ಪವನ್​ ಕಲ್ಯಾಣ್​ ನಟನೆಯ 'ಬ್ರೋ' ಪ್ರೀ-ರಿಲೀಸ್ ಈವೆಂಟ್‌ಗೆ ಫಿಕ್ಸ್​ ಆಯ್ತು ಸ್ಥಳ, ದಿನಾಂಕ!; ಶುರುವಾಯ್ತು ಫ್ಯಾನ್ಸ್​ ಅಬ್ಬರ

Untitled design - 2023-07-24T161036.240
Published on

ಆಂಧ್ರಪ್ರದೇಶ: ಪವರ್​ ಸ್ಟಾರ್​ ಪವನ್ ಕಲ್ಯಾಣ್ ಮತ್ತು ಸುಪ್ರೀಮ್ ಹೀರೋ ಸಾಯಿ ಧರಂ ತೇಜ್ ಅಭಿನಯದ 'ಬ್ರೋ' ಚಿತ್ರದ ಪ್ರೀ-ರಿಲೀಸ್​ ಈವೆಂಟ್​ ಯಾವಾಗ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದ ಪವನ್​ ಅಭಿಮಾನಿಗಳಿಗೆ ಇದೀಗ ಕೊನೆಗೂ ಚಿತ್ರತಂಡದಿಂದ ಉತ್ತರ ದೊರಕಿದೆ.

'ಬ್ರೋ' ಚಿತ್ರದ ಪ್ರೀ-ರಿಲೀಸ್ ಈವೆಂಟ್ ನಾಳೆ (ಜುಲೈ 25) ರಂದು ಹೈದರಾಬಾದ್‌ನ ಶಿಲ್ಪಕಲಾ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪೋಸ್ಟರ್​ ಬಿಡುಗಡೆಗೊಳಿಸುವ ಮೂಲಕ ಮಾಹಿತಿ ನೀಡಿದೆ. ಸುದ್ದಿಯನ್ನು ತಿಳಿದ ಪವನ್​ ಕಲ್ಯಾಣ್​ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟರ್​ ಅನ್ನು ಶೇರ್​ ಮಾಡಿಕೊಂಡಿದ್ದಾರೆ. ಸಮುದ್ರಕನಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತು ಕೇತಿಕಾ ಶರ್ಮಾ ನಟಿಯರಾಗಿ ಅಭಿನಯಿಸಿದ್ದಾರೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ಈ ಚಿತ್ರದಲ್ಲಿ ಬ್ರಹ್ಮಾನಂದಂ, ರೋಹಿಣಿ ಮೊಲ್ಲೇಟಿ, ಸುಬ್ಬರಾಜು, ತಣಿಕೆಲ್ಲ ಭರಣಿ ಮತ್ತು ರಾಜಾ ಚೆಂಬೋಲು ಇತರ ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾಗೆ ಥಮನ್ ಅವರ ಸಂಗೀತ ಸಾಥ್​ ನೀಡಿದ್ದು, ಇದೇ ಶುಕ್ರವಾರ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net