ಗಾಂಜಾ ಬಿಸ್ಕೆಟ್​​ ಸೇವಿಸಿ ಇಬ್ಬರು ಸಹೋದರರು ಅಸ್ವಸ್ಥ

cannabis cookies
Published on

ಇಸ್ರೇಲ್‌: ಎರಡು ಮತ್ತು ಆರು ವರ್ಷ ವಯಸ್ಸಿನ ಇಬ್ಬರು ಸಹೋದರರು ಇಸ್ರೇಲ್‌ನ ರಾಮತ್ ಗನ್‌ನಲ್ಲಿ ಗಾಂಜಾ ತುಂಬಿದ ಬಿಸ್ಕೆಟ್​​ಗಳನ್ನು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಸ್ವಸ್ಥಗೊಂಡ ಇಬ್ಬರು ಸಹೋದರರನ್ನು ರಾಮತ್ ಗನ್‌ನ ಟೆಲ್ ಹಾಶೋಮರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರಿಗೂ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಗಾಂಜಾ ತುಂಬಿದ ಬಿಸ್ಕೆಟ್​​ಗಳನ್ನು ಸೇವಿಸಿದ ಮಕ್ಕಳು ತಲೆ ಸುತ್ತಿ ಬಿದ್ದಿದ್ದಾರೆ. ಕಿರಿಯ ಮಗು ಅರ್ಧ ಬಿಸ್ಕೆಟ್​​ ತಿಂದರೆ, ದೊಡ್ಡವನು ಸಂಪೂರ್ಣ ಬಿಸ್ಕೆಟ್​​ನ್ನು ತಿಂದಿದ್ದಾನೆ. ಆರು ವರ್ಷದ ಮಗು ಸಾಧಾರಣ ಸ್ಥಿತಿಯಲ್ಲಿದ್ದು, ಎರಡು ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಮಕ್ಕಳ ತಾಯಿ ಹೇಳಿದ್ದಾರೆ.

ಆದರೆ ಈ ಗಾಂಜಾ ಬಿಸ್ಕೆಟ್​ಗಳು ಮಕ್ಕಳ ಕೈಗೆ ಹೇಗೆ ಸಿಕ್ಕಿವೆ ಮತ್ತು ಗಾಂಜಾ ಬಿಸ್ಕೆಟ್​ ತಂದಿದ್ದು ಯಾರು ಎನ್ನುವ ಮಾಹಿತಿ ಇಲ್ಲ.

ಗಾಂಜಾದ ಖಾದ್ಯ ಸೇವನೆ ಮಕ್ಕಳಿಗೆ ಹಾನಿಕಾರಕವಾಗಬಹುದು. ಅಂತಹ ಖಾದ್ಯಗಳನ್ನು ಸ್ಪಷ್ಟವಾಗಿ ಲೇಬಲ್ ಮಾಡಬೇಕು. ಔಷಧಿಗಳು, ವಿಷಕಾರಿ ಉತ್ಪನ್ನಗಳನ್ನು ಮಕ್ಕಳಿಂದ ಸುರಕ್ಷಿತವಾಗಿ ಬೇರೆಕಡೆ ಸಂಗ್ರಹಿಸಬೇಕು ಎಂದು ಶಿಶುವೈದ್ಯರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net