ಸಂಸದ ರಾಹುಲ್ ಗಾಂಧಿ ಬಂದ್ರೇನೋ ಅಂತ ನೋಡಿದ್ರೆ, ಹೆಲಿಕಾಪ್ಟರ್​ನಿಂದ ಇಳಿದದ್ದು 'ಮದುಮಗಳು' !

Bride arrives by helicopter in Wayanad
Published on

ಪುಲ್​ಪಲ್ಲಿ (ಕೇರಳ): ಹೊಸ ತಲೆಮಾರಿನ ವಿವಾಹ ಟ್ರೆಂಡ್​ಗಳು ಅಚ್ಚರಿಯನ್ನು ಉಂಟುಮಾಡುವಂಥವು. ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಕ್ಷಣಗಳು ಯಾವತ್ತೂ ನೆನಪಿರಬೇಕು ಎಂಬ ಕಾರಣಕ್ಕೆ ಅಚ್ಚಳಿಯದ ಅಚ್ಚರಿಯನ್ನು ಜೋಡಿಸುತ್ತಾರೆ. ಅಂಥ ಅಚ್ಚರಿಯಲ್ಲಿ ಹೆಲಿಕಾಪ್ಟರ್​ನಲ್ಲಿ ಆಗಮಿಸಿದ ಮದುಮಗಳ ಈ ಕಥೆ ಕೂಡ ಸೇರ್ಪಡೆ.

ವಯನಾಡು ಜಿಲ್ಲೆಯ ಪುಲ್​ಪಲ್ಲಿ ಎಂಬಲ್ಲಿರು ಪಯಸ್ಸಿರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಅಪರಾಹ್ನ ಹೆಲಿಕಾಪ್ಟರ್ ಬಂದಿಳಿದದ್ದು ನೋಡಿ ಸ್ಥಳೀಯರೆಲ್ಲ ಅಚ್ಚರಿಯಿಂದ ನೋಡತೊಡಗಿದರು. ಸಂಸದ ರಾಹುಲ್ ಗಾಂಧಿ ಬಂದ್ರೇನೋ ಅಂತ ಜನ ನೋಡಿದ್ರೆ ಆ ಹೆಲಿಕಾಪ್ಟರ್​ನಿಂದ ಇಳಿದು ಬಂದದ್ದು 'ಮದುಮಗಳು'! ಸ್ಥಳೀಯರು ಈಗ ನಿಜಕ್ಕೂ ಕಣ್ಣರಳಿಸಿಯೇ ನೋಡತೊಡಗಿದರು.

ಇಡುಕ್ಕಿಯ ವಂಡನ್​ಮೇಡು ನಿವಾಸಿ ಲ್ಯೂಕ್ ಥಾಮಸ್ ಮತ್ತು ಲಿಸ್ಸಿ ಅವರ ಪುತ್ರಿ ಮರಿಯಾ ಲ್ಯೂಕ್​ ಆ ಮದುಮಗಳು. ಆಕೆಯ ವಿವಾಹ ಕಾರ್ಯಕ್ರಮ ಅಡಿಕೊಳ್ಳಿ ಸೇಂಟ್ ಸೆಬಾಸ್ಟಿಯನ್ ಚರ್ಚ್​ನಲ್ಲಿ ಸ್ಥಳೀಯ ನಿವಾಸಿ ಟೋಮಿ ಮತ್ತು ಡೋಲಿ ಅವರ ಪುತ್ರ ವೈಶಾಖ್ ಜತೆಗೆ ನಿಗದಿಯಾಗಿತ್ತು. ಅದಕ್ಕಾಗಿ ಆಕೆ ಬಂದಿಳಿದ ಕ್ಷಣ ಇದಾಗಿದ್ದು, ಸದ್ಯ ಟಾಕ್ ಆಫ್ ದ ಟೌನ್ ಆಗಿದೆಯಂತೆ! (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net