ರಾಜಧಾನಿಯಲ್ಲಿ ಮತ್ತೆ ನಾಲ್ವರು ನಾಪತ್ತೆ; ಒಂದೇ ಅಪಾರ್ಟ್​ಮೆಂಟ್​​ನ ಯುವತಿ, ಮೂವರು ಮಕ್ಕಳು ಕಾಣೆ..!

Untitled-1
Published on

ಬೆಂಗಳೂರು: ಒಂದೇ ಶಾಲೆಯ ಒಂದೇ ತರಗತಿಯ ಮೂವರು ವಿದ್ಯಾರ್ಥಿಗಳ ನಾಪತ್ತೆ ಬೆನ್ನಿಗೆ ಮತ್ತೆ ನಾಲ್ವರು ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ. ಇಲ್ಲಿ ಒಂದೇ ಅಪಾರ್ಟ್​ಮೆಂಟ್​ನ ಯುವತಿ ಮಾತ್ರವಲ್ಲದೆ ಮೂವರು ಮಕ್ಕಳು ಕಾಣೆಯಾಗಿದ್ದಾರೆ.

ಸೋಲದೇವನಹಳ್ಳಿ ಪೊಲೀಸ್ ಠಾಣಾ ಎಜಿಬಿ ಲೇಔಟ್​​ನಲ್ಲಿರುವ ಕ್ರಿಸ್ಟಲ್ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ಓರ್ವ ಯುವತಿ ಅಮೃತವರ್ಷಿಣಿ (21) ಹಾಗೂ ರಾಯನ್​ ಸಿದ್ಧಾಂತ (12), ಭೂಮಿ (12) ಮತ್ತು ಚಿಂತನ್​ (12) ಕಾಣೆಯಾದವರು.

ನಾಲ್ವರೂ ಒಂದೇ ರೀತಿಯ ಪತ್ರ ಬರೆದಿಟ್ಟು ನಾಪತ್ತೆ ಆಗಿದ್ದಾರೆ. ಈ ಮಕ್ಕಳು ಇಂದು ಬೆಳಗಿನಿಂದ ಕಾಣಿಸದಿರುವುದರಿಂದ ಪಾಲಕರು ಸೋಲದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಕ್ಕಳು ಸ್ಪೋರ್ಟ್ಸ್​ ಐಟಂ ಜತೆಗೆ ಸ್ಲಿಪ್ಪರ್, ಬ್ರಶ್, ಟೂತ್​ಪೇಸ್ಟ್​, ವಾಟರ್ ಬಾಟಲ್​, ಕ್ಯಾಶ್​ ಹಿಡಿದುಕೊಂಡು ಬರಬೇಕು ಎಂದು ಪರಸ್ಪರ ಸಂವಹನ ಮಾಡಿಕೊಂಡಿರುವುದು ಪತ್ರದಲ್ಲಿ ಉಲ್ಲೇಖವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net