ಟ್ರಾಫಿಕ್ ಸಿಗ್ನಲ್​ನ ಬ್ಯಾಟರಿ ಕಳವು - ಶಂಕರಮಠ ಜಂಕ್ಷನ್​ನಲ್ಲಿ ಕೃತ್ಯ

traffic-lights
Published on

ಬೆಂಗಳೂರು: ಶಂಕರಮಠ ವೃತ್ತದ ಬಳಿ ದುಷ್ಕರ್ವಿುಗಳು ಟ್ರಾಫಿಕ್ ಸಿಗ್ನಲ್​ನ ಬ್ಯಾಟರಿ ಕಳವು ಮಾಡಿದ್ದಾರೆ. ವಿಜಯನಗರ ಸಂಚಾರ ಠಾಣೆಯ ಮುಖ್ಯಪೇದೆ ಚಂದ್ರಶೇಖರಯ್ಯ ಈ ಬಗ್ಗೆ ಬಸವೇಶ್ವರನಗರ ಠಾಣೆಗೆ ದೂರು ನೀಡಿದ್ದಾರೆ.

ಶನಿವಾರ ಬೆಳಗ್ಗೆ 6.30ರಲ್ಲಿ ಚಂದ್ರಶೇಖರಯ್ಯ ಶಂಕರಮಠ ಜಂಕ್ಷನ್​ನಲ್ಲಿ ಕರ್ತವ್ಯಕ್ಕೆ ಹಾಜರಾದಾಗ ಸಿಗ್ನಲ್ ದೀಪಗಳು ಕೆಲಸ ಮಾಡುತ್ತಿರಲಿಲ್ಲ. ತಾಂತ್ರಿಕ ಸಿಬ್ಬಂದಿಯನ್ನು ಕರೆಸಿ ಪರಿಶೀಲಿಸಿದಾಗ ವಿದ್ಯುತ್ ಪೂರೈಕೆಯಾಗದಿರುವುದು ಕಂಡು ಬಂದಿತ್ತು.

ಬ್ಯಾಟರಿ ಬಾಕ್ಸ್ ತೆಗೆದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಕಳ್ಳರು ಬಾಕ್ಸ್​ನ ಬೀಗ ಮುರಿದು ಬ್ಯಾಟರಿ ಕದ್ದೊಯ್ದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ರಸ್ತೆಯಲ್ಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ಆರೋಪಿಗಳ ಮುಖಚಹರೆ ಗುರುತು ಪತ್ತೆಯಾಗಿದೆ. ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಬಸವೇಶ್ವರನಗರ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net