ಆಮ್​ ಆದ್ಮಿ ಪಾರ್ಟಿಗೆ ವಕೀಲ್​ ಸಾಬ್​; ಲಾಯರ್ ಕೆ.ಎನ್​. ಜಗದೀಶ್​ ನಾಳೆ ಆಪ್​ಗೆ ಸೇರ್ಪಡೆ

Lawyer
Published on

ಬೆಂಗಳೂರು: ಸೋಷಿಯಲ್​ ಮೀಡಿಯಾದಲ್ಲಿ ಯಾವುದಾದರೂ ಒಂದು ವಿಚಾರದ ಕುರಿತು ಮಾತನಾಡುತ್ತಲೇ ಜನರ ಗಮನ ಸೆಳೆದಿರುವ, ವಕೀಲ್ ಸಾಬ್​ ಎಂದು ಕರೆಸಿಕೊಳ್ಳುತ್ತಿರುವ ಲಾಯರ್ ಕೆ.ಎನ್​. ಜಗದೀಶ್​ ಆಮ್​ ಆದ್ಮಿ ಪಕ್ಷಕ್ಕೆ ಸೇರಲಿದ್ದಾರೆ.

ವಿಶೇಷವಾಗಿ ಮಾಜಿ ಸಚಿವರೊಬ್ಬರೊಂದಿಗಿನ ಯುವತಿಯ ಅಶ್ಲೀಲ ವಿಡಿಯೋ ವಿಚಾರವಾಗಿ, ಯುವತಿ ಪರವಾಗಿ ಮಾತನಾಡುತ್ತ ಗಮನ ಸೆಳೆದಿದ್ದ ಜಗದೀಶ್​, ಅಧಿಕೃತವಾಗಿ ರಾಜಕೀಯ ಪಕ್ಷಕ್ಕೆ ಸೇರುತ್ತಿದ್ದಾರೆ. ಆ ಮೂಲಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.

ಅಕ್ಟೋಬರ್‌ 11ರ ಸೋಮವಾರದಂದು ಮಧ್ಯಾಹ್ನ 1.00 ಗಂಟೆಗೆ ಬೆಂಗಳೂರಿನ ಪ್ರೆಸ್​​ಕ್ಲಬ್‌ನಲ್ಲಿ‌ ಜಗದೀಶ್‌ ಮಹಾದೇವ್ ಅವರನ್ನು ಆಮ್‌ ಆದ್ಮಿ ಪಾರ್ಟಿಗೆ ಬರಮಾಡಿಕೊಳ್ಳಲಾಗುತ್ತದೆ ಎಂದು ಆಮ್​ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net