಿನ ಶೆಡ್​ನಲ್ಲಿದ್ದ ಇವರಿಗೆ ಅದೇ ಮಾರಕವಾಗಿ ಪರಿಣಮಿಸಿದೆ.

ಸತತವಾಗಿ ಮಳೆ ಸುರಿಯುತ್ತಿದ್ದುದರಿಂದ ತಗಡಿನ ಛಾವಣಿ ಕುಸಿದಿದೆ. ಆದರೆ ಈ ಶೆಡ್​​ಗೆ ವಿದ್ಯುತ್ ಸಂಪರ್ಕ ಇದ್ದುದರಿಂದ, ಕುಸಿದ ತಗಡಿಗೆ ವಿದ್ಯುತ್ ತಗುಲಿ, ಸಹೋದರರಿಬ್ಬರಿಗೂ ಶಾಕ್​ ಹೊಡೆದಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net